Breaking News

ಕಾಸರಗೋಡು : ಇಂದು 8 ಮಂದಿಗೆ ಕೊರೋನ ಪಾಸಿಟಿವ್

ಕಾಸರಗೋಡು :  ಜಿಲ್ಲೆಯಲ್ಲಿ ಸೋಮವಾರ 8 ಮಂದಿಗೆ ಕೊರೋನಾ ಪಾಸಿಟಿವ್ ಪತ್ತೆಯಾಗಿದೆ. ಅಲ್ಲದೆ ಈ ನಡುವೆ 7 ಮಂದಿಯ ವರದಿ ನೆಗೆಟಿವ್ ಬಂದಿದೆ. ಜಿಲ್ಲೆಯಲ್ಲಿ ರೋಗಿಗಳ ಸಂಖ್ಯೆ 109ಕ್ಕೆ ಏರಿಕೆಯಾಗಿದೆ ಎಂದು ಜಿಲ್ಲಾ ವೈದ್ಯಾಧಿಕಾರಿ ಡಾ.ಎ.ವಿ. ರಾಮದಾಸ್ ತಿಳಿಸಿದ್ದಾರೆ.

ಕೊರೋನಾ ಪಾಸಿಟಿವ್ ಆದವರಲ್ಲಿ ಮೂವರು ಕುವೈಟ್ ನಿಂದ, ಮೂವರು ಮಹಾರಾಷ್ಟ್ರದಿಂದ, ಇಬ್ಬರು ದುಬಾಯಿಯಿಂದ ಆಗಮಿಸಿದವರು. ಕುವೈಟ್ ನಿಂದ ಆಗಮಿಸಿದ್ದ ನೀಲೇಶ್ವರ ನಗರಸಭೆ ವ್ಯಾಪ್ತಿಯ ನಿವಾಸಿಗಳಾದ 49, 45, 41 ವರ್ಷದ ವ್ಯಕ್ತಿಗಳು, ದುಬಾಯಿಯಿಂದ ಆಗಮಿಸಿದ್ದ 42 ವರ್ಷದ ವ್ಯಕ್ತಿ, ಚೆರುವತ್ತೂರು ಪಂಚಾಯತ್ ನಿವಾಸಿ 30 ವರ್ಷದ ವ್ಯಕ್ತಿ, ಮಹಾರಾಷ್ಟ್ರದಿಂದ ಆಗಮಿಸಿದ್ದ ಮಂಗಲ್ಪಾಡಿ ನಿವಾಸಿ 60 ವರ್ಷದ ವ್ಯಕ್ತಿ, ಉದುಮಾ ಪಂಚಾಯತ್ ನಿವಾಸಿ 44 ವರ್ಷದ ವ್ಯಕ್ತಿ, ವಲಿಯಪರಂಬ ನಿವಾಸಿ 58 ವರ್ಷದ ವ್ಯಕ್ತಿ ಸೋಂಕು ಬಾಧಿತರು. ಇವರಲ್ಲಿ ಚೆರುವತ್ತೂರು, ವಲಿಯಪರಂಬ ನಿವಾಸಿಗಳು ರೂಂ ಕ್ವಾರೆಂಟೈನ್ ನಲ್ಲಿ,ಉಳಿದವರು ಸರಕಾರಿ ನಿಗಾದಲ್ಲಿದ್ದರು.

ಕೋವಿಡ್ ಸೋಂಕು ಖಚಿತಗೊಂಡು ಉಕ್ಕಿನಡ್ಕ ಕಾಸರಗೋಡು ಮೆಡಿಕಲ್ ಕಾಲೇಜಿನಲ್ಲಿ ದಾಖಲಾಗಿದ್ದ 5 ಮಂದಿ, ಪರಿಯಾರಂ ಮೆಡಿಕಲ್ ಕಾಲೇಜಿನಲ್ಲಿ ದಾಖಲಾಗಿದ್ದ ಇಬ್ಬರು ಕೋವಿಡ್ ರೋಗದಿಂದ ಗುಣಮುಖರಾಗಿದ್ದಾರೆ. ಉಕ್ಕಿನಡ್ಕ ಕಾಸರಗೋಡು ಮೆಡಿಕಲ್ ಕಾಲೇಜಿನಲ್ಲಿ ದಾಖಲಾಗಿದ್ದ, ಮಹಾರಾಷ್ಟ್ರದಿಂದ ಬಂದಿದ್ದ ಕಾಸರಗೋಡು ನಗರಸಭೆ ವ್ಯಾಪ್ತಿಯ ನಿವಾಸಿಗಳಾದ 39, 48 ವರ್ಷದ ವ್ಯಕ್ತಿಗಳು, ಪೈವಳಿಕೆ ಪಂಚಾಯತ್ ನಿವಾಸಿ 45 ವರ್ಷದ ವ್ಯಕ್ತಿ, ಕುತ್ತಿಕೋಲ್ ನಿವಾಸಿ 31 ವರ್ಷದ ವ್ಯಕ್ತಿ, ಪರಿಯಾರಂ ವೈದ್ಯಕೀಯ ಕಾಲೇಜಿನಲ್ಲಿ ದಾಖಲಾಗಿದ್ದ, ಸಂಪರ್ಕ ಮೂಲಕ ಸೋಂಕುತಗುಲಿದ್ದ ಈಸ್ಟ್ ಏಳೇರಿ ನಿವಾಸಿ28 ವರ್ಷದ ನಿವಾಸಿ, ಕುವೈತ್ ನಿಂದಆಗಮಿಸಿದ್ದ ಪಿಲಿಕೋಡ್ ನಿವಾಸಿ 33 ವರ್ಷದ ಮಹಿಳೆ ರೋಗದಿಂದಗುಣಮುಖರಾದವರು.

ಜಿಲ್ಲೆಯಲ್ಲಿ ಒಟ್ಟು 3820 ಮಂದಿ ನಿಗಾದಲ್ಲಿದ್ದಾರೆ. ಮನೆಗಳಲ್ಲಿ3324 ಮಂದಿ, ಆಸ್ಪತ್ರೆಗಳಲ್ಲಿ 496 ಮಂದಿ ನಿಗಾದಲ್ಲಿದ್ದಾರೆ.224 ಮಂದಿ ತಮ್ಮ ನಿಗಾ ಅವಧಿಪೂರ್ಣಗೊಳಿಸಿದ್ದಾರೆ. 11 ಮಂದಿ ಸೋಮವಾರ ನೂತನವಾಗಿಐಸೊಲೇಷನ್ ವಾರ್ಡ್ ಗಳಿಗೆ ದಾಖಲಾಗಿದ್ದಾರೆ. ಜಿಲ್ಲೆಯಲ್ಲಿ ಒಟ್ಟು 8567 ಮಂದಿಯ ಸ್ಯಾಂಪಲ್ ತಪಾಸಣೆಗೆಕಳುಹಿಸಲಾಗಿದೆ. ಸೋಮವಾರ 30 ಮಂದಿಯ ಸ್ಯಾಂಪಲ್ ತಪಾಸಣೆಗೆ ಕಳುಹಿಸಲಾಗಿದೆ. 293 ಮಂದಿಯ ತಪಸಣೆ ಫಲಿತಾಂಶ ಲಭಿಸಿಲ್ಲ.

Follow us on Social media

About the author

×

Hello!

If you want to receive regular new updates, please click whatsapp icon and save our number on your phone. You will be getting regular news updates on WhatsApp.

×