Breaking News

ಉಡುಪಿ : ಬೈಂದೂರಿನಲ್ಲಿ ಲಾರಿ-ಬೈಕ್ ಭೀಕರ ಅಪಘಾತ: ಓರ್ವ ಸ್ಥಳದಲ್ಲೇ ಅಂತ್ಯ

ಉಡುಪಿ: ಲಾರಿ ಮತ್ತು ಬೈಕ್ ಢಿಕ್ಕಿಯಾಗಿ ಓರ್ವ ವಿದ್ಯಾರ್ಥಿ ಸಾವನ್ನಪ್ಪಿ ಮತ್ತೋರ್ವ ಗಾಯಗೊಂಡ ಘಟನೆ ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ಹೊಸಂಗಡಿ ಕೆರೆಕಟ್ಟೆ ಬಳಿ ಇಂದು ಬೆಳಗ್ಗೆ ಸಂಭವಿಸಿದೆ.

ಸ್ರಜನ್ ನಾಗರಾಜ್ ನಾಯ್ಕ್ ಮೃತ ವಿದ್ಯಾರ್ಥಿ. ಸಹ ಸವಾರ ದಿವಾಕರ ನಾಯ್ಕ್ ಪ್ರಾಣಾಪಾಯದಿಂದ ಪಾರಾದ ವಿದ್ಯಾರ್ಥಿ.

ಗಂಗಾನಾಡಿನಿಂದ ಹೊಸಂಗಡಿ ಅಜ್ಜಿ ಮನೆಗೆ ಬಂದಿದ್ದ ಐಟಿಐ ವಿದ್ಯಾರ್ಥಿ ಸ್ರಜನ್ ಇಂದು ಬೆಳಗ್ಗೆ ಸಂಬಂಧಿಕ ದಿವಾಕರ ಜತೆ ಬೈಕಲ್ಲಿ ತೆರಳುತ್ತಿರುವಾಗ ಗ್ಯಾಸ್ ಸಿಲಿಂಡರ್ ಸಾಗಿಸುತ್ತಿದ್ದ ಲಾರಿ ಬೈಕಿಗೆ ಡಿಕ್ಕಿ ಹೊಡೆದಿದೆ.

ಅಪಘಾತದ ರಭಸಕ್ಕೆ ಓರ್ವ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಅಮಾಸೆಬೈಲು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Follow us on Social media

About the author