Breaking News

ಕೊರೊನಾ ಮಹಾಮಾರಿ ವಿರುದ್ದ ಸಮರಕ್ಕೆ ಸನ್ನದ್ದಗೊಳ್ಳಲು ಸಾರ್ಕ್ ದೇಶಗಳಿಗೆ ಪ್ರಧಾನಿ ಮೋದಿ ಕರೆ

ನವದೆಹಲಿ : ದಕ್ಷಿಣ ಏಷ್ಯಾ ಪ್ರಾದೇಶಿಕ ಸಹಕಾರ ಸಂಘಟನೆ (ಸಾರ್ಕ್) ದೇಶಗಳಿಗೆ ಭಾರತ ಸ್ಪಷ್ಟ ಸಂದೇಶ ರವಾನಿಸಿದೆ. ವಿಶ್ವದ ಜನಸಂಖ್ಯೆಯ ಐದನೇ ಒಂದು ಭಾಗದಷ್ಟು ಜನ ಸಮೂಹ ಈ ಪ್ರದೇಶದಲ್ಲಿದ್ದು, ಕೊರೊನಾ ವೈರಸ್ (ಕೋವಿಡ್ -೧೯) ಮಹಾಮಾರಿಯ ವಿರುದ್ದ ಸಮರ ಸಾರಲು ಸಜ್ಜುಗೊಳ್ಳಬೇಕು ಆದರೆ, ಯಾವುದೇ ಆತಂಕಕ್ಕೆ ಒಳಗಾಗಬಾರದು ಎಂದು ಹೇಳಿದೆ.
ಸಾರ್ಕ್ ಸದಸ್ಯ ದೇಶಗಳೊಂದಿಗೆ ಭಾನುವಾರ ನಡೆಸಲಾದ ವಿಡಿಯೋ ಕಾನ್ಫರೆನ್ಸ್ ನಲ್ಲಿ ಪ್ರಧಾನಿ ನರೇಂದ್ರ ಮೋದಿ ಮಾತನಾಡಿ, ಸನ್ನದ್ದವಾಗಿರಿ, ಆದರೆ, ಯಾವುದೇ ಆತಂಕಕ್ಕೆ ಒಳಗಾಗಬೇಡಿ” ಎಂದು ಸಾರ್ಕ್ ಸಂಘಟನೆಯ ಸದಸ್ಯ ದೇಶಗಳಿಗೆ ಭಾರತ ನೀಡುವ ಸಂದೇಶ ಎಂದು ಹೇಳಿದರು.
ವಿಡಿಯೋ ಕಾನ್ಫರೆನ್ಸ್ ನಲ್ಲಿ ಆರಂಭಿಕ ಭಾಷಣ ಮಾಡಿದ ಪ್ರಧಾನಿ ಮೋದಿ, “ಇದುವರೆಗೆ ಸಾರ್ಕ್ ವಲಯದ ಪ್ರದೇಶಗಳಲ್ಲಿ ೧೫೦ ಕ್ಕಿಂತ ಕಡಿಮೆ ಕೋವಿಡ್ -೧೯ ಪ್ರಕರಣಗಳು ವರದಿಯಾಗಿವೆ. ಆದರೆ ವಿಶ್ವದ ಜನಸಂಖ್ಯೆಯ ಐದನೇ ಒಂದು ಭಾಗ ನಮ್ಮ ವಲಯದಲ್ಲಿ ವಾಸವಾಗಿರುವ ಕಾರಣ ನಾವು ಹೆಚ್ಚು ಜಾಗರೂಕರಾಗಿರಬೇಕು ಎಂದು ಸಲಹೆ ನೀಡಿದರು.
ಈ ಪ್ರದೇಶದಲ್ಲಿ ಆರೋಗ್ಯ ಸಂರಕ್ಷಣೆಯ ಸದುಪಯೋಗ ಸಂಬಂಧ ಹಲವು ಗಂಭೀರ ಸವಾಲುಗಳಿವೆ. ಹಾಗಾಗಿ ನಾವೆಲ್ಲರೂ ಒಟ್ಟಾಗಿ ಸನ್ನದ್ದವಾಗಿರಬೇಕು, ಐಕ್ಯತೆಯಿಂದ ಕೆಲಸ ಮಾಡಬೇಕು, ಒಟ್ಟಾಗಿ ಕೆಲಸ ಮಾಡಿ, ಯಶಸ್ವಿಯಾಗಲು ಕರೆ ನೀಡಿದರು.
