Breaking News

ದೇಶದ ಅಭಿವೃದ್ಧಿ ದರ ಶೇ.1.9 ರಷ್ಟು ತಲುಪುವ ನಿರೀಕ್ಷೆ, 2021-22ರಲ್ಲಿ ಆರ್ಥಿಕತೆ ಹೆಚ್ಚು ಬೆಳವಣಿಗೆ ಕಾಣಲಿದೆ: ಆರ್‌ಬಿಐ ಗವರ್ನರ್‌

ನವದೆಹಲಿ: ಮಾರಕ ಕೊರೋನಾ ವೈರಸ್ ಹಾವಳಿಯಿಂದಾಗಿ ದೇಶದ ಆರ್ಥಿಕತೆಗೆ ಧಕ್ಕೆಯಾಗಿದ್ದು, 2021-22ರಲ್ಲಿ  ಆರ್ಥಿಕತೆ ಅತಿ ಹೆಚ್ಚು ಬೆಳವಣಿಗೆ ಕಾಣಲಿದೆ ಎಂದು ಆರ್‌ಬಿಐ ಗವರ್ನರ್‌ ಶಕ್ತಿಕಾಂತ ದಾಸ್‌ ಹೇಳಿದ್ದಾರೆ.

ಭಾರತದಲ್ಲಿ ಕೊರೋನಾ ಹಾವಳಿಯಿಂದಾಗಿ ದೇಶದ ಆರ್ಥಿಕತೆ ತೀವ್ರ ಹಿನ್ನಡೆ ಅನುಭವಿಸಿರುವ ಹಿನ್ನಲೆಯಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್‌ (ಆರ್‌ಬಿಐ) ಗವರ್ನರ್‌ ಶಕ್ತಿಕಾಂತ ದಾಸ್‌ ಅವರು ಶುಕ್ರವಾರ ಮಾಧ್ಯಮಗಳೊಂದಿಗೆ ಮಾತನಾಡಿದ್ದು, ಮಾರಕ ಕೊರೋನಾ ವೈರಸ್  ಹಾವಳಿಯಿಂದಾಗಿ ದೇಶದ ಆರ್ಥಿಕತೆಗೆ ಧಕ್ಕೆಯಾಗಿದ್ದು, 2021-22ರಲ್ಲಿ  ಆರ್ಥಿಕತೆ ಅತಿ ಹೆಚ್ಚು ಬೆಳವಣಿಗೆ ಕಾಣಲಿದೆ ಎಂದು ಹೇಳಿದರು.

1930ರ ನಂತರ ಇಡೀ ವಿಶ್ವ ಇಂತಹ ಆರ್ಥಿಕ ಮುಗ್ಗಟ್ಟನ್ನು ಎದುರಿಸುತ್ತಿದೆ. ಕಳೆದ ಮೂರು ತಿಂಗಳ ಅವಧಿಯಲ್ಲಿ ವಿಶ್ವದ 9ಟ್ರಿಲಿಯನ್ ಅಮೆರಿಕನ್ ಡಾಲರ್‌ ನಷ್ಟು ಆರ್ಥಿಕತೆ ನಷ್ಟವಾಗಿದೆ. ಭಾರತದ ಜಿಡಿಪಿ ಸಹ ಶೇ.1.9 ಕ್ಕೆ ಕುಸಿದಿದೆ. ಹೀಗಾಗಿ ದೇಶದ ಆರ್ಥಿಕತೆಯನ್ನು ಮತ್ತೆ  ಅಭಿವೃದ್ಧಿಯ ಪಥಕ್ಕೆ ತರಲು ಆರ್‌ಬಿಐ ಸಾಕಷ್ಟು ಯೋಜನೆಗಳನ್ನು ರೂಪಿಸಿದೆ. ದೇಶದಲ್ಲಿ ವ್ಯಾಪಕವಾಗಿ ಹಬ್ಬುತ್ತಿರುವ ಕೊರೋನಾ ವೈರಸ್ ಪರಿಸ್ಥತಿಯನ್ನು ಆರ್‌ಬಿಐ ಗಮನಿಸುತ್ತಿದ್ದು, ಇಂತಹ ಕಠಿಣ ಸಂದರ್ಭದಲ್ಲಿ ಮುನ್ನೆಲೆಯಲ್ಲಿ ನಿಂತು ಕೊರೊನಾ ವೈರಸ್‌ ವಿರುದ್ಧ ಹೋರಾಡುತ್ತಿರುವ  ವೈದ್ಯರು, ಆರೋಗ್ಯ ಸಿಬ್ಬಂದಿ ಹಾಗೂ ಅಧಿಕಾರಿಗಳ ಕಾರ್ಯ ಶ್ಲಾಘನೀಯ. ಕೊರೋನಾ ವೈರಸ್ ಹಾವಳಿಯಿಂದಾಗಿ ದೇಶದ ಆರ್ಥಿಕತೆಗೆ ಭಾರಿ ಪೆಟ್ಟು ಬಿದ್ದಿದ್ದು, ಬ್ಯಾಂಕಿಂಗ್‌ ವ್ಯವಸ್ಥೆ ಮುಂದುವರಿಸಲು ಸಹಕಾರಿಯಾಗಿರುವ ಆರ್‌ಬಿಐ ಸಿಬ್ಬಂದಿಯ ಕಾರ್ಯಾಚರಣೆ ನಡೆಸಿದ್ದೇವೆ. ಈ  ವೇಳೆ ಕಾರ್ಯ ನಿರ್ವಹಿಸಿದ ಬ್ಯಾಂಕಿಂಗ್ ಸಿಬ್ಬಂದಿಗೆ ಶಕ್ತಿಕಾಂತ್ ದಾಸ್ ಧನ್ಯವಾದ ಅರ್ಪಿಸಿದರು. 

