Breaking News

ಖೇಲ್ ರತ್ನ ಪ್ರಶಸ್ತಿಗೆ ಹಿಟ್ ಮ್ಯಾನ್ ರೋಹಿತ್ ಶರ್ಮಾ ಹೆಸರು ಶಿಫಾರಸು!

ಮುಂಬೈ: ಟೀಂ ಇಂಡಿಯಾದ ಏಕದಿನ ತಂಡದ ಉಪ ನಾಯಕ, ಆರಂಭಿಕ ಆಟಗಾರ ರೋಹಿತ್ ಶರ್ಮಾ ಅವರನ್ನು ಪ್ರತಿಷ್ಠಿತ ಖೇಲ್ ರತ್ನ ಪ್ರಶಸ್ತಿ 2020ಕ್ಕೆ ಶಿಫಾರಸು ಮಾಡಲಾಗಿದೆ ಎಂದು ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ) ಶನಿವಾರ ಪ್ರಕಟಿಸಿದೆ.

ಅಲ್ಲದೆ, ಇಶಾಂತ್ ಶರ್ಮಾ, ಶಿಖರ್ ಧವನ್ ಮತ್ತು ಮಹಿಳಾ ಕ್ರಿಕೆಟರ್ ದೀಪ್ತಿ ಶರ್ಮಾ ಅವರನ್ನು  ಅರ್ಜುನ ಪ್ರಶಸ್ತಿಗೆ ನಾಮಕರಣಗೊಳಿಸಲಾಗಿದೆ.

ಕೇಂದ್ರ ಸರ್ಕಾರದ ಯುವಜನ  ವ್ಯವಹಾರಗಳು, ಕ್ರೀಡಾ ಸಚಿವಾಲಯ 2016ರ ಜನವರಿ 1 ರಿಂದ 2019ರ ಡಿಸೆಂಬರ್ 31ರವರೆಗೆ ಈ ಪ್ರಶಸ್ತಿಗಳಿಗೆ ಅರ್ಜಿಗಳನ್ನು ಆಹ್ವಾನಿಸಿದೆ. ಆ ಸಂಬಂಧ ಕ್ರೀಡಾ ಸಚಿವಾಲಯ ನಿಗಧಿಪಡಿಸಿದ ಅವಧಿಯಲ್ಲಿ ರೋಹಿತ್ ಶರ್ಮಾ ಟಿ20 ಕ್ರಿಕೆಟ್‌ನಲ್ಲಿ ನಾಲ್ಕು ಶತಕ,  8 ಏಕದಿನ ಪಂದ್ಯಗಳಲ್ಲಿ 150 ಕ್ಕಿಂತ ಹೆಚ್ಚು ರನ್ ಗಳಿಸುವ ಮೂಲಕ  ಪ್ರಶಸ್ತಿಗೆ ಆರ್ಹತೆ ಪಡೆದುಕೊಂಡಿದ್ದಾರೆ.

Follow us on Social media

About the author