Breaking News

ಮಂಗಳೂರು: ಅಲ್ತಾಫ್‌‌ -ಬಶೀರ್‌‌ ನೆರವು , ದಮಾಮ್‌ನಿಂದ ಚಾರ್ಟರ್ಡ್‌ ವಿಮಾನ ಮೂಲಕ ತವರಿಗೆ ವಾಪಾಸ್ಸಾದ ಭಾರತೀಯರು

ಮಂಗಳೂರು‌‌‌ : ಕೊರೊನಾ ಸಾಂಕ್ರಾಮಿಕ ರೋಗವು ಮಾನವಕುಲಕ್ಕೆ ಸಾಕಷ್ಟು ಪಾಠಗಳನ್ನು ಕಲಿಸಿದೆ. ಸಂಕಷ್ಟದಲ್ಲಿರುವ ಜನರಿಗೆ ಅನೇಕ ಸಮರ್ಥರು ಸಹಾಯ ಮಾಡುತ್ತಿದ್ದಾರೆ. ಅಲ್ಲದೇ ಅನೇಕ ಹೃದಯವಂತ ಜನರು ಮೊದಲು ನಾವು ಮನುಷ್ಯರು-ಮತ್ತೆ ಉಳಿದ ವಿಚಾರ ಎನ್ನುವ ಬಲವಾದ ಸಂದೇಶವನ್ನು ಸಾರುವ ಮೂಲಕ ಸ್ವಯಂಪ್ರೇರಿತವಾಗಿ ತಮ್ಮ ಕೈಲಾದ ರೀತಿಯಲ್ಲಿ ಸಹಾಯ ಮಾಡಿದ್ದಾರೆ. ಇದು ಇಂದಿನ ಸಮಾಜದಲ್ಲಿ ನಿಜವಾದ ಪ್ರಭಾವವನ್ನು ಸೃಷ್ಠಿ ಮಾಡಿದೆ.

ಮಂಗಳೂರು ಮೂಲದ ಉದ್ಯಮಿ ಜೋಡಿಯೊಂದು ಅಂತಹ ಒಂದು ಮಾನವೀಯ ಕಾರ್ಯವನ್ನು ಮಾಡಿ ಲಕ್ಷಾಂತರ ಮನ ಗೆದ್ದಿದ್ದಾರೆ. ಉಳ್ಳಾಲದ ಅಲ್ತಾಫ್‌‌ ಉಳ್ಳಾಲ್‌‌‌‌‌‌‌‌ ಹಾಗೂ ದಮಾಮ್‌‌ನಲ್ಲಿ ಎಸ್‌‌‌‌ಎಕ್ಯೂಸಿಓ ಕಾಂಟ್ರಾಕ್ಟಿಂಗ್‌‌‌‌‌ ಕೋ ಎಂಬ ವ್ಯಾಪಾರ ಸಂಸ್ಥೆಯನ್ನು ನಡೆಸುತ್ತಿರುವ ಶಿವಮೊಗ್ಗ ಮೂಲದ ಬಶೀರ್‌‌ ಸಾಗರ್‌ ಅವರು ಸಂಕಷ್ಟಕ್ಕೊಳಗಾದವರನ್ನು ಮಂಗಳೂರು ವಿಮಾನ ನಿಲ್ದಾಣಕ್ಕೆ ಕರೆತರಲು ಚಾರ್ಟರ್ಡ್‌‌ ಫ್ಲೈಟ್‌‌‌‌ ಅನ್ನು ಪ್ರಾಯೋಜಿಸಿ ಮಾನವೀಯತೆ ಮೆರೆದಿದ್ದಾರೆ.

61 ಮಂದಿ ಹಿರಿಯ ನಾಗರಿಕರು, 55 ಮಂದಿ ಗರ್ಭಿಣಿಯರು, 35 ಹಸೂಗೂಸು ಸೇರಿ ಮಕ್ಕಳು, ಉದ್ಯೋಗ ಕಳೆದುಕೊಂಡವರು, ಅಸಹಾಯಕರು ಸೌದಿ ಅರೇಬಿಯಾದ ದಮಾಮ್‌‌‌‌‌ನಿಂದ ಚಾರ್ಟರ್ಡ್‌‌‌‌‌‌ ಫ್ಲೈಟ್‌‌‌ ಗಲ್ಫ್‌‌ ಏರ್‌‌‌‌ಜಿಎಫ್‌‌ 7272 ಜೂನ್‌‌‌ 11ರ ಗುರುವಾರ ಮುಂಜಾನೆ ಮಂಗಳೂರಿಗೆ ಬಂದಿಳಿದೆ.

