Breaking News

ಕರ್ನಾಟಕಕ್ಕೆ ಗುಡ್ ನ್ಯೂಸ್: ರಾಜ್ಯದ 13 ಜಿಲ್ಲೆಗಳಲ್ಲಿ ರಿಲೀಫ್, ಆದರೆ ಮದ್ಯಕ್ಕೆ ಬ್ರೇಕ್; ಏನಿರುತ್ತೆ?, ಏನಿರಲ್ಲ?!

ಬೆಂಗಳೂರು: ರಾಜ್ಯದ 13 ಜಿಲ್ಲೆಗಳಲ್ಲಿ ಕೊರೋನಾ ಕೊರೋನಾ ಸೋಂಕು ಇಲ್ಲದಿರುವುದರಿಂದ ಅವುಗಳನ್ನು ಗ್ರೀನ್ ಜೋನ್ ಎಂದು ಗುರುತಿಸಲಾಗಿದ್ದು ಇದೀಗ ಕೆಲ ಷರತ್ತುಗಳ ಮೇಲೆ ಸಹಜ ಜೀವನಕ್ಕೆ ಅವಕಾಶ ಮಾಡಿಕೊಡಲಾಗಿದೆ. 

ಇದರಿಂದ 14 ಜಿಲ್ಲೆಗಳ ಜನರು 33 ದಿನಗಳ ಲಾಕ್ ಡೌನ್ ನಿಂದ ವಿನಾಯ್ತಿ ಪಡೆದು ನೆಮ್ಮದಿಯಾಗಿ ಉಸಿರಾಡುವಂತಾಗಿದೆ. ಆದರೆ, ವಿನಾಯ್ತಿಯಲ್ಲೂ ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳುವುದು ಕಡ್ಡಾಯ ಎಂದು ರಾಜ್ಯ ಸರ್ಕಾರ ಹೊರಡಿಸಿರುವ ಪರಿಷ್ಕೃತ ಮಾರ್ಗಸೂಚಿಗಳಲ್ಲಿ ಸ್ಪಷ್ಟಪಡಿಸಿದೆ. 

13 ಜಿಲ್ಲೆಗಳಿಗೆ ಅನ್ವಯವಾಗುವಂತೆ ಹೊಸ ಮಾರ್ಗಸೂಚಿಯನ್ನು ರಾಜ್ಯ ಸರ್ಕಾರ ಬಿಡುಗಡೆ ಮಾಡಿದೆ. ಅದರ ಪ್ರಕಾರ, ಚಾಮರಾಜನಗರ, ಕೊಪ್ಪಳ, ಕೋಲಾರ, ಉಡುಪಿ, ರಾಯಚೂರು, ಹಾವೇರಿ, ಯಾದಗಿರಿ, ದಾವಣಗೆರೆ, ಶಿವಮೊಗ್ಗ, ಹಾಸನ, ಚಿತ್ರದುರ್ಗ, ಚಿಕ್ಕಮಗಳೂರು ಜಿಲ್ಲೆಗಳಿಗೆ ಅನ್ವಯವಾಗಲಿದೆ. ಇನ್ನು ಕೊಡಗು ಜಿಲ್ಲೆಗೂ ವಿನಾಯಿತಿ ಸಿಕ್ಕಿದ್ದು ರಾಮನಗರದಲ್ಲಿ ಕೈಗಾರಿಕೆ ಹೊರತು ಪಡಿಸಿ ಉಳಿದ ಅಂಗಡಿ ಮುಂಗಟ್ಟು ತೆರೆಯಲು ಅವಕಾಶ ಸಿಕ್ಕಿದೆ.

ಹೆಚ್ಚು ಕೋವಿಡ್ ಪ್ರಕರಣಗಳಿರುವ ಬೆಂಗಳೂರು ನಗರ, ಬೆಳಗಾವಿ, ಮೈಸೂರು, ವಿಜಯಪುರ, ಬಾಗಲಕೋಟೆ, ಕಲಬುರಗಿ, ಬೀದರ್ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಿಗೆ ಈ ಹಿಂದಿನ ಮಾರ್ಗಸೂಚಿಗಳೇ ಮುಂದುವರಿಯಲಿದೆ. 

ಯಾವುದಕ್ಕೆ ವಿನಾಯ್ತಿ
* ಗ್ರಾಮೀಣ ಪ್ರದೇಶಗಳಲ್ಲಿ ಕೆಲಸ ನಿರ್ವಹಿಸುವ ಉದ್ಯಮಗಳು ಅಂದರೆ, ಮುನ್ಸಿಪಲ್ ಕಾರ್ಪೊರೇಷನ್ ಮತ್ತು ಮುನ್ಸಿಪಾಲಿಟಿಗಳ ವ್ಯಾಪ್ತಿಯ ಹೊರಗಡೆ (ರಾಮನಗರ ಜಿಲ್ಲೆ ಹೊರತುಪಡಿಸಿ)

* ವಿಶೇಷ ಆರ್ಥಿಕ ವಲಯ (ಎಸ್ ಇಝೆಡ್) ಮತ್ತು ರಫ್ತು ಆಧಾರಿತ ಘಟಕಕಗಳು(ಇಒಯು), ಕೈಗಾರಿಕಾ ವಲಯಗಳು ಮತ್ತು ಕೈಗಾರಿಕಾ ಟೌನ್ ಶಿಪ್ ಗಳಲ್ಲಿ ಉತ್ಪಾದನಾಮತ್ತು ಇತರ ಕೈಗಾರಿಕಾ ಘಟಕಗಳು. 

