Breaking News

ರಾಜ್ಯದಲ್ಲಿ ಇಂದು 1925 ಕೊರೋನಾ ಪ್ರಕರಣ ಪತ್ತೆ, 38 ಬಲಿ, 23,474ಕ್ಕೇರಿದ ಸೋಂಕಿತರ ಸಂಖ್ಯೆ!

ಬೆಂಗಳೂರು: ರಾಜ್ಯದಲ್ಲಿ ಇಂದು ಹೊಸದಾಗಿ 1,925 ಕೊರೋನಾ ಪ್ರಕರಣಗಳು ಪತ್ತೆಯಾಗಿದ್ದು 38 ಮಂದಿ ಕೊರೋನಾಗೆ ಬಲಿಯಾಗಿದ್ದಾರೆ.

ಬೆಂಗಳೂರಿನಲ್ಲಿ ಇಂದು ಹೊಸದಾಗಿ 1,235 ಮಂದಿ ಕೊರೋನಾಗೆ ತುತ್ತಾಗಿದ್ದಾರೆ. ಇದೇ ವೇಳೆ ರಾಜ್ಯದಲ್ಲಿ ಒಟ್ಟಾರೆ ಸೋಂಕಿತರ ಸಂಖ್ಯೆ 23,474ಕ್ಕೇ ಏರಿಕೆಯಾಗಿದೆ.

ಇಂದು 38 ಮಂದಿ ಕೊರೋನಾಗೆ ಬಲಿಯಾಗಿದ್ದು ರಾಜ್ಯದಲ್ಲಿ ಇದುವರೆಗೂ 373 ಮಂದಿ ಬಲಿಯಾಗಿದ್ದಾರೆ. 

ಒಟ್ಟಾರೆ 23,474 ಪ್ರಕರಣಗಳ ಪೈಕಿ 9,847 ಮಂದಿ ಡಿಸ್ಚಾರ್ಜ್ ಆಗಿದ್ದು 13,250 ಮಂದಿ ಕೋವಿಡ್ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

Follow us on Social media

About the author