Breaking News

ಕೊರೋನಾ ವೈರಸ್ ನಿರ್ವಹಣೆ: ಬಿಬಿಎಂಪಿ ರಾಯಭಾರಿಯಾಗಿ ನಟ ರಮೇಶ್ ಅರವಿಂದ್ ನೇಮಕ

ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಹೆಚ್ಚುತ್ತಿರುವ ಕೊರೋನಾ ಸೋಂಕಿನ ಬಗ್ಗೆ ಅರಿವು ಮೂಡಿಸುವ ಉದ್ದೇಶದಿಂದ ಬಿಬಿಎಂಪಿ ಕೋವಿಡ್‌ ನಿಯಂತ್ರಣ ರಾಯಭಾರಿಯನ್ನಾಗಿ ಹಿರಿಯ ನಟ ರಮೇಶ್‌ ಅರವಿಂದ್‌ ಅವರನ್ನು ಆಯ್ಕೆ ಮಾಡಿದೆ.

ರಾಜ್ಯದ ಅತಿ ಹೆಚ್ಚು ಸೋಂಕು ಪ್ರಕರಣಗಳು ಬೆಂಗಳೂರಿನಲ್ಲಿ ದೃಢಪಡುತ್ತಿರುವ ಹಿನ್ನೆಲೆಯಲ್ಲಿ ನಗರ ಜನರಲ್ಲಿ ಕೊರೋನಾ ಕುರಿತು ಜಾಗೃತಿ ಮೂಡಿಸುವ ಉದ್ದೇಶದಿಂದ ಜಾಗೃತಿ ಅಭಿಯಾನ ಆರಂಭಿಸಲು ಮುಂದಾಗಿದೆ. ಈ ಅಭಿಯಾನದ ರಾಯಭಾರಿಯಾಗಿ ನಟ ರಮೇಶ್ ಅರವಿಂದ್ ಅವರನ್ನು ಆಯ್ಕೆ ಮಾಡಲಾಗಿದ್ದು,  ಸೋಂಕಿನಿಂದ ಮುಕ್ತವಾಗಿರುವುದು ಹೇಗೆ ಎಂಬುದು ಸೇರಿದಂತೆ ಸೋಂಕಿನ ಕುರಿತು ಅರಿವು ಮೂಡಿಸುವುದು ಅಭಿಯಾನದ ಪ್ರಮುಖ ಉದ್ದೇಶವಾಗಿದೆ.

ಬಿಬಿಎಂಪಿಯ ಕಾರ್ಯಗಳನ್ನು ಜನರಿಗೆ ಮುಟ್ಟಿಸುವ ಉದ್ದೇಶದಿಂದ ರಮೇಶ್‌ ಅರವಿಂದ್‌ ಅವನ್ನು ರಾಯಭಾರಿಯಾಗಿ ನೇಮಿಸಿಕೊಂಡಿದೆ. ಜತೆಗೆ ಬಿಬಿಬಿಎಂಪಿ ವ್ಯಾಪ್ತಿಗೆ ಹೊಸದಾಗಿ ರಚನೆಯಾಗಿರುವ ಕೋವಿಡ್‌ ಕಾರ್ಯಪಡೆ ಸಮಿತಿಯ ಸದಸ್ಯರಾಗಿ ರಮೇಶ್‌ ಅರವಿಂದ್‌ ಅವರನ್ನು ನೇಮಕ ಮಾಡಿಕೊಳ್ಳಲಾಗಿದೆ ಎಂದು ಬಿಬಿಎಂಪಿ ಆಯುಕ್ತ ಎನ್ ಮಂಜುನಾಥ್ ಪ್ರಸಾದ್ ಹೇಳಿದ್ದಾರೆ.

ಬೆಂಗಳೂರಿನಲ್ಲಿ ಕೊರೋನಾ ವೈರಸ್ ನಿಯಂತ್ರಣಕ್ಕೆ ತರಲು ಸಮಿತಿ ರಚನೆ ಮಾಡಲಾಗಿದೆ. ಈ ಸಮಿತಿಯಲ್ಲಿ ವೈದ್ಯರು, ಅಧಿಕಾರಿಗಳು ಸೇರಿದಂತೆ ನುರಿತ ತಜ್ಞರು ಇದ್ದು, ಸೋಂಕು ಪ್ರಕರಣಗಳ ಸಂಖ್ಯೆಯನ್ನು ಕಡಿಮೆ ಮಾಡಲು ಶ್ರಮಿಸಲಾಗುತ್ತಿದೆ ಎಂದು ಆಯುಕ್ತ ಮಂಜುನಾಥ್ ಪ್ರಸಾದ್ ಹೇಳಿದರು.

