Breaking News

ಅನ್ನಭಾಗ್ಯದ ಅಕ್ಕಿ ಕಡಿತ: ಸಿದ್ದರಾಮಯ್ಯ ಬೇಸರ

ಬೆಂಗಳೂರು : ಹಿಂದಿನ ಕಾಂಗ್ರೆಸ್ ಸರ್ಕಾದ ಮಹತ್ವಾಕಾಂಕ್ಷಿ ಅನ್ನಭಾಗ್ಯ ಯೋಜನೆಯಲ್ಲಿ ಪಡಿತರ ಕಡಿತಗೊಳಿಸಿರುವ ಬಿಜೆಪಿ ಸರ್ಕಾರದ ನಡೆಗೆ ವಿಪಕ್ಷ ನಾಯಕ ಸಿದ್ದರಾಮಯ್ಯ ತೀವ್ರ ಬೇಸರ ವ್ಯಕ್ತಪಡಿಸಿದ್ದು ಈ ಸಂಬಂಧ ಅಧಿವೇಶನದಲ್ಲಿ ಧ್ವನಿಮೊಳಗಿಸುವುದಾಗಿ ಹೇಳಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರ್ಕಾರದ ಖಜಾನೆಯಲ್ಲಿ ಹಣವಿಲ್ಲ. ಹೀಗಾಗಿ ಅನ್ನಭಾಗ್ಯದ ಅಕ್ಕಿ ಕಾಳಸಂತೆಯಲ್ಲಿ ಮಾರಾಟವಾಗುತ್ತಿದೆ,ದುರುಪಯೋಗವಾಗುತ್ತಿದೆ ಎಂದೆಲ್ಲ ಇಲ್ಲಸಲ್ಲದ ನೆಪ ಒಡ್ಡುತ್ತಿದ್ದಾರೆ. ಈ ನೆಪಗಳನ್ನೆಲ್ಲ ಕೊಟ್ಟು ಅಕ್ಕಿ ಕಡಿಮೆ ಕೊಟ್ಟರೆ ಅದಯ ಬಡವರಿಗೆ ಅನ್ಯಾಯ ಮಾಡಿದಂತೆ.ಅಕ್ಕಿ ಬದಲು ಜೋಳ ಅಥವಾ ರಾಗಿ ತೆಗೆದುಕೊಳ್ಳುವವರಿದ್ದರೆ ಕೊಡಲಿ.ಅದು ಬಿಟ್ಟು ಅಕ್ಕಿಯನ್ನು 5 ಕೆ.ಜಿ ಗೆ ಮಾತ್ರ ಸೀಮಿತ ಮಾಡಬಾರದು. ಬಿಜೆಪಿ ಸರ್ಕಾರ ಹಣದ ಮುಗ್ಗಟ್ಟಿನಿಂದ ನರಳುತ್ತಿದೆ‌.ಅವರ ಬಳಿ ದುಡ್ಡಿಲ್ಲ. ಕೇಂದ್ರ ಸರ್ಕಾರ ಕೂಡ ಆರ್ಥಿಕ ದಿವಾಳಿ ಆಗಿದೆ.
ಕೇಂದ್ರ ರಾಜ್ಯಕ್ಕೆ ಕೊಡಬೇಕಾದ ಹಣ ಕೊಡುತ್ತಿಲ್ಲ. ಮುಖ್ಯಮಂತ್ರಿಗಾಗಲೀ ಸಂಸದರಿಗಾಗಲೂ ಪ್ರಧಾನಿ ಮೋದಿಯವರ ಬಳಿಯಿಂದ ರಾಜ್ಯಕ್ಕೆ ಹಣ ತರುವ ಧೈರ್ಯವೂ ಇಲ್ಲ, ಶಕ್ತಿಯೂ ಇಲ್ಲ. ಬಿಜೆಪಿಯಿಂದ 25 ಸಂಸದರಿದ್ದೂ ಅವರೆಲ್ಲ ಒಂದು ದಿನವೂ ಅನ್ಯಾಯ ಆಗಿದೆ ಎಂದು ಭೇಟಿ ಮಾಡಿ ಮನವಿ ಮಾಡಿಲ್ಲ .ಸಂಸದರು ಜ್ಯದ ಜನರಿಗೆ ದ್ರೋಹ ಮಾಡುತ್ತಿದ್ದು, ಈ ಬಗ್ಗೆ ಬಜೆಟ್ ಚರ್ಚೆಯ ಪ್ರಸ್ತಾಪ ಮಾಡುತ್ತೇವೆ ಎಂದರು.

Source : UNI

Follow us on Social media

About the author