Breaking News

ಭಾರೀ ಸ್ಫೋಟಕ್ಕೆ ನಡುಗಿ ಹೋದ ಬೈರೂತ್: 70 ಮಂದಿ ಬಲಿ, ಸಾವಿರಾರು ಜನರಿಗೆ ಗಂಭೀರ ಗಾಯ

ಬೈರೂತ್: ಲೆಬನಾನ್ ರಾಜಧಾನಿ ಬೈರೂತ್ ನಲ್ಲಿ ಮಂಗಳವಾರ ಭಾರೀ ಪ್ರಮಾಣದ ಅವಳಿ ಸ್ಫೋಟ ಸಂಭವಿಸಿದ್ದು. ಸ್ಫೋಟದ ತೀವ್ರತೆಗೆ ಅಕ್ಕಪಕ್ಕದ ಹಲವು ಕಟ್ಟಡಗಳು ಧ್ವಂಸಗೊಂಡಿದ್ದು, ಸಾವಿರಾರು ಕಟ್ಟಡಗಳು ಭಾರೀ ಹಾನಿಗೊಳಗಾಗಿದೆ. ಸ್ಫೋಟಕ್ಕೆ ನಿಖರ ಕಾರಣಗಳು ತಿಳಿದುಬಂದಿಲ್ಲ. ಪ್ರಾಥಮಿಕ ವರದಿಗಳ ಅನ್ವಯ 70 ಮಂದಿ ಬಲಿಯಾಗಿದ್ದು, ಸಾವಿರಾರು ಜನರು ಗಾಯಗೊಂಡಿದ್ದಾರೆಂದು ತಿಳಿದುಬಂದಿದೆ. 

ಬಂದರು ಸಮೀಪದಲ್ಲೇ ನಡೆದ ಸ್ಫೋಟದಿಂದ ಎದ್ದ ಅಗ್ನಿ ಜ್ವಾರೆ ಮುಗಿಲೆತ್ತರಕ್ಕೆ ಏರಿದ ಮತ್ತು ತೀವ್ರತೆಯಿಂದ ಸಮುದ್ರ ನೀರು ನೂರಾರು ಮೀಟಲ್ ಗಗನಕ್ಕೆ ಚಿಮ್ಮಿ ಭಾರೀ ಹಾನಿಯುಂಟು ಮಾಡಿದ ವಿಡಿಯೋಗಳು ಘಟನೆಯ ಭೀಭತ್ವವನ್ನು ವರ್ಣಿಸಿವೆ. 

ಪಕ್ಕಾ ಅಣುಬಾಂಬ್ ದಾಳಿಯ ಚಿತ್ರಣವನ್ನೇ ನೆನಪಿಸುವಂತಿದ್ದ ಸ್ಫೋಟದ ದೃಶ್ಯಗಳು, ಸದಾ ಆಂತರಿಕ ಕಲಹದಿಂದ ನಲುಗಿರುವ ಬೈರೂತ್ ಜನರನ್ನು ಬೆಚ್ಚಿ ಬೀಳಿಸಿದೆ. ಸ್ಫೋಟದ ಸದ್ದು 200 ಕಿಮೀ ದೂರದವರೆಗೂ ಕೇಳಿ ಬಂದಿದ್ದು, ಜನರು ಬೆಚ್ಚಿ ಬಿದ್ದಿದ್ದಾರೆ. 

ಸ್ಫೋಟದ ಬಳಿಕ ಸ್ಥಳಕ್ಕೆ ಬಂದ ಆ್ಯಂಬುಲೆನ್ಸ್ ಗಳು ಹಾಗೂ ಸೇನಾ ಹೆಲಿಕಾಪ್ಟರ್ ಗಳು ಕೂಡಲೇ ಕಾರ್ಯಾಚರಣೆಗಿಳಿದಿದ್ದು, ರಕ್ಷಣಾ ಕಾರ್ಯಗಳನ್ನು ನಡೆಸುತ್ತಿವೆ. ಈಗಾಗಲೇ ಆಸ್ಪತ್ರೆಗಳಲ್ಲಿ ರೋಗಿಗಳು ತುಂಬಿ ಹೋಗಿದ್ದು, ಆಸ್ಪತ್ರೆಯ ಸಿಬ್ಬಂದಿಗಳು ರಕ್ತದಾನ ಮಾಡುವಂತೆ ಜನರ ಬಳಿ ಮನವಿ ಮಾಡಿಕೊಳ್ಳುತ್ತಿದ್ದಾರೆ. 

Follow us on Social media

About the author

×

Hello!

If you want to receive regular new updates, please click whatsapp icon and save our number on your phone. You will be getting regular news updates on WhatsApp.

×