Breaking News

ಉಡುಪಿ : ಮಹಿಳೆ ನಾಪತ್ತೆ – ದೂರು ದಾಖಲು

ಉಡುಪಿ : ಬೈಂದೂರುತಾಲೂಕು ಜಡ್ಕಲ್‌ಗ್ರಾಮದ ವಾಟೆಗುಂಡಿ ನಿವಾಸಿ ವಿನುತಾ (29) ಎಂಬ ಮಹಿಳೆಯು ನವೆಂಬರ್ 5 ರಂದು ಸಂಜೆ 7 ಗಂಟೆಯ ಸುಮಾರಿಗೆ ಮನೆಯಿಂದ ಹೊರಗೆ ಹೋದವರು ವಾಪಾಸು ಬಾರದೇ ನಾಪತ್ತೆಯಾಗಿದ್ದಾರೆ.

  • 4 ಅಡಿ 8 ಇಂಚು ಎತ್ತರ, ಕೋಲು ಮುಖ, ಗೋಧಿ ಮೈಬಣ್ಣ, ಸಾಧಾರಣ ಶರೀರ ಹೊಂದಿದ್ದು, ಕನ್ನಡ ಭಾಷೆ ಮಾತನಾಡುತ್ತಾರೆ.ಇವರ ಬಗ್ಗೆ ಮಾಹಿತಿ ದೊರೆತಲ್ಲಿ ಕೊಲ್ಲೂರು ಪೊಲೀಸ್‌ ಠಾಣೆ ದೂ.ಸಂಖ್ಯೆ: 08254-258233, 9480805460, ಬೈಂದೂರು ವೃತ್ತ ನಿರೀಕ್ಷಕರ ಕಚೇರಿ ದೂ.ಸಂಖ್ಯೆ: 08254-251031,9480805434 ಹಾಗೂ ಕಂಟ್ರೋಲ್‌ ರೂ: 100, ದೂ.ಸಂಖ್ಯೆ: 0820- 2526444 ಅನ್ನು ಸಂಪರ್ಕಿಸಬಹುದಾಗಿದೆ ಎಂದು ಕೊಲ್ಲೂರು ಪೊಲೀಸ್‌ ಠಾಣೆಯ ಉಪನಿರೀಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Follow us on Social media

About the author

×

Hello!

If you want to receive regular new updates, please click whatsapp icon and save our number on your phone. You will be getting regular news updates on WhatsApp.

×