ತೆಲಂಗಾಣ : ತೆಲಂಗಾಣ ಬಿಜೆಪಿ ಮುಖಂಡ ಮತ್ತು ಮುಖ್ಯ ವಕ್ತಾರ ಕೃಷ್ಣ ಸಾಗರ್ ರಾವ್ ಅವರು ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಒವೈಸಿ ಅವರನ್ನುಅಯೋಧ್ಯೆಯ ರಾಮ ಮಂದಿರದ ಭೂಮಿ ಪೂಜೆ ಕಾರ್ಯಕ್ರಮಕ್ಕೆ ಭಾಗವಹಿಸಲು ಆಹ್ವಾನಿಸಿದ್ದಾರೆ.
ಆಗಸ್ಟ್ 5ರಂದು ಅಯೋಧ್ಯೆಯಲ್ಲಿ ರಾಮ ಮಂದಿರದ ಭೂಮಿ ಪೂಜೆ ನಡೆಯಲಿದ್ದು, ಪ್ರಧಾನಿ ನರೇಂದ್ರ ಮೋದಿ ಅವರು ಪಾಲ್ಗೊಳ್ಳಲಿದ್ದು, ಭವ್ಯವಾದ ರಾಮಮಂದಿರದ ನಿರ್ಮಾಣಕ್ಕೆ ಚಾಲನೆ ನೀಡಲಿದ್ದಾರೆ. ರಾಮನ ಜನ್ಮಭೂಮಿಯಲ್ಲಿ ರಾಮಮಂದಿರ ನಿರ್ಮಾಣವಾಗಲಿದ್ದು, ವಿಶ್ವದಾದ್ಯಂತ ಕೋಟ್ಯಾಂತರ ಹಿಂದೂಗಳ ಕನಸು ಸಾಕಾರಗೊಳ್ಳುವಲ್ಲಿ ಬಿಜೆಪಿ ಹೆಮ್ಮೆಪಡುತ್ತದೆ ಎಂದು ರಾವ್ ಹೇಳಿದರು.
ಎಡಪಂಥೀಯರು ಹಾಗೂ ಎಐಎಂಐಎಂನಂತಹ ಗುಂಪುಗಳು ಕ್ಷುಲ್ಲಕವಾದವು ಎಂದು ಹೇಳುವ ಆರೋಪಗಳಿಗೆ ಹಾಗೂ ಆಕ್ಷೇಪಣೆಗಳಿಗೆ ಯಾರೂ ಸ್ಪಂದಿಸಬೇಕಾಗಿಲ್ಲ ಎಂದು ನಾನು ಭಾವಿಸುವುದಿಲ್ಲ. ಏಕೆಂದರೆ, ಭಾರತದ ಸಂವಿಧಾನವು ಪ್ರತಿಯೊಬ್ಬ ನಾಗರಿಕನಿಗೂ ಧಾರ್ಮಿಕ ಸ್ವಾತಂತ್ರ್ಯದ ಹಕ್ಕು ನೀಡಿದೆ. ಪ್ರಧಾನಿ ಮೋದಿ ಅವರು ಕೂಡಾ ಈ ಹಕ್ಕುಗಳಿಗೆ ಹೊರತಾಗಿಲ್ಲ ಎಂದು ತಿಳಿಸಿದರು.
ಕಮ್ಮುನಿಸ್ಟ್ ನಾಯಕರನ್ನು ಹಾಗೂ ಅಸಾದುದ್ದೀ ಓವೈಸಿ ಅವರನ್ನು ರಾಮ ಮಂದಿರದ ಭೂಮಿ ಪೂಜೆಯಲ್ಲಿ ಭಾಗವಹಿಸಲು ಆಹ್ವಾನಿಸುತ್ತೇನೆ. ಇದರಿಂದ ಅವರು ತಮ್ಮ ಪಕ್ಷಗಳ ಜಾತ್ಯತೀತ ಮನೋಭಾವವನ್ನು ಮತ್ತು ಸಹೋದರತ್ವದ ಬಗ್ಗೆ ಅವರ ವೈಯುಕ್ತಿಕವಾದ ವಿಚಾರಗಳನ್ನು ತಿಳಿಸಬಹುದು ಎಂದು ಹೇಳಿದರು.
ಆಗಸ್ಟ್ 5ರಂದು ಪ್ರಧಾನಿ ನರೇಂದ್ರ ಮೋದಿ ಅವರು ಅಯೋಧ್ಯೆ ರಾಮ ಮಂದಿರದ ನಿರ್ಮಾಣಕ್ಕೆ ಚಾಲನೆ ನೀಡಲಿದ್ದಾರೆ. ಕಾರ್ಯಕ್ರಮಕ್ಕೆ ಹಲವು ರಾಜ್ಯಗಳ ಮುಖ್ಯಮಂತ್ರಿಗಳು, ಕೇಂದ್ರ ಸಚಿವ ಸಂಪುಟದ ಸಚಿವರು ಮತ್ತು ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಮುಂತಾದವರು ಭಾಗವಹಿಸುವ ಸಾಧ್ಯತೆ ಇದೆ.
Follow us on Social media