Breaking News

ರೈತರ ಬಂದ್ ಬೆಂಬಲಿಸಿ ರಸ್ತೆಗಿಳಿದು ಧರಣಿ ನಡೆಸಿ ಕೇಂದ್ರ ಸರ್ಕಾರಕ್ಕೆ ಬಿಸಿ ಮುಟ್ಟಿಸಿ : ರಂದೀಪ್ ಸುರ್ಜೇವಾಲ

ಬೆಂಗಳೂರು: ದೇಶದ ಅನ್ನದಾತರು ಡಿಸೆಂಬರ್ 8ಕ್ಕೆ ಬಂದ್ ಗೆ ಕರೆ ನೀಡಿದ್ದು, ಕಾಂಗ್ರೆಸ್ ಪಕ್ಷ ಸಂಪೂರ್ಣ ಬಂದ್ ಗೆ ಬೆಂಬಲ ನೀಡಲಿದೆ ಎಂದು ರಾಜ್ಯ ಕಾಂಗ್ರೆಸ್ ಉಸ್ತುವಾರಿ  ರಂದೀಪ್ ಸಿಂಗ್ ಸುರ್ಜೆವಾಲಾ ತಿಳಿಸಿದ್ದಾರೆ.

ಬೆಂಗಳೂರಿನ ಅರಮನೆ ಮೈದಾನದಲ್ಲಿ ಶನಿವಾರ ನಡೆದ ಕಾಂಗ್ರೆಸ್ ಹಿರಿಯ ಮುಖಂಡರು, ಮಾಜಿ ಸಚಿವರು, ಹಾಲಿ ಮತ್ತು ಮಾಜಿ ಸಂಸದರು, ಹಾಲಿ ಮತ್ತು ಮಾಜಿ ಶಾಸಕರು, ಡಿಸಿಸಿ ಅಧ್ಯಕ್ಷರು, ಮುಂಚೂಣಿ ಘಟಕಗಳ ಪದಾಧಿಕಾರಿಗಳ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಪ್ರತಿಯೊಂದು ಜಿಲ್ಲಾ ಕೇಂದ್ರಗಳಲ್ಲೂ ಕಾಂಗ್ರೆಸ್ ಶಾಸಕರು, ನಾಯಕರು ರಸ್ತೆಗಿಳಿದು ಕೇಂದ್ರದ ಮೂರು ಕರಾಳ ಕಾಯ್ದೆಗಳ ವಿರುದ್ದ ಹೋರಾಟ ಮಾಡಬೇಕು ಎಂದು ಸುರ್ಜೇವಾಲಾ ಕರೆ ನೀಡಿದರು.

ಗ್ರಾಮ ಪಂಚಾಯತ್ ಚುನಾವಣೆಗಳ ಹಿನ್ನೆಲೆಯಲ್ಲಿ ನಾವಿಂದು ಸಭೆ ನಡೆಸುತ್ತಿ ದ್ದೇವೆ.ಈ ವಿಚಾರವಾಗಿ ಮಾತನಾಡುವ ಮುನ್ನ,ಇಂದು ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಪುಣ್ಯತಿಥಿ.ಬಾ ಬಾ ಸಾಹೇಬರಿಗೆ ಗೌರವಿಸಬೇಕಾದ ಸಮಯದಲ್ಲಿ ರಾಜ್ಯ ಹಾಗೂ ರಾಷ್ಟ್ರ ಮಟ್ಟದಲ್ಲಿ ಪರಿಶಿಷ್ಟ ಜಾತಿ ಹಾಗೂ ಪಂಗಡದವರು,ಅಲ್ಪಸಂಖ್ಯಾತರ ಮೇಲೆ ಆಗುತ್ತಿರುವ ದಾಳಿಗಳ ವಿರುದ್ಧ ನಾವು ಹೋರಾಡುವ ಪಣ ತೊಡಬೇಕು ಎಂದು ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸುರ್ಜೇವಾಲಾ ತಿಳಿಸಿದ್ದಾರೆ.