ಕೊರೋನಾ ಭೀತಿಯಿಂದಾಗಿ ಇಡೀ ವಿಶ್ವದ ಜಿಡಿಪಿ ಕುಸಿತವಾಗಿದ್ದು 9 ಟ್ರಿಲಿಯನ್ ಅಮೆರಿಕನ್ ಡಾಲರ್‌ ನಷ್ಟವಾಗಿದೆ. ಈ ನಡುವೆ ಭಾರತದ ಅಭಿವೃದ್ಧಿ ದರವೂ ಕುಸಿದಿದ್ದು ಮುಂದಿನ ದಿನಗಳಲ್ಲಿ ಶೇ. 1.9 ರಷ್ಟು ಅಭಿವೃದ್ಧಿ ದರವನ್ನು ನಿರೀಕ್ಷಿಸಲಾಗಿದೆ. ಭಾರತ ಶೇ 1.9ರಷ್ಟು ಸಕಾರಾತ್ಮಕ  ಬೆಳವಣಿಗೆ ಕಾಣಲಿದೆ ಎಂದು ಅಂತರರಾಷ್ಟ್ರೀಯ ಹಣಕಾಸು ನಿಧಿ ಅಂದಾಜು ಮಾಡಿದೆ. ಇದು ಜಿ20 ಆರ್ಥಿಕತೆಗಳ ಪೈಕಿ ಅತಿ ಹೆಚ್ಚಾಗಿದ್ದು, ಜಾಗತಿಕ ಆರ್ಥಿಕ ಮಾರುಕಟ್ಟೆಗಳಲ್ಲಿ ಏರಿಳಿತ ಮುಂದುವರಿಯಲಿದೆ. ಕಚ್ಚಾ ತೈಲ ದರದಲ್ಲಿಯೂ ವ್ಯತ್ಯಾಸವಾಗಲಿದೆ. ದೇಶದಲ್ಲಿ ಸಕಾರಾತ್ಮಕ  ಜಿಡಿಪಿ ಕಂಡು ಬರಲಿವೆ. ಆ ಮೂಲಕ ಜಗತ್ತಿನ ಕೆಲವೇ ರಾಷ್ಟ್ರಗಳಲ್ಲಿ ಭಾರತ ಸಹ ಸೇರಿದೆ. ಅಂತಾರಾಷ್ಟ್ರೀಯ ಹಣಕಾಸು ನಿಧಿ ಅಂದಾಜಿನ ಪ್ರಕಾರ, 2021–22ರಲ್ಲಿ ಭಾರತದ ಆರ್ಥಿಕತೆ ಅತಿ ಹೆಚ್ಚು ಬೆಳವಣಿಗೆ ಕಾಣಲಿದೆ ಎಂದು ಹೇಳಿದರು.

