ಮೂಡುಬಿದಿರೆ: ದಕ್ಷಿಣ ಕನ್ನಡ ಜಿಲ್ಲೆಯ ಮೂಡುಬಿದಿರೆಯಲ್ಲಿರುವ ಹೆಸರಾಂತ ಚಲಚಿತ್ರಮಂದಿರ ಅಮರಶ್ರೀಯನ್ನು ಕಂದಾಯ ಇಲಾಖೆಯ ಅಧಿಕಾರಿಗಳು ಮತ್ತು ಮೂಡುಬಿದಿರೆ ಪೊಲೀಸ್ ವಶಕ್ಕೆ ಪಡೆದುಕೊಂಡಿದ್ದಾರೆ ಎಂದು ತಿಳಿದು ಬಂದಿದೆ.
ದಾಖಲೆ ಪತ್ರಗಳು ನವೀಕರಣಗೊಳ್ಳದ ಕಾರಣವನ್ನು ನೀಡಿ ಈ ಚಿತ್ರಮಂದಿರವ ನ್ನು ವಶಕ್ಕೆ ಪಡೆಯಲಾಗಿದೆ. ಜಿಲ್ಲಾಧಿಕಾರಿ ಆದೇಶದಂತೆ ಈ ಕಾರ್ಯಾಚರಣೆಯನ್ನು ನಡೆಸಲಾಗಿದೆ. ದಾಖಲೆ ಪತ್ರಗಳನ್ನು ಸರಿಪಡಿಸಿದ ಬಳಿಕ ಮತ್ತೆ ಮರಳೀ ಟಾಕೀಸ್ ನ ಮಾಲಕರ ವಶಕ್ಕೆ ನೀಡಲಾಗುತ್ತದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಕಾರ್ಯಾಚರಣೆಯಲ್ಲಿ ಕಂದಾಯ ಅಧಿಕಾರಿ ಮಂಜುನಾಥ್ ಮೂಡುಬಿದಿರೆ ಪೊಲೀಸರು ಪಾಲ್ಗೊಂಡಿದ್ದರು.
Follow us on Social media