Breaking News

ಉತ್ತರಪ್ರದೇಶ ರಾಜ್ಯ ಸಚಿವೆ ಕಮಲ್ ರಾಣಿ ವರುಣ್ ಕೊರೋನಾಗೆ ಬಲಿ!

ಲಖನೌ: ಕೊರೋನಾ ವೈರಸ್ ಸೋಂಕಿನಿಂದ ಬಳಲುತ್ತಿದ್ದ ಉತ್ತರಪ್ರದೇಶ ರಾಜ್ಯ ಸಚಿವೆ ಕಮಲ್ ರಾಣಿ ವರುಣ್ ಅವರು ಭಾನುವಾರ ಸಾವನ್ನಪ್ಪಿದ್ದಾರೆಂದು ವರದಿಗಳಿಂದ ತಿಳಿದುಬಂದಿದೆ. 

ಮುಖ್ಯಮಂತ್ರಿ ಯೋಗಿ ಆದಿತ್ಯಾನಾಥ್ ನೇತೃತ್ವದ ಉತ್ತರಪ್ರದೇಶ ಸರ್ಕಾರದ ಸಂಪುಟದಲ್ಲಿ ಕಮಲ್ ರಾಣಿ ವರುಣ್ ಅವರು ತಾಂತ್ರಿಕ ಶಿಕ್ಷಣ ಸಚಿವೆಯಾಗಿ ಕಾರ್ಯನಿರ್ವಹಿಸುತ್ತಿದ್ದರು. 

ಜು.18 ರಂದು ಕಮಲ್ ರಾಣಿ ವರುಣ್ ಅವರಲ್ಲಿ ಕೊರೋನಾ ವೈರಸ್ ಇರುವುದು ದೃಢಪಟ್ಟಿತ್ತು. ಬಳಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಇದೀಗ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆಂದು ಮೂಲಗಳು ತಿಳಿಸಿವೆ. 

Follow us on Social media

About the author