Breaking News

ಧಾರ್ಮಿಕ ಕ್ಷೇತ್ರಗಳಿಗೆ ಮಾರ್ಗಸೂಚಿ ಪ್ರಕಟಿಸಿದ ಕೇಂದ್ರ ಸರ್ಕಾರ

ನವದೆಹಲಿ: ಎಲ್ಲಾ ಧಾರ್ಮಿಕ ಕ್ಷೇತ್ರಗಳಿಗೆ ಕೇಂದ್ರ ಸರ್ಕಾರ ಮಾರ್ಗಸೂಚಿ ಪ್ರಕಟಿಸಿದೆ. ಕಂಟೈನ್ಮೆಂಟ್‌‌‌ ಝೋನ್‌‌ಗಳನ್ನು ಹೊರತುಪಡಿಸಿ ಉಳಿದ ಎಲ್ಲಾ ಧಾರ್ಮಿಕ ಸ್ಥಳಗಳನ್ನು ತೆರೆಯಲು ಅನುಮತಿ ನೀಡಿದ್ದು, ಜೂನ್‌‌ 8ರಿಂದ ಮಂದಿರ, ಮಸೀದಿ, ಚರ್ಚ್ ತೆರೆಯಲಿದೆ.

ಕೇಂದ್ರದ ಮಾರ್ಗಸೂಚಿಯ ಅನ್ವಯ ಧಾರ್ಮಿಕ ಕ್ಷೇತ್ರಗಳಲ್ಲಿ ಪ್ರಸಾದ, ತೀರ್ಥ ನೀಡುವಂತಿಲ್ಲ. ಧಾರ್ಮಿಕ ಕೇಂದ್ರಗಳಿಗೆ 65 ವರ್ಷ ಮೇಲ್ಪಟ್ಟ ಹಾಗೂ 10 ವರ್ಷದೊಳಗಿನ ಮಕ್ಕಳ ಪ್ರವೇಶ ನಿಷೇಧ ಮಾಡಲಾಗಿದೆ. ಕಡ್ಡಾಯವಾಗಿ ಆರು ಅಡಿ ಅಂತರ ಕಾಯ್ದುಕೊಳ್ಳಬೇಕು. ಅಲ್ಲದೇ ಮಾಸ್ಕ್‌‌ ಧರಿಸುವುದು ಕಡ್ಡಾಯ ಮಾಡಲಾಗಿದೆ. ಸಾಮೂಹಿಕ ಪ್ರಾರ್ಥನೆಯ ಬದಲಾಗಿ ವೈಯುಕ್ತಿಕ ಆದ್ಯತೆ ನೀಡಬೇಕು ಎಂದು ತಿಳಿಸಿದೆ.

ಧಾರ್ಮಿಕ ಕ್ಷೇತ್ರದೊಳಗೆ ಸಾಮಾಜಿಕ ಅಂತರಕ್ಕೆ ಸೂಕ್ತವಾದ ಮಾರ್ಕ್‌‌ ಮಾಡುವುದು. ಧಾರ್ಮಿಕ ಕೇಂದ್ರದ ಆವರಣದೊಳಗಿನ ಅಂಗಡಿಗಳು, ಹೊಟೇಲ್, ಪಾರ್ಕಿಂಗ್ ಪ್ರದೇಶದಲ್ಲಿ ಅಂತರ ಕಾಯ್ದುಕೊಳ್ಳಬೇಕು. ಅಲ್ಲದೇ, ಧಾರ್ಮಿಕ ಸ್ಥಳಗಳ ಪ್ರವೇಶ ಹಾಗೂ ನಿರ್ಗಮನ ಪ್ರತ್ಯೇಕವಾಗಿಡುವ ಸಲಹೆಯನ್ನು ನೀಡಿದೆ. ಇನ್ನು ಯಾವುದೇ ಸ್ಥಳಗಳಲ್ಲಿ ಎಸಿಗಳ ಬಳಕೆ ಬಿಟ್ಟು ನೈಸರ್ಗಿಕ ಗಾಳಿಗೆ ಆದ್ಯತೆ ನೀಡಬೇಕು ಎಂದು ತಿಳಿಸಿದೆ.

