Breaking News

ಹುಟ್ಟುಹಬ್ಬದಂದು ತಲವಾರಿನಿಂದ ಕೇಕ್‌ ಕತ್ತರಿಸಿದ ಕಾಂಗ್ರೆಸ್‌ ಕಾರ್ಯಕರ್ತನ ಬಂಧನ

ಬೆಳಗಾವಿ : ತನ್ನ ಜನ್ಮದಿನವನ್ನು ತಲವಾರ್‌ನಿಂದ ಕೇಕ್‌ ಕತ್ತರಿಸಿದ ಕಾಂಗ್ರೆಸ್‌ ಕಾರ್ಯಕರ್ತನನ್ನು ಪೊಲೀಸರು ಬಂಧನ ಮಾಡಿದ್ದಾರೆ.

ಬಂಧಿತ ಪ್ರೇಮ ಅಶೋಕ ಕೋಲಕಾರ ತಾಲೂಕಿನ ಪಂತ ಬಾಳೇಕುಂದ್ರಿ ಗ್ರಾಮದವನಾಗಿದ್ದು ತನ್ನ ಹುಟ್ಟುಹಬ್ಬದ ದಿನ ತಲವಾರ್‌ನಿಂದ ಕೇಕ್‌ ಕತ್ತಿರಿಸಿದ್ದು ಈ ಫೋಟೋ, ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿತ್ತು ಎಂದು ಮಾರೀಹಾಳ ಠಾಣೆ ಇನ್ಸಪೆಕ್ಟರ್ ವಿಜಯಕುಮಾರ ಸಿನ್ನೂರ ತಿಳಿಸಿದ್ದಾರೆ.

ಈ ಬಗ್ಗೆ ಪೊಲೀಸರು ಸ್ವಯಂ‌ ಪ್ರೇರಿತ ಪ್ರಕರಣ ದಾಖಲಿಸಿಕೊಂಡಿದ್ದು ಪ್ರಸ್ತುತ ಬಂಧಿತನನ್ನು ನ್ಯಾಯಾಂಗಕ್ಕೆ ಹಾಜರು ಪಡಿಸಲಾಗಿದ್ದು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.ಈ ಕುರಿತು ಮಾರೀಹಾಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Follow us on Social media

About the author

×

Hello!

If you want to receive regular new updates, please click whatsapp icon and save our number on your phone. You will be getting regular news updates on WhatsApp.

×