ಯಾವುದೇ ಭಯಭೀತಿಯಿಲ್ಲದೆ ಜಾಗೃತೆವಹಿಸಿ, ಕೊರೊನಾ ವೈರಸ್ ಎದುರಿಸಲು ಭಾರತ ತನ್ನ ವೈದ್ಯಕೀಯ ಮೂಲಸೌಕರ್ಯವನ್ನು ವೇಗವಾಗಿ ಸುಧಾರಿಸಿಕೊಂಡಿದೆ ಎಂದು ಮೋದಿ ಹೇಳಿದರು. “ಸಿದ್ಧರಾಗಿರಿ, ಆದರೆ ಭಯಪಡಬೇಡಿ” ಎಂಬುದು ನಮ್ಮ ಮಾರ್ಗದರ್ಶಕ ಮಂತ್ರವಾಗಬೇಕು ಎಂದರು. ಯಾವುದೇ ಸಮಸ್ಯೆಯನ್ನು ಲಘುವಾಗಿ ಪರಿಗಣಿಸದೆ ಜಾಗ್ರತೆವಹಿಸಬೇಕು. ತುರ್ತು ಪ್ರತಿಕ್ರಿಯಿಸುವುದನ್ನು ತಡೆಯಲು ತಕ್ಷಣದಿಂದಲೇ ಕಾರ್ಯಪ್ರವೃತ್ತವಾಗ ಎಂದು ಪ್ರಧಾನಿ ಸಾರ್ಕ್ ಸದಸ್ಯ ದೇಶಗಳಿಗೆ ಕಿವಿ ಮಾತು ಹೇಳಿದರು.
ವೈದ್ಯಕೀಯ ಸಿಬ್ಬಂದಿಗೆ ತರಬೇತಿ ಸೇರಿದಂತೆ ಆರೋಗ್ಯ ರಕ್ಷಣೆ ವ್ಯವಸ್ಥೆಗಳನ್ನು ಶೀಘ್ರವಾಗಿ ಸುಧಾರಿಸಲು ಪ್ರಯತ್ನಿಸಲಾಗುತ್ತಿದೆ ಎಂದು ಪ್ರಧಾನಿ ಮೋದಿ ಹೇಳಿದರು.
ಕರೋನವೈರಸ್ ಸಾಂಕ್ರಾಮಿಕ ರೋಗವನ್ನು ಎದುರಿಸಲು ಬಲಿಷ್ಠ ಜಂಟಿ ಕಾರ್ಯತಂತ್ರ ರೂಪಿಸಲು ಮೋದಿ ಸಾರ್ಕ್ ದೇಶಗಳ ನಾಯಕರಿಗೆ ವಿಡಿಯೋ ಕಾನ್ಫರೆನ್ಸ್‌ಗೆ ಕರೆ ನೀಡಿದ್ದರು. ಮೋದಿ ಅವರ ಟ್ವೀಟ್ ಗೆ ನೇಪಾಳಿ ಪ್ರಧಾನಿ ಕೆ.ಪಿ.ಶರ್ಮಾ ಓಲಿ, ಭೂತಾನ್ ಪ್ರಧಾನಿ ಲೊಟ್ಟೆ ಶೆರಿಂಗ್, ಶ್ರೀಲಂಕಾದ ಪ್ರಧಾನಿ ಗೋಟಬಯಾ ರಾಜಪಕ್ಸೆ, ಬಾಂಗ್ಲಾದೇಶ ಪ್ರಧಾನಿ, ಶೇಖ್ ಹಸೀನಾ, ಮಾಲ್ಡೀವ್ಸ್ ಅಧ್ಯಕ್ಷ ಇಬ್ರಾಹಿಂ ಮೊಹಮ್ಮದ್ ಸೊಲಿಹ್, ಅಫ್ಘಾನಿಸ್ತಾನ ಸರ್ಕಾರ ಮತ್ತು ಪಾಕಿಸ್ತಾನ ಸರ್ಕಾರಗಳು ಸಕಾರಾತ್ಮಕವಾಗಿ ಪ್ರತಿಕ್ರಿಯಿಸಿದ್ದವು.

Source : UNI

Follow us on Social media

About the author

×

Hello!

If you want to receive regular new updates, please click whatsapp icon and save our number on your phone. You will be getting regular news updates on WhatsApp.

×