ಉಡುಪಿ: ಮಹಿಳೆಯೊಬ್ಬರಿಗೆ ಜೀವಬೆದರಿಕೆ ಹಾಕಿ ಅವಾಚ್ಯ ಶಬ್ದಗಳಿಂದ ನಿಂದಿಸಿರುವ ಬಗ್ಗೆ ಉಡುಪಿ ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಂಗಳೂರಿನ ಪೂರ್ಣಿಮಾ ಅವರು 9 ವರ್ಷಗಳ ಹಿಂದೆ ಅರುಣ್ ಅವರನ್ನು ಪ್ರೀತಿಸಿ ಮದುವೆಯಾಗಿದ್ದರು. ಬಳಿಕ ಗಂಡನೊಂದಿಗೆ ಮೂಡುಬೆಳ್ಳೆ ತಿರ್ಲಪಲ್ಕೆಯಲ್ಲಿದ್ದರು.
ದಿಶಾ, ನಿಶಾ, ಅನಿಲ್, ಯಶೋದರ ಮತ್ತು ದೀಕ್ಷಿತ್ ಅವರು ಫೋನ್ ಮಾಡಿ ಪೂರ್ಣಿಮಾ ಹಾಗೂ ಅವರ ಪತಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಜೀವ ಬೆದರಿಕೆ ಹಾಕಿದ್ದಾರೆ. ಇದರಿಂದ ಹೆದರಿದ ಪೂರ್ಣಿಮಾ ತನ್ನ ತಾಯಿ ಮನೆಯಲ್ಲಿ ವಾಸಮಾಡಿಕೊಂಡಿದ್ದರು.
ಇತ್ತೀಚೆಗೆ ಪತಿಯ ಮನೆಗೆ ಹೋಗಿ ಒಬ್ಬಳೇ ಇರುವಾಗ ಆರೋಪಿಗಳು ಬಾಗಿಲು ಬಡಿದು ಹೆದರಿಸಿದ್ದಾರೆ. ಅಲ್ಲದೆ ಮತ್ತೆ ದೂರವಾಣಿ ಕರೆಮಾಡಿ ಬೆದರಿಕೆ ಹಾಕಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
Follow us on Social media