Breaking News

ಮಣಿಪುರ ಹಿಂಸಾಚಾರದ ಬಗ್ಗೆ ಚರ್ಚೆಗೆ ಸರ್ಕಾರ ಹೆದರುವುದಿಲ್ಲ: ಲೋಕಸಭೆಯಲ್ಲಿ ಅಮಿತ್ ಶಾ

ಮಣಿಪುರ ಹಿಂಸಾಚಾರದ ಬಗ್ಗೆ ದೇಶದೆಲ್ಲೆಡೆ ಆಕ್ರೋಶ ವ್ಯಕ್ತವಾಗುತ್ತಿದ್ದಂತೆ ಕೇಂದ್ರ ಗೃಹಸಚಿವರು ತುಟಿಬಿಚ್ಚಿದ್ದಾರೆ. ಸಂಬಂಧಿಸಿದಂತೆ ಎಷ್ಟು ದಿನ ಬೇಕಾದರೂ ಚರ್ಚೆಗೆ ಸರ್ಕಾರ ಸಿದ್ಧವಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಮಂಗಳವಾರ ಲೋಕಸಭೆಯಲ್ಲಿ ಹೇಳಿದ್ದಾರೆ. ಸದ್ಯ ಶಾಂತಿ ಸುವ್ಯವಸ್ಥೆ ಮುಂದುವರೆಸಲು ಕೇಂದ್ರ ಕ್ರಮಕೈಗೊಳ್ಳಬೇಕಾಗಿದೆ.

ಮಣಿಪುರ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಪ್ರಧಾನಿ ನರೇಂದ್ರ ಮೋದಿ ಅವರು ಚರ್ಚೆಗೂ ಮುನ್ನ ಸಂಸತ್ತಿನಲ್ಲಿ ಹೇಳಿಕೆ ನೀಡಬೇಕು ಎಂದು ಆಗ್ರಹಿಸಿ ಪ್ರತಿಪಕ್ಷಗಳು ಪ್ರತಿಭಟನೆ ನಡೆಸುತ್ತಿದ್ದು, ಮುಂಗಾರು ಅಧಿವೇಶನದ ಮೊದಲ ದಿನದಿಂದ ಉಭಯ ಸದನಗಳಲ್ಲಿ ಕಲಾಪಕ್ಕೆ ಅಡ್ಡಿಯುಂಟಾಗಿದೆ.ಇಂದು ಲೋಕಸಭೆಯಲ್ಲಿ ಬಹು-ರಾಜ್ಯ ಸಹಕಾರ ಸಂಘಗಳ(ತಿದ್ದುಪಡಿ) ಮಸೂದೆ ಮೇಲಿನ ಕಿರು ಚರ್ಚೆ ವೇಳೆ ಉತ್ತರಿಸಿದ ಅಮಿತ್ ಶಾ, ಸರ್ಕಾರ ಮುಚ್ಚಿಡುವಂತಹದ್ದು ಏನೂ ಇಲ್ಲ ಮತ್ತು ಮಣಿಪುರ ಸಮಸ್ಯೆಯ ಕುರಿತು ಚರ್ಚಿಸಲು ಸರ್ಕಾರ ಸಿದ್ಧವಾಗಿದೆ.

ಈ ಸಂಬಂಧ ಲೋಕಸಭೆ ಮತ್ತು ರಾಜ್ಯಸಭೆಯ ಪ್ರತಿಪಕ್ಷಗಳ ನಾಯಕರಿಗೆ ತಾವು ಪತ್ರ ಬರೆದಿರುವುದಾಗಿ ತಿಳಿಸಿದರು.”ಘೋಷಣೆಗಳನ್ನು ಕೂಗುವ ಜನ ಸಹಕಾರ ನೀಡುವುದರಲ್ಲಿ ಅಥವಾ ಸಹಕಾರಿಗಳಲ್ಲಿ ಆಸಕ್ತಿ ಹೊಂದಿಲ್ಲ. ದಲಿತರು ಅಥವಾ ಮಹಿಳಾ ಕಲ್ಯಾಣದಲ್ಲಿ ಆಸಕ್ತಿ ಹೊಂದಿಲ್ಲ” ಎಂದು ಅಮಿತ್ ಶಾ ಅಅವರು ವಿರೋಧ ಪಕ್ಷಗಳ ಸದಸ್ಯರ ಘೋಷಣೆಗಳ ನಡುವೆ ವಾಗ್ದಾಳಿ ನಡೆಸಿದರು.

Follow us on Social media

About the author

×

Hello!

If you want to receive regular new updates, please click whatsapp icon and save our number on your phone. You will be getting regular news updates on WhatsApp.

×