Breaking News

ಬೆಳ್ತಂಗಡಿ: ಸೊಸೈಟಿಯೊಂದರಲ್ಲಿ 40 ಕೋಟಿ ರೂ. ಹಗರಣ

ಬೆಳ್ತಂಗಡಿ: ಸಂತೆಕಟ್ಟೆ ಸಮೀಪ ಮುಖ್ಯ ಶಾಖೆ ಹೊಂದಿರುವ ಶ್ರೀ ರಾಮ ಕ್ರೆಡಿಟ್‌ ಕೋ ಆಪರೇಟಿವ್‌ ಸೊಸೈಟಿಯಲ್ಲಿ ಗ್ರಾಹಕರು ಠೇವಣಿ ಇಟ್ಟಿದ್ದ ಸುಮಾರು 40 ಕೋಟಿ ರೂ. ನಷ್ಟು ಹಣವನ್ನು ವಾಪಸ್‌ ನೀಡದೆ ವಂಚನೆ ಮಾಡಿರುವ ಘಟನೆ ಬೆಳಕಿಗೆ ಬಂದಿದ್ದು. ಈ ಬಗ್ಗೆ 2021ರಿಂದ 2024ರ ವರೆಗೆ ಸೊಸೈಟಿಯಲ್ಲಿ ಜವಾಬ್ದಾರಿ ವಹಿಸಿಕೊಂಡಿದ್ದ 14 ಜನರ ಮೇಲೆ ಬೆಳ್ತಂಗಡಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಳೆದ 25 ವರ್ಷಗಳಿಂದ ಏಕೈಕ ಶಾಖೆಯೊಂದಿಗೆ ಕಾರ್ಯಾಚರಿಸುತ್ತಿರುವ ಈ ಸೊಸೈಟಿಯ ವಂಚನೆ ಮಾಡಿರುವ ಬಗ್ಗೆ ಕಳೆದ ವರ್ಷ ಗ್ರಾಹಕರು ಒಟ್ಟಾಗಿ ದಾಖಲೆಗಳನ್ನು ತೆಗೆದು ಜಿಲ್ಲಾಧಿಕಾರಿ, ಎಸ್ಪಿ, ಸಹಕಾರ ಸಂಘ, ಗ್ರಾಹಕರ ವೇದಿಕೆ ಸೇರಿದಂತೆ ಎಲ್ಲ ಕಡೆ ದೂರು ನೀಡಿದ್ದರು. ಜತೆಗೆ ಸೊಸೈಟಿ ಒಳಗೇ ಹಲವು ಸುತ್ತಿನ ಮಾತುಕತೆಗಳು ನಡೆದು ಸಂಧಾನದವರೆಗೆ ತಲಪಿತ್ತು.

ಈ ಬಗ್ಗೆ ಜಿಲ್ಲಾಧಿಕಾರಿ ಕಚೇರಿ ಯಿಂದ ಎಸ್ಪಿಗೆ ದೂರನ್ನು ರವಾನೆ ಮಾಡಿ ಪ್ರಕರಣ ದಾಖ ಲಿಸಿ ತನಿಖೆ ನಡೆಸಲು ಸೂಚಿ ಸಿ ದ್ದರು. ಅದರಂತೆ ಬೆಳ್ತಂಗಡಿ ಪೊಲೀಸ್‌ ಠಾಣೆಯಲ್ಲಿ ವಂಚನೆ ಗೊಳಗಾದ ಬೆಳ್ತಂಗಡಿ ನಿವಾಸಿ ದಯಾನಂದ ನಾಯಕ್‌ ಸೇರಿ ಒಟ್ಟು 13 ಮಂದಿ ನೊಂದವರು ಮೇ 22ರಂದು ಸೊಸೈಟಿಯ 14 ಜನರ ವಿರುದ್ಧ ದೂರು ನೀಡಿದ್ದು ಅದರಂತೆ ಮೇ 23ರಂದು ಪ್ರಕರಣ ದಾಖಲಿಸಲಾಗಿದೆ.

2021ರಿಂದ 2024ರ ವರೆಗೆ ಬ್ಯಾಂಕ್‌ನಲ್ಲಿ ಜವಾಬ್ದಾರಿಯಲ್ಲಿದ್ದ ಬ್ಯಾಂಕ್‌ ಸಿಇಒ ಸೇರಿ ಒಟ್ಟು 14 ಮಂದಿಯ ವಿರುದ್ಧ 40 ಕೋಟಿ ರೂ. ವಂಚನೆ ಆರೋಪದಡಿ ಪ್ರಕರಣ ದಾಖಲಾಗಿದೆ.

ಸೊಸೈಟಿಯಲ್ಲಿ 40 ಕೋಟಿ ರೂ. ದೊಡ್ಡ ಮೊತ್ತದ ಹಗರಣ ವಾಗಿರುವ ಕಾರಣ ತನಿಖೆಯ ಹೊಣೆಗಾರಿಕೆ ಸಿಐಡಿ ವಿಭಾಗಕ್ಕೆ ಹಿರಿಯ ಅಧಿಕಾರಿಗಳು ಹಸ್ತಾಂತರ ಮಾಡುವ ಸಾಧ್ಯತೆ ಇದೆ ಎಂದು ಮೂಲಗಳಿಂದ ತಿಳಿದುಬಂದಿದೆ.

Follow us on Social media

About the author