“ನಾವು ಬ್ರಿಟೀಷರ ವಿರುದ್ಧ ಹೋರಾಡಿದ್ದೇವೆ.ಅಂಬೇಡ್ಕರ್ ಅವರ ಆಶಯದಂತೆ ಅಸಮಾನತೆ ವಿರುದ್ಧ ಹೋರಾಡಿದ್ದೇವೆ.ಈಗ ದೇಶದಲ್ಲಿ ಅಸಮಾನತೆ ಹೊಸ ಸ್ವ ರೂಪ ಪಡೆಯುತ್ತಿದ್ದು,ಈ ವರ್ಗದವರನ್ನು ಗುರಿಯಾಗಿಸಲಾಗುತ್ತಿದೆ.ಕಾಂಗ್ರೆಸ್ ಪಕ್ಷ ಅಸಮಾನತೆಯನ್ನು ವಿರೋಧಿಸುತ್ತಲೇ ಬಂದಿದ್ದು,ಇಂದು ಕೂಡ ನಾವು ಅಧಿಕಾರದಲ್ಲಿರುವ ಭಾರತೀಯ ಜನತಾ ಪಕ್ಷದ ಅಸಮಾನತೆ ಮನಸ್ಥಿತಿ ವಿರುದ್ಧ ಹೋರಾಡಬೇಕಿದೆ.”ಎಂದು ಅವರು ಹೇಳಿದರು. 

ಕಾಂಗ್ರೆಸ್ ಪಕ್ಷ ಬಡವರು, ದಲಿತರು ಹಾಗೂ ಅಲ್ಪಸಂಖ್ಯಾತರ ಪರ ನಿಲ್ಲಬೇಕಿದೆ ಎಂದಿರುವ ಸುರ್ಜೆವಾಲಾ ಯಡಿಯೂರಪ್ಪ ಅವರ ಸರ್ಕಾರ ಜನರ ಆಯ್ಕೆಯಿಂದ ರಚನೆಯಾಗಿಲ್ಲ. ಪಕ್ಷದಲ್ಲಿ ಈಗಾಗಲೇ ಸಾಕಷ್ಟು ಸೋಲು ಕಂಡಿದ್ದೇವೆ, ಆದರೆ ಪ್ರತಿ ಸೋಲೂ ಹೊಸ ಭರವಸೆಯೊಂದಿಗೆ ಹೆಜ್ಜೆ ಇಡಲು ಅವಕಾಶ್ ನಿಡುತ್ತಿದೆ ಎಂದಿದ್ದಾರೆ.

ಇದೇ ವೇಳೆ ಇತ್ತೀಚೆಗೆ ಮೃತಪಟ್ಟ ದಕ್ಷ ಅಧಿಕಾಯಾಗಿದ್ದ ಜಮೀರ್ ಪಾಷಾ ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಪ್ರಾರ್ಥಿಸುವುದಾಗಿ ಅವರು ಹೇಳಿದರು.

ಪಂಚಾಯತ್ ಚುನಾವಣೆ ಬಳಿಕ ರಾಜ್ಯ ಸರ್ಕಾರ ಪತನ

ಗ್ರಾಮ ಪಂಚಾಯತ್ ಚುನಾವಣೆಯ ಬಳಿಕ ರಾಜ್ಯದ ಬಿಜೆಪಿ ಸರ್ಕಾರ ಪತನವಾಗಲಿದೆ ಎಂದು ರಂದೀಪ್ ಸಿಂಗ್ ಸುರ್ಜೆವಾಲಾ ಹೇಳಿದ್ದಾರೆ. 

ರಾಜ್ಯದ ಜನರ ಒಳಿತಿಗಾಗಿ ಸರ್ಕಾರ ಕೆಲಸ ಮಾಡುತ್ತಿಲ್ಲ. ಸರ್ಕಾರದ ನಡೆಗೆ ಕೇಂದ್ರದ ಬಿಜೆಪಿ ನಾಯಕರೇ ಬೇಸತ್ತಿದ್ದಾರೆ.ರಾಜ್ಯದಲ್ಲಿ ಮತ್ತೆ ಕಾಂಗ್ರೆಸ್ ಅಧಿಕಾರಕ್ಕೆ ಬರುವುದು ನಿಶ್ಚಿತ ಎಂದೌ ಅವರು ಹೇಳಿದರು.

Follow us on Social media

About the author

×

Hello!

If you want to receive regular new updates, please click whatsapp icon and save our number on your phone. You will be getting regular news updates on WhatsApp.

×