Breaking News

ಬೆಳ್ತಂಗಡಿ: ಮಿತ್ತಬಾಗಿಲುನಲ್ಲಿ 4 ಎಕರೆಯಷ್ಟು ಭಾರಿ ಭೂಕುಸಿತ

ಬೆಳ್ತಂಗಡಿ: ಕಳೆದ ಕೆಲವು ದಿನಗಳಿಂದ ತಾಲೂಕಿನಾದ್ಯಂತ ಭಾರೀ ಮಳೆಯಾಗುತ್ತಿದ್ದು, ಇಂದು ಸಂಜೆ ಮಿತ್ತಬಾಗಿಲು ಗ್ರಾಮದ ಕೊಲ್ಲಿ ನಡ್ತಿಕಲ್ಲು ಆಲದಕಾಡು ಎಂಬಲ್ಲಿ ಕಾಡಿನ ನಡುವೆ ಭಾರಿ ಭೂ ಕುಸಿತ ಸಂಭವಿಸಿದೆ.

ಘಟನೆಯಲ್ಲಿ ಕುದುರೆಮುಖ ವನ್ಯಜೀವಿ ವಿಭಾಗಕ್ಕೆ ಸೇರಿದ ಸುಮಾರು 4 ಎಕರೆಯಷ್ಟು ಪ್ರದೇಶದ ಮಣ್ಣು ಜಾರಿ ಕೆಳಗೆ ಬಂದಿರುವುದು ಕಂಡು ಬಂದಿದೆ.

ಇಂದು ಭೂಕುಸಿತ ಸಂಭವಿಸಿದ ಜಾಗ ಜನ ವಸತಿ ಪ್ರದೇಶದಿಂದ ಸುಮಾರು 3 ಕಿ.ಮೀ ಗಿಂತಲೂ ಹೆಚ್ಚು ದೂರದಲ್ಲಿರುವುದರಿಂದ ಯಾವುದೇ ರೀತಿಯ ಪ್ರಾಣಹಾನಿ ಸಂಭವಿಸಿಲ್ಲ. ಹೆಚ್ಚಿನ ಮಾಹಿತಿಯನ್ನು ನೀರಿಕ್ಷಿಸಲಾಗಿದೆ.

Follow us on Social media

About the author

×

Hello!

If you want to receive regular new updates, please click whatsapp icon and save our number on your phone. You will be getting regular news updates on WhatsApp.

×