ಇನ್ನು ಲಾಕ್‌ಡೌನ್‌ ಅವಧಿಯಲ್ಲಿ ಇಂಟರ್‌ನೆಟ್‌ ಬ್ಯಾಂಕಿಂಗ್‌ ಅಥವಾ ಮೊಬೈಲ್‌ ಬ್ಯಾಂಕಿಂಗ್‌ನಲ್ಲಿ ಯಾವುದೇ ಸಮಸ್ಯೆ ಎದುರಾಗಿಲ್ಲ. ಎಟಿಎಂಗಳು ಶೇ 91ರಷ್ಟು ಸಾಮರ್ಥ್ಯದೊಂದಿಗೆ ಕಾರ್ಯನಿರ್ವಹಿಸಿವೆ. ಆರ್‌ಬಿಐ ಕ್ರಮಗಳಿಂದಾಗಿ ಬ್ಯಾಂಕಿಂಗ್‌ ವ್ಯವಸ್ಥೆಯಲ್ಲಿ ಹಣದ ಹರಿವು ಕಂಡು  ಬಂದಿದೆ. ಭಾರತದ ಉತ್ಪಾದನಾ ವಲಯದ ಜೊತೆಗೆ ಉದ್ಯೋಗ ವಲಯವೂ ಸಾಕಷ್ಟು ನಷ್ಟ ಅನುಭವಿಸಿದೆ. ಆರ್ಥಿಕ ಮುಗ್ಗಟ್ಟಿನ ನಡುವೆಯೂ ಭಾರತದಲ್ಲಿ ಶೇ.21.3 ರಷ್ಟು ಅಧಿಕ ಟ್ಯ್ರಾಕ್ಟರ್‌ ಮಾರಾಟವಾಗಿದೆ. ಅಲ್ಲದೆ, ಆರ್‌ಬಿಐ ರಿವರ್ಸ್ ರಿಪೋ ದರ 25 ಬೇಸಿಸ್ ಪಾಯಿಂಟ್ ಇಳಿಕೆ  ಮಾಡಲಾಗಿದ್ದು, ಶೇ.4 ರಿಂದ ಶೇ 3.75ಕ್ಕೆ ಇಳಿಕೆ ಮಾಡಲಾಗಿದೆ. ಇದರಿಂದ ಜನರಿಗೆ ಕಡಿಮೆ ಬಡ್ಡಿ ದರದಲ್ಲಿ ಸಾಲ ಸೌಲಭ್ಯ ಸಿಗಲಿದೆ. ಇನ್ನೂ ಬ್ಯಾಂಕ್‌ಗಳಿಗೆ ಹಾಗೂ ಎಟಿಎಂಗಳಿಗೆ ಜಿಡಿಪಿ ದರದ ಶೇ.3.2 ರಷ್ಟು ಹಣದ ಹರಿವನ್ನು ನಿರ್ವಹಣೆ ಮಾಡಲಾಗುತ್ತಿದೆ ಎಂದು ತಿಳಿಸಿದ್ದಾರೆ.

ಅಲ್ಲದೆ, “ಭಾರತದ ಉತ್ಪಾದನಾ ವಲಯದ ಜೊತೆಗೆ ಉದ್ಯೋಗ ವಲಯವೂ ಸಾಕಷ್ಟು ನಷ್ಟ ಅನುಭವಿಸಿದೆ. ಆರ್ಥಿಕ ಮುಗ್ಗಟ್ಟಿನ ನಡುವೆಯೂ ಭಾರತದಲ್ಲಿ ಶೇ.21.3 ರಷ್ಟು ಅಧಿಕ ಟ್ಯ್ರಾಕ್ಟರ್‌ ಮಾರಾಟವಾಗಿದೆ. ಅಲ್ಲದೆ, ಆರ್‌ಬಿಐ ರಿವರ್ಸ್ ರಿಪೋ ದರ 25 ಬೇಸಿಸ್ ಪಾಯಿಂಟ್ ಇಳಿಕೆ  ಮಾಡಲಾಗಿದ್ದು, ಶೇ.4 ರಿಂದ ಶೇ 3.75ಕ್ಕೆ ಇಳಿಕೆ ಮಾಡಲಾಗಿದೆ. ಇದರಿಂದ ಜನರಿಗೆ ಕಡಿಮೆ ಬಡ್ಡಿ ದರದಲ್ಲಿ ಸಾಲ ಸೌಲಭ್ಯ ಸಿಗಲಿದೆ. ಇನ್ನೂ ಬ್ಯಾಂಕ್‌ಗಳಿಗೆ ಹಾಗೂ ಎಟಿಎಂಗಳಿಗೆ ಜಿಡಿಪಿ ದರದ ಶೇ.3.2 ರಷ್ಟು ಹಣದ ಹರಿವನ್ನು ನಿರ್ವಹಣೆ ಮಾಡಲಾಗುತ್ತಿದೆ” ಎಂದು ತಿಳಿಸಿದ್ದಾರೆ.

