Breaking News

ಮೂಡುಬಿದ್ರೆ: ಬೈಕ್‌ ಸ್ಕಿಡ್‌ – ಸವಾರ ಸ್ಥಳದಲ್ಲೇ ಸಾವು

ಮೂಡುಬಿದಿರೆ: ವಾಲ್ಪಾಡಿಯ ಕ್ವಯಕುಡೆಯಲ್ಲಿ ಬುಧವಾರ ಬೆಳಗ್ಗೆ ಬೈಕ್ ನಿಂದ ಬಿದ್ದು ಬೈಕ್ ಸವಾರ ಮೃತಪಟ್ಟಿದ್ದಾರೆ.
ಅಳಿಯೂರು ವಿಕಾಸನಗರದ ತಿಮ್ಮಪ್ಪ ಮಡಿವಾಳ್( 55) ಮೃತಪಟ್ಟ ಸವಾರ.

ತಿಮ್ಮಪ್ಪ ಅವರು ಶಿರ್ತಾಡಿ ಪೇಟೆಯಲ್ಲಿ ಹೊಟೇಲ್ ನಡೆಸುತ್ತಿದ್ದು, ಅವರು ಬುದವಾರ ಬೆಳಗ್ಗೆ 5 ಗಂಟೆ ಸುಮಾರಿಗೆ ಮನೆಯಿಂದ ಶಿರ್ತಾಡಿಯ ಹೋಟೆಲಿನತ್ತ ತಮ್ಮ ದ್ವಿಚಕ್ರವಾಹನದಲ್ಲಿ ಬರುತ್ತಿದ್ದರು. ಈ ವೇಳೆ ನಿಯಂತ್ರಣ ತಪ್ಪಿ ಬೈಕ್ ನಿಂದ ಬಿದ್ದು ಮೃತಪಟ್ಟಿದ್ದಾರೆ.

Follow us on Social media

About the author

×

Hello!

If you want to receive regular new updates, please click whatsapp icon and save our number on your phone. You will be getting regular news updates on WhatsApp.

×