Breaking News

‘ಮತ್ತೊಮ್ಮೆ ಮುಖ್ಯಮಂತ್ರಿಯಾಗುತ್ತೇನೆ ಎಂದು ಅಬ್ಬರಿಸುವುದಕ್ಕೆ ಮುನ್ನ ನೆಟ್ಟಗೆ ಒಂದು ಕ್ಷೇತ್ರದಲ್ಲಿ ಗೆಲ್ಲುವ ಸಾಮರ್ಥ್ಯ ಬೇಕು’

ಬೆಂಗಳೂರು: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಭಾರತೀಯ ಜನತಾ ಪಕ್ಷ ಕಿಡಿ ಕಾರಿದೆ. ಈ ಸಂಬಂಧ ಟ್ವೀಟ್ ಮಾಡಿರುವ ಬಿಜೆಪಿ ಆಕಾಶವನ್ನು ಅಳೆಯುವುದಕ್ಕೆ ಮುನ್ನ ಅಂಗಳ ಅಳೆಯುವ ಸಾಮರ್ಥ್ಯ ಇರಬೇಕು ಎಂದು ಛೇಡಿಸಿದೆ.

ಸಿದ್ದರಾಮಯ್ಯನವರೇ, ಮತ್ತೊಮ್ಮೆ ಮುಖ್ಯಮಂತ್ರಿ ಯಾಗುತ್ತೇನೆ ಎಂದು ಅಬ್ಬರಿಸುವುದಕ್ಕೆ ಮುನ್ನ ನೆಟ್ಟಗೆ ಒಂದು ಕ್ಷೇತ್ರದಲ್ಲಿ ಗೆಲ್ಲುವ ಸಾಮರ್ಥ್ಯ ಇರಬೇಕು. ಮತ್ತೊಮ್ಮೆ ಮುಖ್ಯಮಂತ್ರಿಯಾಗಬೇಕೆಂದು ಹಂಬಲಿಸುವ ಸಿದ್ದರಾಮಯ್ಯ  ಅವರೇ,  ಗೆಲ್ಲುವುದಕ್ಕಾಗಿ ನಿಮಗೊಂದು ಗಟ್ಟಿ ಕ್ಷೇತ್ರವೇ ಇಲ್ಲ. ಈ ರೀತಿ ಕ್ಷೇತ್ರದಿಂದ ಕ್ಷೇತ್ರಕ್ಕೆ ವಲಸೆ ಹೋಗುವ ಬದಲು ರಾಜಕೀಯ ನಿವೃತ್ತಿ ಕ್ಷೇಮವಲ್ಲವೇ? ಬುರುಡೆರಾಮಯ್ಯ ಎಂದು ಹೀಯಾಳಿಸಿದೆ.

ಹಾವು ಸಾಯಬಾರದು, ಕೋಲು ಮುರಿಬಾರದು ಎಂಬ ಲೆಕ್ಕಾಚಾರವನ್ನು ಚುನಾವಣೆಯವರೆಗೂ ಉಳಿಸಿಕೊಳ್ಳಲು ಸಿದ್ದರಾಮಯ್ಯ ಈಗ ಹೆಣಗಾಡುವಂತಾಗಿದೆ. ವಲಸೆ ನಾಯಕ ಸಿದ್ದರಾಮಯ್ಯ ಅವರ ಮೇಲೆ ಚಿಮ್ಮನಕಟ್ಟಿ ಎಫೆಕ್ಟ್ ಜೋರಾಗಿರುವಂತೆ ಕಾಣುತ್ತಿದೆ! ಸಿದ್ದರಾಮಯ್ಯ ಅವರೇ, ಒಟ್ಟಾರೆಯಾಗಿ ನೀವು ಏನು ಹೇಳಿದ ಹಾಗೆ ಆಯ್ತು? ಹೈಕಮಾಂಡ್ ಸೂಚನೆ ಮೇರೆಗೆ ಚಾಮರಾಜಪೇಟೆಯಿಂದ‌ ಕಣಕ್ಕೆ ಇಳಿಯುತ್ತಿದ್ದೇನೆ ಎಂದು ಈಗಲೇ “ಕೇವಿಯಟ್” ಹಾಕಿಕೊಳ್ಳುವುದಕ್ಕೆ ಮಾಜಿ ವಕೀಲ ಸಾಹೇಬರು ಹೊರಟ ಹಾಗಿದೆಯಲ್ಲವೇ? ಎಂದು ಪ್ರಶ್ನಿಸಿದೆ.

Follow us on Social media

About the author