Breaking News

ಕೊರೊನಾ ರೋಗಿಗಳ ಫೋಟೋ ಸೆರೆಹಿಡಿದರೆ ಕಠಿಣ ಕ್ರಮ: ಭಾಸ್ಕರ್ ರಾವ್ ಎಚ್ಚರಿಕೆ

ಬೆಂಗಳೂರು: ಇನ್ಮುಂದೆ ಅನುಮತಿ ಇಲ್ಲದೆ‌ ಕೊರೊನಾ ಸೋಂಕಿತ ರೋಗಿಗಳ ಛಾಯಾಚಿತ್ರ ಸೆರೆಹಿಡಿಯದಂತೆ ನಗರ ಪೊಲೀಸ್​ ಆಯುಕ್ತ ಭಾಸ್ಕರ್​ ರಾವ್ ಅವರು ಖಡಕ್ ಎಚ್ಚರಿಕೆ  ನೀಡಿದ್ದಾರೆ.

ಕೊರೊನಾ ರೋಗಿಗಳನ್ನು ಆಸ್ಪತ್ರೆಗೆ ಕರೆದೊಯ್ಯುವಾಗ ಸ್ಥಳೀಯರು ತಮ್ಮ ಮೊಬೈಲ್​ಗಳಲ್ಲಿ ಛಾಯಾಚಿತ್ರ ಸೆರೆಹಿಡಿಯುವುದು ಹೆಚ್ಚಾಗುತ್ತಿದ್ದು, ಅದು ಮಾಧ್ಯಮಗಳಲ್ಲೂ ಬಿತ್ತರವಾಗುತ್ತಿದೆ.‌‌ ಹೀಗಾಗಿ ಈ ಕುರಿತು ಅನೇಕ ಜನ ದೂರು ನೀಡುತ್ತಿದ್ದಾರೆ. ಈ ರೀತಿ ಫೋಟೋ/ವಿಡಿಯೋ ಸೆರೆಹಿಡಿಯುವುದರಿಂದ ನಮ್ಮ ಖಾಸಗಿತನಕ್ಕೆ ಧಕ್ಕೆಯಾಗುತ್ತದೆ ಹಾಗೂ ಮುಜುಗರ ಉಂಟಾಗುತ್ತದೆ ಎಂದು ಅವರು ದೂರುತ್ತಿದ್ದಾರೆ.

ಹೀಗಾಗಿ ಯಾರೂ ಅನುಮತಿ ಇಲ್ಲದೇ ಕೊರೊನಾ ರೋಗಿಗಳ ಛಾಯಾಚಿತ್ರ ಸೆರೆಹಿಡಿಯುವಂತಿಲ್ಲ. ಈ ನಿಯಮ  ಉಲ್ಲಂಘಿಸಿದಲ್ಲಿ ಅಂತಹವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಟ್ವೀಟ್ ಮೂಲಕ ಮಾಹಿತಿ ನೀಡಿದ್ದಾರೆ.

https://twitter.com/deepolice12/status/1274722123420844032
Follow us on Social media

About the author

×

Hello!

If you want to receive regular new updates, please click whatsapp icon and save our number on your phone. You will be getting regular news updates on WhatsApp.

×