Breaking News

ಹಾಸನ : ನೀರಿನಲ್ಲಿ ಮುಳುಗಿ 19 ವರ್ಷದ ಯುವತಿ ಸಾವು

ಹಾಸನ: ಯುವತಿಯೋರ್ವಳು ಹೇಮಾವತಿ ನದಿ ಹಿನ್ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ಹಾಸನದ ಗೊರೂರಿನಲ್ಲಿ ನಡೆದಿದೆ.

ಮೃತ ಯುವತಿಯನ್ನು ಗೊರೂರು ಅರಳಿಕಟ್ಟೆ ಗ್ರಾಮದ ಗಿರೀಶ್ ಎಮಬವರ ಪುತ್ರಿ ನಿತ್ಯ(19) ಎಂದು ಗುರುತಿಸಲಾಗಿದೆ. ನಿತ್ಯ ಸಂಬಂಧಿಕರೊಂದಿಗೆ ಹನುಮ ಜಯಂತಿ ಪೂಜೆಗಾಗಿ ಗ್ರಾಮದ ಆಂಜನೇಯಸ್ವಾಮಿ ದೇವಸ್ಥಾನಕ್ಕೆ ತೆರಳಿದ್ದಳು. ಈ ವೇಳೆ ಪೂಜೆ ಸಲ್ಲಿಸಿ ಹೇಮಾವತಿ ಹಿನ್ನೀರಿನಲ್ಲಿ ಆಟವಾಡುತ್ತಿದ್ದಾಗ ಆಕಸ್ಮಿಕವಾಗಿ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾಳೆ. ಯುವತಿಯ ಮೃತದೇಹಕ್ಕಾಗಿ ಅಗ್ನಿಶಾಮಕದಳದಿಂದ ಶೋಧಕಾರ್ಯ ನಡೆಯುತ್ತಿದೆ.

ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಗೊರೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

Follow us on Social media

About the author

×

Hello!

If you want to receive regular new updates, please click whatsapp icon and save our number on your phone. You will be getting regular news updates on WhatsApp.

×