ನವದೆಹಲಿ: ಇಂಡಿಯಾ ಬದಲಿಗೆ ಭಾರತ ಅಥವಾ ಹಿಂದೂಸ್ಥಾನ ಎಂದು ಹೆಸರು ಬದಲಿಸಬೇಕೆಂದು ಸಲ್ಲಿಸಲಾಗಿದ್ದ ಅರ್ಜಿಯ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಮುಂದೂಡಿದೆ.
ದೆಹಲಿಯ ನಮಃ ಎಂಬುವರು ಸುಪ್ರೀಂ ಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು. ವಿಚಾರಣೆ ಕೈಗೊಂಡಿದ್ದ ಸುಪ್ರೀಂ ಯಾವುದೇ ದಿನಾಂಕವನ್ನು ನೀಡದೆ ವಿಚಾರಣೆಯನ್ನು ಮುಂದೂಡಿದೆ.
ಭಾರತೀಯ ಸಂವಿಧಾನಕ್ಕೆ ತಿದ್ದುಪಡಿ ತರುವ ಮೂಲಕ ಇಂಡಿಯಾ ಎಂಬ ಹೆಸರನ್ನು ಭಾರತ ಅಥವಾ ಹಿಂದೂಸ್ಥಾನ ಎಂದು ಬದಲಾಯಿಸುವಂತೆ ನಮಃ ಅರ್ಜಿ ಸಲ್ಲಿಸಿದ್ದರು. ಅರ್ಜಿಯಲ್ಲಿ ಮುಘಲ್ ದೊರೆಗಳ ಆಡಳಿತದಲ್ಲಿ ಹಿಂದೂಸ್ಥಾನವಾಗಿದ್ದ ನಮ್ಮ ದೇಶವು, ಬ್ರಿಟಿಷರ ಆಳ್ವಿಕೆಯ ಕಾಲದಲ್ಲಿ ಇಂಡಿಯಾ ಆಗಿ ಬದಲಾಗಿದೆ. ಬ್ರಿಟಿಷರು ಇಟ್ಟ ಹೆಸರು ನಮಗೆ ಬೇಡ. ಹೀಗಾಗಿ ಭಾರತ ಅಥವಾ ಹಿಂದೂಸ್ಥಾನವಾಗಿ ಬದಲಿಸುವಂತೆ ಕೋರಿದ್ದರು.
Follow us on Social media