ಮಂಗಳೂರು: ಮದುವೆ ವಿಚಾರವಾಗಿ ನಡೆದ ಕಲಹ ಕೊಲೆಯಲ್ಲಿ ಅಂತ್ಯವಾದ ಘಟನೆ ನಗರದ ಹೊರವಲಯದ ವಳಚ್ಚಿಲ್ ಎಂಬಲ್ಲಿ ಮೇ 22ರ ಗುರುವಾರ ನಡೆದಿದೆ.
ಮೂಡುಶೆಡ್ಡೆ ಎದರುಪದವು ನಿವಾಸಿ ಸುಲೈಮಾನ್ (50) ಮೃತ ವ್ಯಕ್ತಿ. ಸಂಬಂಧಿ, ಆರೋಪಿ ಮುಸ್ತಫಾ (30) ಚೂರಿಯಿಂದ ಇರಿದು ಕೊಲೆ ಮಾಡಿ ಪರಾರಿಯಾಗಲು ಯತ್ನಿಸಿದ್ದನು.
ಮಂಗಳೂರು ಗ್ರಾಮಾಂತರ ಪೋಲಿಸರು ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಸುಲೈಮಾನ್ ಸಂಬಂಧಿ ಮುಸ್ತಫಾ ಎಂಬವರ ಮದುವೆಯನ್ನು ನೆರವೇರಿಸಿದ್ದರು. ಇಬ್ಬರ ನಡುವೆ ಮದುವೆ ಸಂದರ್ಭದಲ್ಲಿ ವೈಮನಸ್ಸು ಉಂಟಾಗಿತ್ತು. ಇದೇ ವಿಚಾರವಾಗಿ ಮುಸ್ತಫಾ ಜೊತೆ ಮಾತುಕತೆಗೆ ತನ್ನ ಇಬ್ಬರು ಪುತ್ರರೊಂದಿಗೆ ಸುಲೈಮಾನ್ ಬಂದಿದ್ದರು. ಈ ವೇಳೆ ಮಾತಿಗೆ ಮಾತು ಬೆಳೆದು ಮುಸ್ತಫಾ ಸುಲೈಮಾನ್ಗೆ ಚೂರಿಯಿಂದ ಇರಿದಿದ್ದಾನೆ.
ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ಹೋಗುವ ದಾರಿ ಮಧ್ಯೆ ಸುಲೈಮಾನ್ ಮೃತಪಟ್ಟರು ಎಂದು ತಿಳಿದು ಬಂದಿದೆ.
Follow us on Social media