Breaking News

ಕಾಶ್ಮೀರದಲ್ಲಿ ಬಸ್ ಓಡಿಸೋಕೆ ಅನುಮತಿ ಕೇಳಿದ ಮಂಗಳೂರಿಗ!

ಮಂಗಳೂರು: ಕಾಶ್ಮೀರಕ್ಕೆ ಸಂಬಂಧಿಸಿದ ಮಹತ್ವದ ವಿಧಿಯನ್ನ ಕೇಂದ್ರ ಸರ್ಕಾರ ರದ್ದುಗೊಳಿಸಿದ ಬೆನ್ನಲ್ಲೇ ದೇಶಾದ್ಯಂತ ಸಂಭ್ರಮ ಮುಗಿಲು ಮುಟ್ಟಿದ್ದು, ಹಲವರು ತಮ್ಮ ಟ್ವಿಟ್ಟರ್, ಫೇಸ್ ಬುಕ್ ಗಳಲ್ಲಿ ವಿಭಿನ್ನ ರೀತಿಯಲ್ಲಿ ಸಂಭ್ರಮ ಹಂಚಿಕೊಂಡಿದ್ದಾರೆ. ಈ ನಡುವೆ ಮಂಗಳೂರಿನ ಬಸ್ ಮಾಲಕರೊಬ್ಬರು ಈ ಬಗ್ಗೆ ವಿಭಿನ್ನವಾಗಿ ಟ್ವೀಟ್ ಮಾಡಿದ್ದು, ಕಾಶ್ಮೀರದಲ್ಲಿ ತನ್ನ ಬಸ್ಸುಗಳನ್ನು ಓಡಿಸಲು ಅನುಮತಿ ಕೊಡ್ತೀರಾ ಎಂದು ಪ್ರಧಾನಿ ಮೋದಿ, ಅಮಿತ್ ಶಾ ಮತ್ತು ನಿತಿನ್ ಗಡ್ಕರಿಗೆ ಟ್ವೀಟ್ ಮಾಡಿದ್ದಾರೆ.
ಮಂಗಳೂರು-ಮುಳಿಹಿತ್ಲು ಮಧ್ಯೆ ಸಂಚರಿಸೋ 27 ನಂಬರಿನ ಗಣೇಶ್ ಪ್ರಸಾದ್ ಬಸ್ಸಿನ ಮಾಲಕ ಮತ್ತು ದ.ಕ ಬಸ್ ಮಾಲಕರ ಸಂಘದ ಅಧ್ಯಕ್ಷರಾಗಿರೋ ದಿಲ್ ರಾಜ್ ಆಳ್ವಾ ಎಂಬವರೇ ಈ ಟ್ವೀಟ್ ಮಾಡಿರುವವರು. ಸದ್ಯ ಇವರ ಈ ಟ್ವೀಟ್ ಸಾಮಾಜಿಕ ತಾಣಗಳಲ್ಲಿ ವೈರಲ್ ಆಗಿದೆ. ಕೆಲವರು ಈ ಬಗ್ಗೆ ಅನೇಕ ರೀತಿಯಲ್ಲಿ ಕಮೆಂಟ್ ಕೂಡ ಮಾಡಿದ್ದಾರೆ. ಕಾಶ್ಮೀರ ಕುರಿತ ಕೇಂದ್ರದ ನಡೆಯ ಬಗ್ಗೆ ಇವರು ಈ ಟ್ವಿಟ್ ಮಾಡಿದ್ದು, ಸದ್ಯ ವೈರಲ್ ಆಗಿದೆ. ಈಗಾಗಲೇ ಇವರ ಬಳಿ ಹಲವು ಬಸ್ಸುಗಳಿದ್ದು, ಬಹುಶಃ ಅನುಮತಿ ಸಿಕ್ಕರೆ ಕಾಶ್ಮೀರದಲ್ಲಿ ಬಸ್ ಓಡಿಸೋದು ಕಷ್ಟವಲ್ಲ. ಆದ್ರೆ ಸಂಭ್ರಮಿಸಲು ಇವರು ಮಾಡಿರೋ ಈ ವಿಭಿನ್ನ ಟ್ವಿಟ್ ವೈರಲ್ ಆಗಿದೆ.

Follow us on Social media

About the author

×

Hello!

If you want to receive regular new updates, please click whatsapp icon and save our number on your phone. You will be getting regular news updates on WhatsApp.

×