Breaking News

ಆಗಸ್ಟ್ .31ರವರೆಗೆ ಶಾಲಾ, ಕಾಲೇಜಿಲ್ಲ – ಆಗಸ್ಟ್ .5ರಿಂದ ಜಿಮ್ ಓಪನ್

ನವದೆಹಲಿ: ಆರ್ಥಿಕ ಚಟುವಟಿಕೆಗೆ ಉತ್ತೇಜನ ನೀಡುವ ಸಲುವಾಗಿ ಲಾಕ್‍ಡೌನ್‍ನಲ್ಲಿ ಮತ್ತಷ್ಟು ಸಡಿಲಿಕೆ ಮಾಡಿ ಪ್ರಧಾನಿ ಮೋದಿ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ನಿರ್ಧರಿಸಿದೆ. ಆಗಸ್ಟ್ 1ರಿಂದ ಅನ್‍ಲಾಕ್ 3 ಜಾರಿಗೆ ಬರ್ತಿದ್ದು, ಈ ಸಂಬಂಧ ಕೇಂದ್ರ ಗೃಹ ಸಚಿವಾಲಯ ಒಂದಷ್ಟು ಮಾರ್ಗಸೂಚಿ ಪ್ರಕಟಿಸಿದೆ.

ಯಾವುದಕ್ಕೆ ರಿಲ್ಯಾಕ್ಸ್..? 
* ಆಗಸ್ಟ್ 1ರಿಂದಲೇ ನೈಟ್ ಕರ್ಫ್ಯೂ ರದ್ದು
* ಆಗಸ್ಟ್ 5ರಿಂದ ಯೋಗ ಕ್ಲಾಸ್, ಜಿಮ್ ಓಪನ್
* ಸಾಮಾಜಿಕ ಅಂತರದೊಂದಿಗೆ ಸ್ವಾತಂತ್ರ್ಯೋತ್ಸವ ಆಚರಣೆ
* ವಂದೇ ಭಾರತ್ ಮಿಷನ್ ಅಡಿ ಅಂತಾರಾಷ್ಟ್ರೀಯ ವಿಮಾನಗಳ ನಿಯಮಿತ ಸಂಚಾರ

ಯಾವುದಕ್ಕೆ ನಿರ್ಬಂಧ ಮುಂದುವರಿಕೆ
* ಆಗಸ್ಟ್ 31ರವರೆಗೆ ಶಾಲೆ, ಕಾಲೇಜು, ತರಬೇತಿ ಸಂಸ್ಥೆಗಳು
* ಮೆಟ್ರೋ ರೈಲು, ಥಿಯೇಟರ್, ಸ್ವಿಮಿಂಗ್ ಪೂಲ್
* ಬಾರ್, ಆಡಿಟೋರಿಯಂ, ಮನರಂಜನಾ ಪಾರ್ಕ್‍ಗಳು
* ಸಾಮಾಜಿಕ/ರಾಜಕೀಯ/ಧಾರ್ಮಿಕ/ಕ್ರೀಡೆ/ಮನರಂಜನೆ ಕಾರ್ಯಕ್ರಮಗಳು
* ಕಂಟೈನ್ಮೆಂಟ್ ಝೋನ್‍ಗಳಲ್ಲಿ ಮತ್ತಷ್ಟು ನಿಗಾ, ಕಠಿಣ ನಿರ್ಬಂಧ

ಇವೆಲ್ಲವುಗಳ ಓಪನ್‍ಗೆ ರಾಜ್ಯಗಳೊಂದಿಗೆ ಮತ್ತಷ್ಟು ಗಂಭೀರ ಚರ್ಚೆ ಅಗತ್ಯವಿದೆ ಅಂತ ಗೃಹ ಸಚಿವಾಲಯ ಹೇಳಿದೆ. ರಾಜ್ಯದಲ್ಲೂ ಕೇಂದ್ರದ ಮಾರ್ಗಸೂಚಿಯೇ ಅನ್ವಯ ಆಗಲಿದೆ.

Follow us on Social media

About the author

×

Hello!

If you want to receive regular new updates, please click whatsapp icon and save our number on your phone. You will be getting regular news updates on WhatsApp.

×