Breaking News

ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲೇ ಅತಿ ಹೆಚ್ಚು ಬಾರಿ ಈ ದಾಖಲೆ ಬರೆದ 2ನೇ ಆಟಗಾರ ಆರ್.ಅಶ್ವಿನ್!

ಚೆನ್ನೈ: ಇಂಗ್ಲೆಂಡ್ ವಿರುದ್ಧದ 2ನೇ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ಬೌಲರ್ ಗಳ ವಿರುದ್ಧ ಅಬ್ಬರಿಸಿದ ಟೀಂ ಇಂಡಿಯಾದ ಆರ್ ಅಶ್ವಿನ್ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲೇ ಅಪರೂಪದ ದಾಖಲೆಯೊಂದನ್ನು ನಿರ್ಮಾಣ ಮಾಡಿದ್ದಾರೆ.

ಇಂಗ್ಲೆಂಡ್ ವಿರುದ್ಧದ 2ನೇ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್ ನಲ್ಲಿ ಅರ್ ಅಶ್ವಿನ್ ಐದು ವಿಕೆಟ್ ಪಡೆದು ಮಿಂಚಿದರು. ಅಲ್ಲದೆ ಇದೇ ಟೆಸ್ಟ್ ಪಂದ್ಯದಲ್ಲಿ ಶತಕ(106) ಸಿಡಿಸಿದ ಅಶ್ವಿನ್ ದಾಖಲೆಯೊಂದನ್ನು ಬರೆದಿದ್ದಾರೆ. 

ಟೆಸ್ಟ್ ಕ್ರಿಕೆಟ್ ನಲ್ಲಿ ಒಂದೇ ಪಂದ್ಯದಲ್ಲಿ ಶತಕ ಮತ್ತು 5 ವಿಕೆಟ್ ಗೊಂಚಲು ಪಡೆದ ಶ್ರೇಷ್ಠ ಆರು ಆಟಗಾರರ ಪಟ್ಟಿಯಲ್ಲಿ ಆರ್ ಅಶ್ವಿನ್ ಎರಡನೇ ಸ್ಥಾನ ಪಡೆದಿದ್ದಾರೆ. ಇನ್ನು ಟೆಸ್ಟ್ ಕ್ರಿಕೆಟ್ ನಲ್ಲಿ ಅಶ್ವಿನ್ 5 ಬಾರಿ ಶತಕ ಸಿಡಿಸಿದ್ದು 29 ಬಾರಿ 5 ವಿಕೆಟ್ ಗೊಂಚಲು ಪಡೆದಿದ್ದಾರೆ.

ಅತೀ ಹೆಚ್ಚು ಬಾರಿ ಒಂದೇ ಪಂದ್ಯದಲ್ಲಿ ಶತಕ ಮತ್ತು 5 ವಿಕೆಟ್ ಗೊಂಚಲು ಪಡೆದ ಆಟಗಾರರು
* ಇಂಗ್ಲೆಂಡ್ ಆಲ್ರೌಂಡರ್ ಇಯಾನ್ ಬೋತಮ್ 5 ಬಾರಿ ಈ ಸಾಧನೆ ಮಾಡಿದ್ದು ಅಗ್ರಸ್ಥಾನದಲ್ಲಿದ್ದಾರೆ.

* ಆರ್ ಅಶ್ವಿನ್ ಟೆಸ್ಟ್ ಕ್ರಿಕೆಟ್ ವೃತ್ತಿ ಬದುಕಿನಲ್ಲಿ 3 ಬಾರಿ ಈ ಸಾಧನೆ ಮಾಡಿದ್ದಾರೆ. 

* ಗ್ಯಾರಿ ಸೊಬೆರ್ಸ್/ ಮುಷ್ತಾಕ್ ಮೊಹಮ್ಮದ್/ ಜಾಕ್ ಕಾಲಿಸ್/ ಶಕಿಬ್ ಅಲ್ ಹಸನ್ ತಲಾ 2 ಬಾರಿ ಈ ಸಾಧನೆ ಮಾಡಿದ್ದಾರೆ.

Follow us on Social media

About the author