Breaking News

67 ಕೋಟಿ ರೂಪಾಯಿ ವಂಚನೆ, ಫೋರ್ಜರಿ ಪ್ರಕರಣದಲ್ಲಿ ಬಿಜಿಪಿ ನಾಯಕನ ವಿರುದ್ದ ಸಿಬಿಐ ಕೇಸ್!

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾಗೆ 67 ಕೋಟಿ ರೂಪಾಯಿ ವಂಚನೆ ಮಾಡಿರುವ ಪ್ರಕರಣದಲ್ಲಿ ಬಿಜೆಪಿ ನಾಯಕ ಮೋಹಿತ್ ಕಾಂಬೋಜ್ ವಿರುದ್ಧ ಎಫ್ಐಆರ್ ದಾಖಲಾಗಿದೆ. 

67 ಕೋಟಿ ಮೊತ್ತದ ಸಾಲ ಮಾಡಿ ವಂಚನೆ ಮಾಡಿರುವ ಆರೋಪದಡಿ ಬಿಜೆಪಿ ನಾಯಕ ಮೋಹಿತ್ ಕಾಂಬೋಜ್ ಅಷ್ಟೇ ಅಲ್ಲದೇ ಈ ಹಿಂದಿನ ಅವ್ಯಾನ್ ಓವರ್ಸೀಸ್ ಪ್ರೈವೆಟ್ ಲಿಮಿಟೆಡ್ ಹಾಗೂ ಕೆಬಿಜೆ ಹೊಟೆಲ್ಸ್ ಗೋವಾ ಸಂಸ್ಥೆಗಳನ್ನೂ ಎಫ್ಐಆರ್ ನಲ್ಲಿ ಹೆಸರಿಸಲಾಗಿದೆ. ಆದರೆ ಈ ಆರೋಪಗಳನ್ನು ಬಿಜೆಪಿ ನಾಯಕ ಮೋಹಿತ್ ಕಾಂಬೋಜ್ ನಿರಾಕರಿಸಿದ್ದು, ಸಂಸ್ಥೆಯ ಜೊತೆಗೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ 2018 ರಲ್ಲೇ ಒನ್ ಟೈಮ್ ಸೆಟಲ್ಮೆಂಟ್ ಮಾಡಿಕೊಂಡಿದ್ದು, ಆಗಲೇ 30 ಕೋಟಿ ರೂಪಾಯಿಗಳನ್ನು ನೀಡಲಾಗಿದೆ. ಬಾಕಿ ಉಳಿಸಿಕೊಂಡಿಲ್ಲ ಎಂಬ ಪ್ರಮಾಣಪತ್ರ ನೀಡಿದ ಬಳಿಕ ಎರಡು ವರ್ಷಗಳ ನಂತರ ಬ್ಯಾಂಕ್ ಈ ಆರೋಪ ಮಾಡುತ್ತಿದೆ. ವೈಯಕ್ತಿಕ ದ್ವೇಷದಿಂದ ನನ್ನ ವಿರುದ್ಧ ಷಡ್ಯಂತ್ರ ನಡೆಸಲಾಗುತ್ತಿದೆ, ಸಿಬಿಐ ತನಿಖೆ ನಡೆಸುತ್ತಿರುವುದರಿಂದ ತನಿಖಾಧಿಕಾರಿಗಳೊಂದಿಗೆ ಸಹಕರಿಸುತ್ತೇನೆ ಎಂದು ಆರೋಪಿಸಿದ್ದಾರೆ. 

ಕಾಂಬೋಜ್ ಅವರು ಗ್ಯಾರೆಂಟರ್ ಹಾಗೂ ಹ್ಯಾಂಡ್ ಕ್ರಾಫ್ಟ್ ಚಿನ್ನಾಭರಣಗಳನ್ನು ದುಬೈ, ಸಿಂಗಪೂರ್, ಹಾಂಕ್ ಕಾಂಗ್ ಹಾಗೂ ಇತರ ರಾಷ್ಟ್ರಗಳಿಗೆ ರಫ್ತು ಮಾಡವ ಅವ್ಯಾನ್ ಓವರ್ ಸೀಸ್ ನಲ್ಲಿ ಮ್ಯಾನೇಜಿಂಗ್ ಡೈರೆಕ್ಟರ್ ಆಗಿದ್ದರು ಎಂದು ಬ್ಯಾಂಕ್ ಆರೋಪಿಸಿದೆ. ಈ ವಂಚನೆ, ಫೋರ್ಜರಿ, ಕ್ರಿಮಿನಲ್ ಷಡ್ಯಂತ್ರಗಳ ಆರೋಪದ ಆಧಾರದಲ್ಲಿ ಸಿಬಿಐ ಕಾಂಬೋಜ್ ಸೇರಿದಂತೆ ಇತರ ಆರೋಪಿಗಳ ಕಚೇರಿಯ ಪ್ರದೇಶಗಳಲ್ಲಿ ಶೋಧಕಾರ್ಯ ನಡೆಸಿದೆ. ಕಾಂಬೋಜ್ ಜೊತೆಗೆ ಜಿತೇಂದ್ರ ಗುಲ್ಶನ್ ಕಪೂರ್, ನರೇಶ್ ಮದನ್ ಜಿ, ಕಪೂರ್ (ಮೃತ) ಸಿದ್ಧಾಂತ್ ಬಗ್ಲಾ, ಇರ್ತೇಶ್ ಮಿಶ್ರಾ ಅವರುಗಳನ್ನೂ ಎಫ್ಐಆರ್ ನಲ್ಲಿ ಆರೋಪಿಗಳೆಂದು ಗುರುತಿಸಲಾಗಿದ್ದು ಐಪಿಸಿ ಸೆಕ್ಷನ್ 120-ಬಿ (ಕ್ರಿಮಿನಲ್ ಷಡ್ಯಂತ್ರ) 406 (ಫೋರ್ಜರಿ) 471 (ನಕಲಿ ದಾಖಲೆಗಳನ್ನು ನೈಜ ದಾಖಲೆಗಳೆಂದು ನೀಡಿರುವುದು)ಹಾಗೂ ಭ್ರಷ್ಟಾಚಾರ ನಿಗ್ರಹ ಕಾಯ್ದೆಯಡಿ ಬ್ಯಾಂಕ್ ನೀಡಿರುವ ದೂರಿನ ಆಧಾರದಲ್ಲಿ ಕೇಸ್ ದಾಖಲಿಸಲಾಗಿದೆ. ಈ ಆರೋಪಿಗಳು ಸಾರ್ವಾನಿಕ ಹಣವನ್ನು ದುರುಪಯೋಗಪಡಿಸಿಕೊಂಡಿದ್ದಾರೆ. ಒನ್ ಟೈಮ್ ಸೆಟಲ್ ಮೆಂಟ್ ವಿಷಯದಲ್ಲಿ ಕೆಲವು ಅಧಿಕಾರಿಗಳೂ ಸಹ ತಮ್ಮ ಅಧಿಕಾರ ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದು ಸರ್ಕಾರಿ ಸ್ವಾಮ್ಯದ ಬ್ಯಾಂಕ್ ಆರೋಪಿಸಿದೆ.

Source : The New Indian Express

Follow us on Social media

About the author

×

Hello!

If you want to receive regular new updates, please click whatsapp icon and save our number on your phone. You will be getting regular news updates on WhatsApp.

×