Breaking News

ಗ್ರೀನ್ ಜೋನ್ ಹಾವೇರಿಗೂ ಬಂತು ಕೊರೋನಾ, ರಾಜ್ಯದ ಸೋಂಕಿತರ ಸಂಖ್ಯೆ 642ಕ್ಕೆ ಏರಿಕೆ

ಬೆಂಗಳೂರು : ರಾಜ್ಯದಲ್ಲಿ ಕೊರೋನಾ ಪ್ರಕರಣ ಸಂಖ್ಯೆಯಲ್ಲಿ ಮತ್ತೆ ಹೆಚ್ಚಳವಾಗಿದ್ದು ಈ ದಿನ ಮಧ್ಯಾಹ್ನದವರೆಗೆ ಒಟ್ತಾರೆ 28 ಪ್ರಕರಣಗಳು ವರದಿಯಾಗಿದೆ. ನಿನ್ನೆ ಸಂಜೆ ದಾವಣಗೆರೆಯಲ್ಲಿ ದಾಖಲಾಗಿದ್ದ 21 ಪ್ರಕರಣಗಳು ಸಹ ಇದರಲ್ಲಿ ಸೇರಿದೆ. ಈ  ಪ್ರಕಾರ ರಾಜ್ಯದಲ್ಲಿ ಒಟ್ಟಾರೆ ಸೋಂಕಿತರ ಸಂಖ್ಯೆ 642ಕ್ಕೆ ತಲುಪಿದೆ.

ಇಂದು ಬೆಳಗಿನಿಂದ ಮತ್ತೆ ಏಳು ಪ್ರಕರಣಗಳು ವರದಿಯಾಗಿದ್ದು ಅದರಲ್ಲಿ ಹಾವೇರಿಯಲ್ಲಿ ಒಂದು, ಕಲಬುರಗಿ ಹಾಗೂ ಮಂಡ್ಯದಲ್ಲಿ ತಲಾ ಎರಡು, ಚಿಕ್ಕಬಳ್ಲಾಪುರ ಹಾಗೂ ವಿಜಯಪುರಗಳಲ್ಲಿ ತಲಾ ಒಂದು ಪ್ರಕರಣಗಳು ಸೇರಿದೆ.

ಕೊರೋನಾ ಸೋಂಕು ಕಾಣಿಸಲು ಪ್ರಾರಂಬವಾದಾಗಿನಿಂದ ಗ್ರೀನ್ ಜೋನ್ ನಲ್ಲಿದ್ದ ಹಾವೇರಿಯಲ್ಲಿ ಸಹ ಒಬ್ಬ ಸೋಂಕಿತ ಪತ್ತೆಯಾಗಿರುವುದು ಆತಂಕಕ್ಕೆ ಕಾರಣವಾಗಿದೆ. 

ಇದೇ ವೇಳೆ ಇಂದು  11 ಜನರು ಸಂಪೂರ್ಣ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಇದುವರೆಗೆ ರಾಜ್ಯದಲ್ಲಿ 04 ಜನರು ಕೊರೊನಾ ಮುಕ್ತವಾಗಿದ್ದಾರೆ.

Follow us on Social media

About the author

×

Hello!

If you want to receive regular new updates, please click whatsapp icon and save our number on your phone. You will be getting regular news updates on WhatsApp.

×