ಇನ್ನು ತಮಗೆ ಸಿಕ್ಕ ಹೊಸ ಅವಕಾಶದ ಕುರಿತು ಮಾತನಾಡಿದ ರಮೇಶ್ ಅರವಿಂದ್, ಈ ಬಗ್ಗೆ ನನಗೆ ಮಾಹಿತಿ ಸಿಕ್ಕಾಗ ನನ್ನ ಜವಾಬ್ದಾರಿ ಇನ್ನೂ ಹೆಚ್ಚಾಯಿತೆಂಬ ಭಾವನೆ ಬಂದಿದೆ. ನನ್ನ ಜವಾಬ್ದಾರಿ ಕುರಿತಂತೆ ಸಾರ್ವಜನಿಕರು, ತಜ್ಞರು ಅಥವಾ ಬೇರೆ ಯಾರೇ ಆದರೂ  ಯಾವುದೇ ರೀತಿಯ ಸಲಹೆಗಳನ್ನು ನೀಡಿದರೂ ನಾನು ಸ್ವೀಕರಿಸುತ್ತೇನೆ. ಈ ಬಗ್ಗೆ ನಾನು ಈಗಾಗಲೇ ಮಾಹಿತಿ ಕಲೆಹಾಕಲು ಆರಂಭಿಸಿದ್ದು, ರೆಸ್ಚೋರೆಂಟ್ ಗಳಿಗೆ ಹೋಲಿಕೆ ಮಾಡಿದರೆ ವಿಮಾನಗಳಲ್ಲಿ ಸೋಂಕು ಹರಡುವಿಕೆ ಪ್ರಮಾಣ ಕಡಿಮೆ ಎಂಬ ಮಾಹಿತಿ ನನಗೆ ತಿಳಿಯಿತು. ಸಾಮಾನ್ಯವಾಗಿ ಡ್ರಾಪ್ಲೆಟ್ ಗಳಿಂದ ಸೋಂಕು ಹರಡುತ್ತದೆ. ರೆಸ್ಟೋರೆಂಟ್ ಗಳಲ್ಲಿ ಈ ಡ್ರಾಪ್ ಲೆಟ್ ಗಳ ಈ ಪ್ರಮಾಣ ಹೆಚ್ಚು. ಹೀಗಾಗಿ ಜನ ತುಂಬಾ ಜಾಗರೂಕತೆಯಿಂದ ಇರಬೇಕು ಎಂದು ಹೇಳಿದರು. 