ಇನ್ನು ಧಾಮಿರ್ಕಕ ಕೇಂದ್ರಗಳಲ್ಲಿ ಪ್ರವೇಶ ನಿಯಂತ್ರಣ ಮಾಡುವ ಸಲುವಾಗಿ ಸಮಯದ ಆಧಾರದಲ್ಲಿ ಶಿಫ್ಟ್‌‌ಗಳನ್ನು ಮಾಡಲು ಸೂಚಿಸಿದೆ. ಭಕ್ತರು ಶೂ, ಚಪ್ಪಲಿಗಳನ್ನು ವಾಹನದಲ್ಲಿ ಇಡಬೇಕು. ಧಾರ್ಮಿಕ ಕ್ಷೇತ್ರದ ಒಳಗೆ ತರುವಂತಿಲ್ಲ. ಅನಿವಾರ್ಯ ಇದ್ದರೆ ಚಪ್ಪಲಿಗಳನ್ನು ಪ್ರತ್ಯೇಕವಾಗಿ ಇಡಬೇಕು ಎಂದು ಸೂಚಿಸಿದೆ.

ನಿಯಮಿತವಾಗಿ ಧಾರ್ಮಿಕ ಕ್ಷೇತ್ರವನ್ನು ಸ್ವಚ್ಛ ಮಾಡುವುದು, ಸ್ಯಾನಿಟೈಸ್ ಅಥವಾ ಸಾಬೂನಿಂದ ನಿಯಮಿತವಾಗಿ ಕೈ ತೊಳೆದುಕೊಳ್ಳಬೇಕು. ಅಲ್ಲದೇ, ಕೆಮ್ಮುವಾಗ, ಸೀನುವಾಗ ಕರವಸ್ತ್ರ ಉಪಯೋಗಿಸಿದ ನಂತರ ಸೂಕ್ತವಾಗಿ ವಿಲೇವಾರಿ ಮಾಡಬೇಕು. ಇನ್ನು ಧಾರ್ಮಿಕ ಕ್ಷೇತ್ರದ ಪ್ರವೇಶಕ್ಕೂ ಮೊದಲು ಥರ್ಮಲ್ ಸ್ಕ್ರೀನಿಂಗ್ ಹಾಗೂ ಕೈ ಸ್ವಚ್ಛ ಮಾಡಿಕೊಳ್ಳುವುದು ಕಡ್ಡಾಯವಾಗಿದೆ. ರೋಗದ ಯಾವುದೇ ಗುಣಲಕ್ಷಣಗಳು ಇಲ್ಲದವರಿಗೆ ಮಾತ್ರವೇ ಪ್ರವೇಶಕ್ಕೆ ಅವಕಾಶ. ಕೊರೊನಾ ಮುನ್ನೆಚ್ಚರಿಕೆಗಳ ಬಗ್ಗೆ ಧಾರ್ಮಿಕ ಕ್ಷೇತ್ರಗಳಲ್ಲಿ ಭಿತ್ತಿ ಪತ್ರ ಪೋಸ್ಟರ್ ಪ್ರದರ್ಶನ ಮಾಡುವುದು. ವಿಡಿಯೋ, ಆಡಿಯೋಗಳನ್ನು ಪ್ಲೇ ಮಾಡುವುದು ಕಡ್ಡಾಯವಾಗಿದೆ ಎಂದು ಮಾರ್ಗಸೂಚಿಯಲ್ಲಿ ತಿಳಿಸಿದೆ.

Follow us on Social media

About the author

×

Hello!

If you want to receive regular new updates, please click whatsapp icon and save our number on your phone. You will be getting regular news updates on WhatsApp.

×