Breaking News

ಬ್ರಹ್ಮಾವರ: ಸೈಕಲ್ ಸವಾರನಿಗೆ ಕಾರು ಡಿಕ್ಕಿ, ಸವಾರನ ಆರೋಗ್ಯ ಸ್ಥಿತಿ ಗಂಭೀರ

ಉಡುಪಿ: ರಾಷ್ಟ್ರೀಯ ಹೆದ್ದಾರಿ 66ರ ಬ್ರಹ್ಮಾವರ ದೂಪದಕಟ್ಟೆ ಬಳಿ ಹೆದ್ದಾರಿ ದಾಟುತ್ತಿದ್ದ ಸೈಕಲ್ ಸವಾರನಿಗೆ ಕಾರು ಢಿಕ್ಕಿಯಾಗಿ ಸೈಕಲ್ ಸವಾರ ಗಂಭೀರ ಗಾಯಗೊಂಡ ಘಟನೆ ಇಂದು ವರದಿಯಾಗಿದೆ.

ಗಂಭೀರವಾಗಿ ಗಾಯಗೊಂಡವರು ಬೈಕಾಡಿ ನಿವಾಸಿ ಮಹಾಬಲ (50 ವ).

ಕಾರು ಬ್ರಹ್ಮಾವರದಿಂದ ಉಡುಪಿಗೆ ಸಾಗುತ್ತಿದ್ದರು. ಈ ವೇಳೆಗೆ ದೂಪದಕಟ್ಟೆ ಪೆಟ್ರೋಲ್ ಪಂಪ್ ಬಳಿ ಅಪಘಾತ ನಡೆದಿದೆ.

ತೀವ್ರ ಗಾಯಗೊಂಡು ಹೆದ್ದಾರಿ ನಡುವಿನಲ್ಲಿ ಬಿದ್ದಿದ್ದ ಮಹಾಬಲ ಅವರನ್ನು ಕೂಡಲೇ ಬ್ರಹ್ಮಾವರದ ಖಾಸಗಿ ಆಸ್ಪತ್ರೆಗೆ ಸಾಗಿಸಿದರೂ, ನಂತರ ಹೆಚ್ಚಿನ ಚಿಕಿತ್ಸೆಗೆ ಮಣಿಪಾಲದ ಆಸ್ಪತ್ರಗೆ ಸಾಗಿಸಲಾಗಿದೆ.

Follow us on Social media

About the author

×

Hello!

If you want to receive regular new updates, please click whatsapp icon and save our number on your phone. You will be getting regular news updates on WhatsApp.

×