ದಾಯ್ಜಿವಲ್ಡ್‌‌‌‌‌‌ ಜೊತೆ ಮಾತನಾಡಿದ ಎಸ್‌‌‌‌ಎಕ್ಯೂಸಿಓ ದ ಸಂಸ್ಥಾಪಕ ಅಲ್ತಾಫ್‌‌‌ ಉಳ್ಳಾಲ ಅವರು, ತಮ್ಮ ಊರುಗಳಗೆ ತೆರಳಲು ಕಷ್ಟಪಡುತ್ತಿರುವ ಜನರ ನೋವನ್ನು ನನಗೆ ನೋಡಲಾಗಲಿಲ್ಲ. ಸೌದಿ ಸರ್ಕಾರದಿಂದ ಉಚಿತ ವಿಸಿಟಿಂಗ್ ವೀಸಾ ಕೊಡುಗೆಯಿಂದಾಗಿ ಅವರಲ್ಲಿ ಹಲವರು ಇಲ್ಲಿ ವಿಸಿಟಿಂಗ್ ವೀಸಾ ಹೊಂದಿದ್ದರು. ಆದರೆ, ಕೊರೊನಾ ಪರಿಸ್ಥಿಯಿಂದಾಗಿ ಅವರು ಇಲ್ಲಿ ಸಿಲುಕಿಹಾಕಿಕೊಳ್ಳುವಂತಾಯಿತು. ಅನೇಕರು ಕೆಲಸ ಕಳೆದುಕೊಂಡಿದ್ದಾರೆ. ಅಲ್ಲದೇ, ಗರ್ಭಿಣಿಯರು ತಮ್ಮ ಊರಿಗೆ ತೆರಳಲು ಬಯಸಿದ್ದರು. ವೃದ್ದರಿಗೆ ಇಲ್ಲಿ ಉಳಿದುಕೊಳ್ಳಲು ಆಗುತ್ತಿರಲಿಲ್ಲ. ದೇವರ ಆಶೀರ್ವಾದದಿಂದ ನಾವು ಈ ಕೆಲಸವನ್ನು ಮಾಡಿದ್ದೇವೆ ಎಂದರು.

ನಮ್ಮ ಕಂಪೆನಿಯ ಯಾವುದೇ ಉದ್ಯೋಗಿಗಳು ಹಾಗೂ ಅವರ ಸಂಬಂಧಿಕರು ವಿಮಾನ ಹತ್ತಿಲ್ಲ ಎಂದು ನಾವು ಖಚಿತಪಡಿಸಿಕೊಂಡಿದ್ದೆವು. ನಾವು ಯಾವುದೇ ಜಾತಿ, ಧರ್ಮವನ್ನು ಪರಿಗಣಿಸಿಲ್ಲ. ಬದಲಾಗಿ ಸಂಕಷ್ಟಕ್ಕೊಳಗಾದ ಹಾಗೂ ವೈದ್ಯಕೀಯ ಆರೈಕೆಯ ಅಗತ್ಯವಿರುವವರನ್ನು ಅವರ ಮನೆಗಳಿಗೆ ವಾಪಾಸ್‌ ಕಳುಹಿಸುವ ಸಂಪೂರ್ಣವಾದ ಕಾರ್ಯವನ್ನು ನಾವು ಮಾಡಿದ್ದೇವೆ. ಅಲ್ಲದೇ ಮಂಗಳೂರಿನಲ್ಲಿ ಕೊರೊನಾ ಪರೀಕ್ಷೆ ಹಾಗೂ ಕ್ವಾರಂಟೈನ್‌ಗೆ ಬೇಕಾದ ವ್ಯವಸ್ಥೆಯನ್ನು ಭರಿಸಿದ್ದೇವೆ ಎಂದು ತಿಳಿಸಿದರು.

ಡಾ. ಆರತಿ ಕೃಷ್ಣ ಅವರು ಕಾನೂನಿನ ತೊಡಕುಗಳನ್ನು ನಿವಾರಿಸಲು ಸಹಾಯ ಮಾಡಿದ್ದಾರೆ ಎಂದರು.

ಚಾರ್ಟರ್ಡ್‌ ವಿಮಾನವನ್ನು ಮಂಗಳೂರು ವಿಮಾನ ನಿಲ್ದಾಣಕ್ಕೆ ಕಳುಹಿಸುವ ಅಲ್ತಾಫ್‌ ಅವರ ಕನಸನ್ನು ನನಸಾಗಿಸಲು ಮಾಜಿ ರಾಜತಾಂತ್ರಿಕ ಹಾಗೂ ಮಾಜಿ ಎನ್‌‌ಆರ್‌ಐ ಸೆಲ್‌‌ ಮುಖ್ಯಸ್ಥೆ ಡಾ. ಆರತಿ ಕೃಷ್ಣ ಅವರು ನೆರವಾಗಿದ್ದಾರೆ.

