Breaking News

ಕೊರೋನಾ ವೈರಸ್ ಅನ್ನು ಕೇರಳ ಬಗ್ಗು ಬಡಿದಿದ್ದು, 2 ದಿನಗಳಿಂದ ಹೊಸ ಪ್ರಕರಣ ದಾಖಲಾಗಿಲ್ಲ: ಸಿಎಂ ಪಿಣರಾಯಿ ವಿಜಯನ್

ಕೊಚ್ಚಿನ್ : ಮಾರಕ ಕೊರೋನಾ ವೈರಸ್ ಕೇರಳದಲ್ಲಿ ಸಂಪೂರ್ಣ ಹತೋಟಿಗೆ ಬಂದಿದ್ದು, ಕಳೆದ 2 ದಿನಗಳಿಂದ ರಾಜ್ಯದಲ್ಲಿ ಯಾವುದೇ ಹೊಸ ಪಾಸಿಟಿವ್ ಪ್ರಕರಣಗಳು ಬಂದಿಲ್ಲ ಎಂದು ಸಿಎಂ ಪಿಣರಾಯಿ ವಿಜಯನ್ ಹೇಳಿದ್ದಾರೆ.

ಈ ಬಗ್ಗೆ ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪಿಣರಾಯಿ ವಿಜಯನ್ ಅವರು, ‘ಕಳೆದ ಎರಡು ದಿನಗಳಿಂದ ಕೇರಳದಲ್ಲಿ ಕೊರೊನಾ ವೈರಸ್‌ ಹೊಸ ಪ್ರಕರಣಗಳು ದಾಖಲಾಗಿಲ್ಲ. 61 ಮಂದಿ ಕೋವಿಡ್‌-19 ಸೋಂಕಿನಿಂದ ಗುಣಮುಖರಾಗಿದ್ದು, ಪ್ರಸ್ತುತ 34 ಮಂದಿ ಮಾತ್ರ  ಚಿಕಿತ್ಸೆಯಲ್ಲಿದ್ದಾರೆ ಎಂದು ಹೇಳಿದರು.

ಅಂತೆಯೇ ಸೋಂಕಿತರ ಸಂಪರ್ಕಕ್ಕೆ ಬಂದಿದ್ದ 21,352 ಮಂದಿ ಪ್ರಾಥಮಿಕ ಮತ್ತು ದ್ವಿತೀಯ ಸಂಪರ್ಕಿತರನ್ನು ಹೋಮ್ ಕ್ವಾರಂಟೈನ್ ಮಾಡಲಾಗಿದೆ. ಇನ್ನುಳಿಂದ 372 ಮಂದಿಯನ್ನು ರಾಜ್ಯಾದ್ಯಂತ ವಿವಿಧ ಆಸ್ಪತ್ರೆಗಳಲ್ಲಿ ಅವಲೋಕನದಲ್ಲಿ ಇರಿಸಲಾಗಿದೆ. ಪ್ರಸ್ತುತ ಕೇರಳದಲ್ಲಿ 84  ಹಾಟ್‌ ಸ್ಪಾಟ್‌ಗಳಿದ್ದು, ಕೊರೋನಾ ವೈರಸ್ ಕೇರಳದಲ್ಲಿ ಸಂಪೂರ್ಣ ನಿಯಂತ್ರಣದಲ್ಲಿದೆ ಎಂದು ಪಿಣರಾಯಿ ವಿಜಯನ್ ಹೇಳಿದರು.

ವಲಸೆ ಕಾರ್ಮಿಕರ ಸ್ಥಳಾಂತರಕ್ಕೆ ಕ್ರಮ
ಇನ್ನು ಕೇರಳದಲ್ಲಿರುವ ವಲಸೆ ಕಾರ್ಮಿಕರ ಸ್ಥಳಾಂತರಕ್ಕೆ ಕ್ರಮ ಕೈಗೊಳ್ಳಲಾಗಿದ್ದು, 1,66,263 ಮಂದಿ ಇತರ ರಾಜ್ಯಗಳಿಂದ ಹಿಂತಿರುಗಲು ನೋಂದಾಯಿಸಿಕೊಂಡಿದ್ದಾರೆ ಹಾಗೂ 515 ಕೇರಳ ನಿವಾಸಿಗಳು ಸೋಮವಾರ ರಾಜ್ಯಕ್ಕೆ ಮರಳಿದ್ದಾರೆ. ಇಂದು ಮಧ್ಯಾಹ್ನ 515 ಮಂದಿ  ರಾಜ್ಯಕ್ಕೆ ಆಗಮಿಸಿದ್ದಾರೆ. ಇದುವರೆಗೂ 28,272 ಮಂದಿ ಪಾಸ್‌ಗೆ ಹೆಸರು ನೋಂದಾಯಿಸಿಕೊಂಡಿದ್ದಾರೆ ಹಾಗೂ ಈಗಾಗಲೇ 5,470 ಮಂದಿಗೆ ಪಾಸ್‌ ವಿತರಿಸಲಾಗಿದೆ. ಕರ್ನಾಟಕದಿಂದ ಕೇರಳಕ್ಕೆ ಮರಳಲು 55,188 ಮಂದಿ ತಮ್ಮ ಹೆಸರು ನೋಂದಾಯಿಸಿಕೊಂಡಿದ್ದಾರೆ.  ತಮಿಳುನಾಡಿನಿಂದ 50,863 ಮತ್ತು ಮಹಾರಾಷ್ಟ್ರದಿಂದ 22,515 ಮಂದಿ ಹೆಸರು ನೋಂದಾಯಿಸಿಕೊಂಡಿದ್ದಾರೆ ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ತಿಳಿಸಿದ್ದಾರೆ.

ಲಾಕ್‌ಡೌನ್‌ ಅನ್ನು ಕೇಂದ್ರ ಸರ್ಕಾರ ಮೇ.17ರವರೆಗೆ ಮುಂದುವರಿಸಲಾಗಿದೆ. ಆದರೆ, ಕೇರಳ ರಾಜ್ಯದಲ್ಲಿ ಹಸಿರು ಹಾಗೂ ಆರೆಂಜ್‌ ವಲಯಗಳಲ್ಲಿ ಕೆಲವು ನಿಯಮಗಳನ್ನು ಸಡಿಲಗೊಳಿಸಲಾಗಿದೆ. ಅಲಪ್ಪುಳ, ಎರ್ನಾಕುಲಂ ಹಾಗೀ ತ್ರಿಶೂರ್‌ ಹಸಿರು ಜಿಲ್ಲೆಗಳಾಗಿವೆ ಹಾಗೂ  ತಿರುವನಂತಪುರಂ, ಕೊಲ್ಲಂ ಪಥನಮ್‌ತಿಟ್ಟ, ಮಲಪುರಂ. ಕೊಝಿಕೊಡ್‌, ಪಲಕಡ್‌, ಇಡುಕ್ಕಿ, ಕಾಸರಗೂಡು ಹಾಗೂ ವಯನಾಡ್‌ ಆರೆಂಜ್‌ ಜಿಲ್ಲೆಯಗಳಾಗಿವೆ. ಕಣ್ಣೂರು ಮತ್ತು ಕೊಟ್ಟಾಯಂ ಕೆಂಪು ವಲಯದ ಜಿಲ್ಲೆಗಳಾಗಿವೆ.

Follow us on Social media

About the author

×

Hello!

If you want to receive regular new updates, please click whatsapp icon and save our number on your phone. You will be getting regular news updates on WhatsApp.

×