Breaking News

ವಧುವಿಗೆ ಕೊರೊನಾ ಪಾಸಿಟಿವ್‌ – ಪಿಪಿಇ ಕಿಟ್‌ ಧರಿಸಿ ವಿವಾಹವಾದ ಜೋಡಿ

ಜೈಪುರ : ವಧುವಿಗೆ ಕೊರೊನಾ ಪಾಸಿಟಿವ್‌ ಆದ ಹಿನ್ನೆಲೆ ಜೋಡಿಯೊಂದು ಪಿಪಿಇ ಕಿಟ್‌ ಧರಿಸಿ ವಿವಾಹವಾದ ಘಟನೆ ರಾಜಸ್ಥಾನದಲ್ಲಿ ನಡೆದಿದೆ.

ವಿವಾಹದ ದಿನವೇ ವಧುವಿಗೆ ಕೊರೊನಾ ಪಾಸಿಟಿ‌ವ್‌ ಆಗಿರುವುದು ತಿಳಿದು ಬಂದಿದೆ. ಈ ಹಿನ್ನೆಲೆ ರಾಜಸ್ಥಾನದ ಬಾರಾ ಜಿಲ್ಲೆಯ ಶಹಬಾದ್‌ನ ಕೆಲ್ವಾರಾ ಕೊರೊನಾ ಕೇಂದ್ರದಲ್ಲಿಯೇ ಜೋಡಿಯು ವಿವಾಹವಾಗಿದ್ದು ಈ ವೇಳೆ ಪಿಪಿಇ ಕಿಟ್‌ ಧರಿಸಿದ್ದಾರೆ.

ವಿವಾಹದ ವೇಳೆ ಎಲ್ಲಾ ಕೊರೊನಾ ಮಾರ್ಗಸೂಚಿಗಳನ್ನು ಪಾಲಿಸಲಾಗಿದೆ. ಎಲ್ಲಾ ನಿಯಮಗಳನ್ನು ಪಾಲಿಸಲಾಗುತ್ತಿದೆಯೇ ಎಂದು ಖಚಿತಪಡಿಸಿಕೊಳ್ಳಲು ಅನೇಕ ಹಿರಿಯ ಅಧಿಕಾರಿಗಳು ಹಾಜರಿದ್ದು ಪರಿಶೀಲನೆ ನಡೆಸಿದ್ದಾರೆ.

Follow us on Social media

About the author

×

Hello!

If you want to receive regular new updates, please click whatsapp icon and save our number on your phone. You will be getting regular news updates on WhatsApp.

×