ಡಾ. ಆರತಿ ಅವರ ಸಹಾಯವನ್ನು ಶ್ಲಾಘಿಸಿದ ಅಲ್ತಾಫ್‌‌ ಅವರು, ನಾವು ಕಳೆದ ಏಳು ದಿನಗಳಿಂದ ನಿದ್ರೆಯಿಲ್ಲದೇ ರಾತ್ರಿಗಳನ್ನು ಕಳೆದಿದ್ದೇವೆ. ತಾಂತ್ರಿಕ ಹಾಗೂ ದಾಖಲೆಯ ಸಮಸ್ಯೆಗಳಿಂದಾಗಿ ಪ್ರತೀ ದಿನ ಹೊಸ ಸಮಸ್ಯೆಗಳು ಸೃಷ್ಠಿಯಾಗುತ್ತಿದ್ದವು. ಈ ಸಂದರ್ಭ ನಮ್ಮೊಂದಿಗೆ ನಿಂತವರು ಡಾ. ಆರತಿ ಕೃಷ್ಣ ಅವರು. ಅವರು ಮಾಡಿರುವ ಕಾರ್ಯವನ್ನು ಶ್ಲಾಘಿಸಲು ಪದಗಳೇ ಇಲ್ಲ. ಭಾರತದ ವಿದೇಶಾಂಗ ಸಚಿವರು, ಸೌದಿ ಅರೇಬಿಯಾದ ಭಾರತೀಯ ರಾಯಭಾರಿ, ನಾಗರಿಕ ವಿಮಾನಯಾನ ಸಚಿವಾಲಯ, ಮಂಗಳೂರು ವಿಮಾನ ನಿಲ್ದಾಣ ಪ್ರಾಧಿಕಾರ, ಮಂಗಳೂರು ಜಿಲ್ಲಾಡಳಿತ, ವಿಮಾನಯಾನ ಸಂಸ್ಥೆಗಳು ಮತ್ತು ಭಾರತದ ಸೌದಿ ರಾಯಭಾರಿಯೊಂದಿಗೆ ಸಂವಹನ ನಡೆಸಿದ್ದಾರೆ. ಅವರು ಸಹಾಯ ಮಾಡದೇ ಇರುತ್ತಿದ್ದರೆ ಈ ಕಾರ್ಯ ಅಸಾಧ್ಯವಾಗುತ್ತಿತ್ತು ಎಂದರು.

ಅವರು ನಿಸ್ವಾರ್ಥಿ. ತಮ್ಮ ವೈಯುಕ್ತಿಕ ಸಾಮರ್ಥ್ಯದ ಮೇರೆಗೆ ಈ ಎಲ್ಲಾ ಕೆಲಸವನ್ನು ಮಾಡಿದ್ದಾರೆ. ಕರ್ನಾಟಕ ಸರ್ಕಾರವು ಅವರನ್ನು ಪಕ್ಷದ ಅಂಗಸಂಸ್ಥೆಗಳನ್ನು ಪರಿಗಣಿಸಿ ಸ್ವತಂತ್ರ ಸಾಮರ್ಥ್ಯದ ಮೇಲೆ ಎನ್‌‌ಆರ್‌ಐ ಮುಖ್ಯಸ್ಥೆಯನ್ನಾಗಿ ಅವರನ್ನು ನೇಮಿಸಬೇಕು. ಅವರು ಕೇವಲ ನಮಗೆ ಸಹಾಯ ಮಾಡಿಲ್ಲ. ಬದಲಾಗಿ ಭಾರತೀಯರನ್ನು ವಾಪಾಸು ಕಳುಹಿಸುವುದಕ್ಕೆ ಸಂಬಂಧಪಟ್ಟಂತೆ ಕೊಲ್ಲಿಯ ಪ್ರತಿಯೊಂದು ಸಂಘಗಳು ಸಹಾಯ ಮಾಡಿವೆ ಎಂದು ತಿಳಿಸಿದರು.

ಬಳಿಕ ಮಾತನಾಡಿದ ಡಾ. ಆರತಿ ಕೃಷ್ಣ ಅವರು. ನಾನು ಪ್ರಪಂಚದಾದ್ಯಂತದ ಮನವಿಗಳನ್ನು ಸ್ವೀಕರಿಸುತ್ತಿದ್ದೇನೆ. ಇದು ಕೆಲವು ರಾಜತಾಂತ್ರಿಕರೊಂದಿಗಿನ ನನ್ನ ವೈಯುಕ್ತಿಕ ಸಂಬಂಧದಿಂದಾಗಿ, ಸಂಕಷ್ಟದಲ್ಲಿದ್ದ ಕೆಲವು ಅನಿವಾಸಿ ಭಾರತೀಯರಿಗೆ ನಾನು ಸಹಾಯ ಮಾಡಬಲ್ಲೆ. ನಾನು ರಾಜತಾಂತ್ರಿಕನಾಗಿರವುದರಿಂದ ಎನ್‌ಆರ್‌‌ಐಗಳ ನೋವನ್ನು ಅರ್ಥಮಾಡಿಕೊಳ್ಳಬಹುದು. ಕೊರೊನಾದ ಈ ಸಂದರ್ಭದಲ್ಲಿ ನನ್ನ ಸಾಧನದಲ್ಲಿ ನಾನು ಏನನ್ನೂ ಮಾಡಲು ಮುಂದಾಗಿದ್ದೇನೆ ಎಂದರು.

Follow us on Social media

About the author

×

Hello!

If you want to receive regular new updates, please click whatsapp icon and save our number on your phone. You will be getting regular news updates on WhatsApp.

×