ಕೊರೋನಾದಿಂದಾಗಿ ವಿಶ್ವದ ಉತ್ಪಾದನೆಯ ಜೊತೆಗೆ ಭಾರತದ ಉತ್ಪಾದನಾ ವಲಯವೂ ಸಾಕಷ್ಟು ಕುಸಿತ ಅನುಭವಿಸಿದೆ. ಹೀಗಾಗಿ ಭಾರತದ ಜಿಡಿಪಿ ಸಾಕಷ್ಟು ಕುಸಿದಿದೆ. ಹೀಗಾಗಿ ದೇಶದ ಆರ್ಥಿಕತೆಯ ಪುನಶ್ಛೇತನಕ್ಕಾಗಿ ಆರ್‌ಬಿಐ ಹತ್ತಾರು ಘೋಷಣೆಗಳನ್ನು ನೀಡಿದೆ

ಆರ್ಥಿಕ ಪುನಶ್ಚೇತನಕ್ಕಾಗಿ ಆರ್‌ಬಿಐ ಪ್ರಮುಖ ಘೋಷಣೆ
1. ಸಮರ್ಪಕ ಹಣದ ಹರಿವಿನ ನಿರ್ವಹಣೆ ಮತ್ತು ಬ್ಯಾಂಕುಗಳಿಗೆ ಹಣದ ಕೊರತೆಯಾಗದಂತೆ ಎಚ್ಚರಿಕೆ
2. ಎಲ್ಲಾ ಬ್ಯಾಂಕುಗಳಿಗೆ ಜಿಡಿಪಿ ಶೇ.3.2 ರಷ್ಟು ಹಣದ ಪೂರೈಕೆ.
3. ಶೇ.91 ರಷ್ಟು ಎಟಿಎಂ ಗಳ ಕಾರ್ಯ ನಿರ್ವಹಣೆ.
4. ಆಹಾರಧಾನ್ಯಗಳಿಗೆ ಕೊರತೆ ಇಲ್ಲದಂತೆ ನೋಡಿಕೊಳ್ಳುವುದು.
5. ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳ ಪುನಶ್ಚೇತನಕ್ಕಾಗಿ 50,000  ಕೋಟಿ ಆರ್ಥಿಕ ನೆರವು ಮೀಸಲು
6. ನಬಾರ್ಡ್‌‌ಗೆ (NABARD) 25,000 ಸಾವಿರ ಕೋಟಿ ಆರ್ಥಿಕ ನೆರವು ಮೀಸಲು.
7. ಸಣ್ಣ ಕೈಗಾರಿಕೆ ಅಭಿವರದ್ಧಿ ನಿಗಮ ಕ್ಕೆ (SIDBI) ಹೆಚ್ಚುವರಿ 15,000 ಕೋಟಿ ಆರ್ಥಿಕ ನೆರವು ಮೀಸಲು.
8. ರಿವರ್ಸ್ ರಿಪೋ ದರ 25 ಬೇಸಿಸ್ ಪಾಯಿಂಟ್ ಇಳಿಕೆ ಮಾಡಿದ್ದು ಈ ಮೂಲಕ ಜನ ಸಾಮಾನ್ಯರಿಗೆ ಕಡಿಮೆ ದರದಲ್ಲಿ ಸಾಲ ಸೌಲಭ್ಯ.
9.ಮೂರು ತಿಂಗಳ ಕಾಲ ಪಿಎನ್‌ಎ ನಿಯಮ (ಪಡೆದಿರುವ ಸಾಲ ಮರುಪಾವತಿ) ಅನ್ವಯಿಸುವುದಿಲ್ಲ.

Follow us on Social media

About the author

×

Hello!

If you want to receive regular new updates, please click whatsapp icon and save our number on your phone. You will be getting regular news updates on WhatsApp.

×