Breaking News

ಕೋವಿಡ್-19 ಹರಡುವಿಕೆ ಹಿಂದೆ ವುಹಾನ್ ಮಾರುಕಟ್ಟೆ ಪಾತ್ರವಿದೆ, ಹೆಚ್ಚಿನ ಸಂಶೋಧನೆ ಅಗತ್ಯ: ವಿಶ್ವ ಆರೋಗ್ಯ ಸಂಸ್ಥೆ

ಜಿನಿವಾ : ಕೋವಿಡ್-19 ಹರಡುವಿಕೆ ಹಿಂದೆ ಚೀನಾದ ವುಹಾನ್ ನಗರದ ವನ್ಯಜೀವಿ ಮಾಂಸ ಮಾರುಕಟ್ಟೆಯ ಪಾತ್ರವಿದೆ ಎಂದು ವಿಶ್ವ ಆರೋಗ್ಯ ಸಂಸ್ಧೆ(ಡಬ್ಲ್ಯುಎಚ್ಒ) ಹೇಳಿದೆ.

ತೀವ್ರ ಮಟ್ಟದಲ್ಲಿ ಕೊರೋನಾ ವೈರಸ್ ಹರಡಲು ಮಾರುಕಟ್ಟೆ ಮೂಲವಾಗಿರುವ ಸಾಧ್ಯತೆ ಇದೆ. ಈ ಬಗ್ಗೆ ಹೆಚ್ಚಿನ ಸಂಶೋಧನೆ ಆಗಬೇಕಿದೆ ಎಂದು ಡಬ್ಲ್ಯುಎಚ್ಒದ ಆಹಾರ ಸುರಕ್ಷತಾ ತಜ್ಞ ಪೀಟರ್ ಬೆನ್ ಎಂಬಾರೆಕ್ ಹೇಳಿದ್ದಾರೆ. 

ಕೊರೋನಾ ವೈರಸ್ ಹರಡುವಿಕೆ ತಡೆಯುವ ಉದ್ದೇಶದಿಂದ ಚೀನಾ ಜನವರಿಯಲ್ಲೇ ಈ ಮಾರುಕಟ್ಟೆಯನ್ನು ಬಂದ್ ಮಾಡಿತ್ತು. ವೈರಸ್ ಹರಡುವಿಕೆ ಹಿಂದೆ ಮಾರುಕಟ್ಟೆಯ ಪಾತ್ರ ಇರುವುದು ಸ್ಪಷ್ಟ. ಆದರೆ ಯಾವ ರೀತಿಯ ಪಾತ್ರ ಎಂಬುದನ್ನು ತಿಳಿಯುವುದಕ್ಕೆ ಹೆಚ್ಚಿನ ಸಂಶೋಧನೆಯ ಅಗತ್ಯವಿದೆ ಎಂದರು. 

Follow us on Social media

About the author

×

Hello!

If you want to receive regular new updates, please click whatsapp icon and save our number on your phone. You will be getting regular news updates on WhatsApp.

×