Breaking News

ಭಾರತಕ್ಕೆ ಪ್ರತಿಸ್ಪರ್ಧಿಯೇ ಇಲ್ಲ, ವಿಶ್ವಸಂಸ್ಥೆ ಭದ್ರತಾ ಮಂಡಳಿಗೆ ಮತ್ತೆ ಭಾರತ!

ವಿಶ್ವಸಂಸ್ಥೆ: ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಐದು ತಾತ್ಕಾಲಿಕ ಸದಸ್ಯತ್ವಕ್ಕಾಗಿ ಜೂನ್ 17 ರಂದು ಚುನಾವಣೆ ನಡೆಸಲು ವಿಶ್ವಸಂಸ್ಥೆ ನಿರ್ಧರಿಸಿದೆ. 

ಏಷ್ಯಾ ಪೆಸಿಫಿಕ್ ವಲಯದ ಸ್ಥಾನಕ್ಕೆ ಭಾರತ ಏಕಮಾತ್ರ ಸ್ಪರ್ಧಿಯಾಗಿರುವುದರಿಂದ ಚುನಾವಣೆ ಕೇವಲ ಔಪಚಾರಿಕ ಪ್ರಕ್ರಿಯೆ ಎಂಬಂತೆ ಕಾಣಿಸುತ್ತಿದೆ.

ಕೋವಿಡ್-19 ಹಿನ್ನೆಲೆಯಲ್ಲಿ ಚುನಾವಣೆಗೆ ವಿಶ್ವಸಂಸ್ಥೆ ವಿಶೇಷ ವ್ಯವಸ್ಥೆ ಮಾಡುತ್ತಿದೆ. ಈ ಸಂಬಂಧ 193 ಸದಸ್ಯ ದೇಶಗಳ ಸಭೆಯಲ್ಲಿ ಚುನಾವಣಾ ಪ್ರಕ್ರಿಯೆಯ ಕುರಿತು ವಿಶೇಷ ನಿರ್ಣಯ ಅಂಗೀಕರಿಸಿದೆ. 

2021-22ರ ಅವಧಿಗೆ ಏಷ್ಯಾ ಪೆಸಿಫಿಕ್ ಸ್ಥಾನಕ್ಕೆ ಭಾರತದ ನಾಮ ನಿರ್ದೇಶನವನ್ನು, ಕಳೆದ ವರ್ಷ ಜೂನ್ ನಲ್ಲಿ ಚೀನಾ, ಪಾಕಿಸ್ತಾನ ಸೇರಿ  55 ದೇಶಗಳು ಬೆಂಬಲಿಸಿದ್ದವು. ಭಾರತ ಕೊನೆಯ ಬಾರಿಗೆ 2011-12ರಲ್ಲಿ ಭದ್ರತಾ ಮಂಡಳಿ ತಾತ್ಕಾಲಿಕ ಸದಸ್ಯ ದೇಶವಾಗಿ ಸೇವೆ ಸಲ್ಲಿಸಿತ್ತು.

Follow us on Social media

About the author

×

Hello!

If you want to receive regular new updates, please click whatsapp icon and save our number on your phone. You will be getting regular news updates on WhatsApp.

×