ಬಿಬಿಎಂಪಿ ಸಮಿತಿಯಲ್ಲಿ ನುರಿತ ವೈದ್ಯರು
ಈ ಸಮಿತಿಯಲ್ಲಿ ಬಿಬಿಎಂಪಿ ಆಯುಕ್ತ ಡಿ.ರಂದೀಪ್
ಬಿಬಿಎಂಪಿ ವಿಶೇಷ ಆಯುಕ್ತ ಡಾ.ಗಿರಿಧರ ಆರ್ ಬಾಬು, 
ಪ್ರಾಧ್ಯಾಪಕ, ಮುಖ್ಯಸ್ಥ- ಲೈಫ್‌ಕೋರ್ಸ್ ಎಪಿಡೋಮಾಲಜಿ, ಐಐಪಿಹೆಚ್, ಪಿಎಚ್‌ಎಫ್‌ಐ, ವಿಜೇಂದ್ರ, 
ಮುಖ್ಯ ಆರೋಗ್ಯ ಅಧಿಕಾರಿ- ಸಾರ್ವಜನಿಕ ಆರೋಗ್ಯ, ಬಿಬಿಎಂಪಿ, ನಿರ್ಮಲಾ ಬುಗ್ಗಿ, 
ಮುಖ್ಯ ಆರೋಗ್ಯ ಅಧಿಕಾರಿ- ಕ್ಲಿನಿಕಲ್, ಬಿಬಿಎಂಪಿ , 
ಜಯನಗರದ ಅಪೊಲೊ ಆಸ್ಪತ್ರೆಗಳ ಶ್ವಾಸಕೋಶ ಶಾಸ್ತ್ರಜ್ಞ ಡಾ.ರವಿ ಮೆಹ್ತಾ, 
ವಿಟಾಲಾ ಇಂಟರ್ನ್ಯಾಷನಲ್ ಇನ್ಸ್ಟಿಟ್ಯೂಟ್, ನೇತ್ರಶಾಸ್ತ್ರದ ವೈದ್ಯಕೀಯ ನಿರ್ದೇಶಕ ಡಾ.ಕೃಷ್ಣ ಮೂರ್ತಿ, 
ಡಾ.ವೆಂಕಟೇಶ್, ಡಿಎಸ್ಒ, ಕಣ್ಗಾವಲು, ಸಂಪರ್ಕ ಪತ್ತೆ ಹಚ್ಚುವಿಕೆ, ಧಾರಕ ವಲಯಗಳ ಸಮನ್ವಯ, 
ಡಾ. ಆಸಿಸ್ ಸತಪತಿ, ಪ್ರಾದೇಶಿಕ ತಂಡದ ಪ್ರಮುಖ ಮತ್ತು ಎನ್‌ಪಿಒ- ವಿಶ್ವ ಆರೋಗ್ಯ ಸಂಸ್ಥೆ, ಬೆಂಗಳೂರು, 
ಡಬ್ಲ್ಯುಎಚ್‌ಒ-ಬೆಂಗಳೂರಿನ ಕಣ್ಗಾವಲು ವೈದ್ಯಕೀಯ ಅಧಿಕಾರಿ ಡಾ.ನಾಗರಾಜ ಎನ್‌.ಟಿ, 
ನಟ ರಮೇಶ್ ಅರವಿಂದ್, 
ನಟ ಡಾ.ರಂಗನಾಥ್, 
ಪ್ರಾಧ್ಯಾಪಕ ಮತ್ತು ಮುಖ್ಯಸ್ಥ, ಬಿಎಂಸಿಆರ್‌ಐ, ಡಾ.ರಮೇಶ್ ಮಸ್ತಿ, 
ಕಿಮ್ಸ್ ಪ್ರಾಧ್ಯಾಪಕ, ಡಾ.ಸುರೇಶ್ ಜಿಕೆ, ಎನ್‌ಯುಹೆಚ್ಎಂ, 
ಬಿಬಿಎಂಪಿ, ಡಾ. ಆರ್‌ಸಿಎಚ್, ಬಿಬಿಎಂಪಿ, 
ಡಾ.ಪ್ರದೀಪ್ ರಂಗಪ್ಪ, (ಇಂಟೆನ್ಸಿವಿಸ್ಟ್, ಕೊಲಂಬಿಯಾ ಏಷ್ಯಾ ಆಸ್ಪತ್ರೆ) ಇದ್ದಾರೆ.

ಇದಲ್ಲದೆ ಸಮಿತಿಯಲ್ಲಿರುವ ವಿಶೇಷ ಆಹ್ವಾನಿತರು / ಸಲಹೆಗಾರರೆಂದರೆ: ತಾಂತ್ರಿಕ ಸಲಹಾ ಸಮಿತಿಯ ಅಧ್ಯಕ್ಷ ಡಾ.ಎಂ.ಕೆ.ಸದರ್ಶನ್, (ನ್ಯೂರೋವೈರಾಲಜಿ, ನಿಮ್ಹಾನ್ಸ್), ಪ್ರೊಫೆಸರ್ ಗುರುರಾಜ್, (ಡೀನ್, ನಿಮ್ಹಾನ್ಸ್), ಡಾ.ಲೋಕೇಶ್ ಅಲಹರಿ, (ಡಬ್ಲ್ಯುಎಚ್‌ಒ ಉಪ-ಪ್ರಾದೇಶಿಕ ತಂಡದ ನಾಯಕ, ಕರ್ನಾಟಕ, ಯುನಿಸೆಫ್), ರೋಟರಿ ಪ್ರತಿನಿಧಿಗಳು. 

Follow us on Social media

About the author

×

Hello!

If you want to receive regular new updates, please click whatsapp icon and save our number on your phone. You will be getting regular news updates on WhatsApp.

×