* ಈ ಘಟಕಗಳು ತಮ್ಮ ಕಟ್ಟಡಗಳ ಆವರಣ ಇಲ್ಲವೇ ನೆರೆಯ ಸ್ಥಳದಲ್ಲೇ ಕಾರ್ಮಿಕರು ನೆಲೆಸಲು ವ್ಯವಸ್ಥೆ ಕಲ್ಪಸಬೇಕು ಮತ್ತು ಕರ್ನಾಟಕ ಪರಿಷ್ಕೃತ ಸಮಗ್ರ ಮಾರ್ಗಸೂಚಿಗಳ ಪ್ಯಾರಾ 21(2)ರಲ್ಲಿ ಉಲ್ಲೇಖಿಸಿರುವ ಗುಣಮಟ್ಟ ಕಾರ್ಯನಿರ್ವಹಣಾ ಶಿಷ್ಟಾಚಾರ (ಎಸ್ ಒಪಿ) ಪಾಲಿಸಬೇಕು. 

* ಕಾರ್ಮಿಕರಿಗೆ ಕೆಲಸದ ಸ್ಥಳ ತಲುಪಲು ಸಾರಿಗೆ ವ್ಯವಸ್ಥೆಯನ್ನು ಉದ್ಯೋಗದಾತರೇ ಮಾಡಬೇಕು. ಈ ಹಂತದಲ್ಲಿ ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದು ಕಡ್ಡಾಯ. 

* ಅಂಗಡಿಗಳು ಮತ್ತು ಸ್ಥಾಪನೆ ಕಾಯಿದೆ ಅನುಸಾರ ಸಂಬಂಧಪಟ್ಟ ರಾಜ್ಯ, ಕೇಂದ್ರಾಡಳಿತ ಪ್ರದೇಶಗಳಲ್ಲಿ ನೋಂದಣಿಯಾಗಿರುವ ಎಲ್ಲಾ ಅಂಗಡಿಗಳನ್ನು ತೆರೆಯಬಹುದು. ಇದು ವಸತಿ ಸಂಕೀರ್ಣಗಳು ಮತ್ತು ಮಾರುಕಟ್ಟೆ ಸಂಕೀರ್ಣಗಳಲ್ಲಿರುವ ಅಂಗಡಿಗಳನ್ನು ಕೂಡ ಒಳಗೊಂಡಿದೆ. 

* ಆದರೆ, ಮುನ್ಸಿಪಾಲಿಟಿ ವ್ಯಾಪ್ತಿಯ ಹೊರಗಿನ ಬಹು ಬ್ರಾಂಡ್ ಮತ್ತು ಸಿಂಗಲ್ ಬ್ರಾಂಡ್ ಮಾಲ್ ಗಳಲ್ಲಿನ ಅಂಗಡಿಗಳಿಗೆ ಈ ವಿನಾಯ್ತಿ ಅನ್ವಯವಾಗುವುದಿಲ್ಲ. ಆದರೆ, ಈ ಎಲ್ಲಾ ಅಂಗಡಿಗಳಲ್ಲಿ ಶೇ. 50ರಷ್ಟು ಕಾರ್ಮಿಕರು ಮಾತ್ರ ಇರಬೇಕು ಮತ್ತು ಮಾಸ್ಕ್ ಧರಿಸುವುದು ಹಾಗೂ ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದು ಕಡ್ಡಾಯ. 

* ಮದ್ಯದಂಗಡಿಗಳನ್ನು ತೆರೆವುದಕ್ಕೆ ಅನುಮತಿ ನೀಡಿಲ್ಲ

ಕೋವಿಡ್ ಪ್ರಕರನ ಪತ್ತೆಯಾಗಿದ್ದರೂ, ಈಗ ಸಕ್ರಿಯ ಪ್ರಕರಣಗಳಿಲ್ಲದ ಬಳ್ಳಾರಿ, ಮಂಡ್ಯ, ಬೆಂಗಳೂರು ಗ್ರಾಮೀಣ, ಗದಗ, ತುಮಕೂರು, ಚಿಕ್ಕಬಳ್ಳಾಪುರ, ಉತ್ತರ ಕನ್ನಡ, ಧಾರವಾಡಗಳಲ್ಲಿ ಅಂಗಡಿಗಳನ್ನು ತೆರೆಯುವ ಕುರಿತು ಅಲ್ಲಿನ ಜಿಲ್ಲಾ ಉಸ್ತುವಾರಿ ಸಚಿವರು ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂದು ರಾಜ್ಯ ಮುಖ್ಯ ಕಾರ್ಯದರ್ಶಿ ಟಿ.ಎಂ.ವಿಜಯಭಾಸ್ಕರ್ ಆದೇಶ ಹೊರಡಿಸಿದ್ದಾರೆ.

Follow us on Social media

About the author

×

Hello!

If you want to receive regular new updates, please click whatsapp icon and save our number on your phone. You will be getting regular news updates on WhatsApp.

×