Breaking News

ಮಾಜಿ ಸಚಿವ ಎಚ್ .ಡಿ ರೇವಣ್ಣ ಬೆಂಗಾವಲು ವಾಹನದ ನಾಲ್ಕು ಸಿಬ್ಬಂದಿಗೆ ಕೊರೋನಾ ಸೋಂಕು!

ಹಾಸನ: ಮಾಜಿ ಸಚಿವ ಎಚ್.‌ಡಿ.ರೇವಣ್ಣ ಅವರ ಬೆಂಗಾವಲು ವಾಹನದಲ್ಲಿ ಇರುವ ನಾಲ್ವರು ಪೊಲೀಸರಿಗೆ ಕೊರೊನಾ ಪಾಸಿಟಿವ್‌ ದೃಢವಾಗಿದೆ. 

ರೇವಣ್ಣ ಅವರ ಇಬ್ಬರು ಆಪ್ತ ಸಹಾಯಕರು ಸೇರಿ ಒಟ್ಟು ಒಂಬತ್ತು ಜನರ ಸ್ಯಾಂಪಲ್ ಪಡೆದು ಪರೀಕ್ಷೆ ನಡೆಸಲಾಗಿತ್ತು. ಎಸ್ಕಾರ್ಟ್ ವಾಹನದಲ್ಲಿ ಕಾರ್ಯನಿರ್ವಹಿಸುವ ನಾಲ್ವರು ಸಿಬ್ಬಂದಿಗಳ ಪೈಕಿ ಬೆಂಗಳೂರಿನ ಮೂವರು ಹಾಗೂ ಹಾಸನದ ಒಬ್ಬ ಸಿಬ್ಬಂದಿಗೆ ಸೋಂಕು ದೃಢಪಟ್ಟಿದೆ.

ಹೀಗಾಗಿ ಸದ್ಯ ಬೆಂಗಳೂರಿನಲ್ಲಿರುವ ರೇವಣ್ಣರಿಗೂ ಸೋಂಕು ಭೀತಿ ತಟ್ಟಿದೆ. ರೇವಣ್ಣ ಅವರಿಗೂ ಸೋಂಕು ಪರೀಕ್ಷೆ ಮಾಡಿಸುವಂತೆ ವೈದ್ಯರು ಸಲಹೆ ನೀಡಿದ್ದಾರೆ ಎನ್ನಲಾಗಿದೆ. ರಾಜ್ಯದ್ಯಂತ ಮಾರಕ ಕೊರೊನಾ ಸೋಂಕು ವ್ಯಾಪಕವಾಗಿ ಹಬ್ಬುತ್ತಿದ್ದು, ಸೋಂಕು ನಿಯಂತ್ರಣ ಸವಾಲಾಗಿ ಪರಿಣಮಿಸಿದೆ.  ಹಾಸನದಲ್ಲಿ ಕಳೆದ ಒಂದು ವಾರದಿಂದ ಕೊರೋನಾ ಸೋಂಕಿನ ಪ್ರಮಾಣ ಏರುತ್ತಲೇ ಇದೆ.

Follow us on Social media

About the author