Breaking News

ಉಡುಪಿ: ಕಾಪು ಹೆದ್ದಾರಿಯಲ್ಲಿ ಟ್ಯಾಂಕರ್ ನಿಂದ ಕಾರ್ಬನ್ ಡಯಾಕ್ಸೈಡ್ ಸೋರಿಕೆ

ಉಡುಪಿ: ಮಹಾರಾಷ್ಟ್ರದಿಂದ-ಮಂಗಳೂರಿಗೆ ಕಾರ್ಬನ್ ಡೈಆಕ್ಸೈಡ್ ಅನಿಲ ಸಾಗಿಸುತ್ತಿದ್ದ ಬುಲೆಟ್ ಟ್ಯಾಂಕರ್‌ನಲ್ಲಿ ಅನಿಲ ಸೋರಿಕೆ ಆದ ಘಟನೆ ಇಂದು ಬೆಳಗ್ಗೆ ಕಾಪುವಿನಲ್ಲಿ ಸಂಭವಿಸಿದೆ.ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಪಂಜಾಬ್ ಕಾರ್ಬೋನಿಕ್ ಸಂಸ್ಥೆಗೆ ಸೇರಿದ, ಮಹಾರಾಷ್ಟ್ರದಿಂದ ಮಂಗಳೂರಿಗೆ ಕಾರ್ಬನ್ ಡೈಆಕ್ಸೈಡ್ ಅನಿಲ ಸಾಗಿಸುತ್ತಿದ್ದ ಬುಲೆಟ್ ಟ್ಯಾಂಕರ್‌ ಕಾಪುವಿನ ಬಿಕ್ಕೋ ಜಾಯ್ ಕಂಪನಿ ಎದುರು ತಲುಪುತ್ತಿದ್ದಂತೆ ಅನಿಲ ಸೋರಿಕೆಯಾಗಿದೆ.

ಮಾಹಿತಿ ತಿಳಿದ ಕಾಪು ಠಾಣಾಧಿಕಾರಿ ಶ್ರೀಶೈಲ ಮುರುಗೋಡರವರು ಸ್ಥಳಕ್ಕೆ ಧಾವಿಸಿದ್ದು, ಉಡುಪಿಯಿಂದ ಅಗ್ನಿಶಾಮಕ ದಳವನ್ನು ಕರೆಸಿ ತಪಾಸಣೆ ನಡೆಸಿದ್ದಾರೆ.

ಟ್ಯಾಂಕರಿನ ಮುಚ್ಚಳದಲ್ಲಿ ಸೋರಿಕೆ ಉಂಟಾಗಿದ್ದು, ಇದನ್ನು ಸರಿಪಡಿಸಿ ಮಂಗಳೂರಿಗೆ ಕಳುಹಿಸಲಾಗಿದೆ.

Follow us on Social media

About the author