ಪಡುಬಿದ್ರಿ: ಇಲ್ಲಿನ ಪೆಟ್ರೋಲ್ ಪಂಪ್ವೊಂದರ ಬಳಿ ಬುಧವಾರದ ಬೆಳಗ್ಗೆ ಟೆಂಪೋ ಟ್ರಾವೆಲರ್(ಟಿಟಿ) ವಾಹನವೊಂದು ರಾಷ್ಟ್ರೀಯ ಹೆದ್ದಾರಿ 66ರ ಉಡುಪಿ ಮಂಗಳೂರು ಏಕಮುಖ ರಸ್ತೆಯಲ್ಲಿ ಕಂಟೈನರ್ ಲಾರಿಗೆ ಹಿಂಬದಿಯಿಂದ ಢಿಕ್ಕಿಯಾಗಿ ನಾಲ್ವರು ಮಕ್ಕಳ ಸಹಿತ ಕೇರಳ ಮೂಲದ ಸುಮಾರು 15 ಮಂದಿಗೆ ಗಾಯಗಳಾಗಿವೆ.
ಟಿಟಿ ಚಾಲಕ ಜಿತಿನ್ ಕೆ. ಪಿ. ಸಹಿತ ಬೇಬಿ ನಿಹಾಲ್ (3), ಮಾಸ್ಟರ್ ನಾವಿಕ್ (4), ಧನ್ವಿಷ್ (6), ಬೇಬಿ ಅಲಂಕೃತಾ (8) ಶೃತಿ (33), ರಮ್ಯಾ(43), ಐಶ್ವಯಾ (35), ಸುಮತಿ (54), ಮಾಳವಿಕಾ (28), ಶಾಂತಾ (56) ವಿನಿತ್ (33), ಶರತ್ (34), ಅಶ್ರಫ್ (51), ರಂಜಿತ್ (38), ವಿನೀಷ್(38) ಗಾಯಗೊಂಡರು. ಅವರನ್ನು ಸಾರ್ವಜನಿಕರ ಸಹಕಾರದೊಂದಿಗೆ ಮುಕ್ಕದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಗೋವಾ ಪ್ರವಾಸಕ್ಕೆ ಹೋಗಿ ವಾಪಸಾಗುತ್ತಿದ್ದಾಗ ಈ ಅಪಘಾತ ಸಂಭವಿಸಿದೆ. ಅಪಘಾತದ ತೀವ್ರತೆಗೆ ಟೆಂಪೋ ಟ್ರಾವೆಲರ್ ಸಂಪೂರ್ಣ ಜಖಂಗೊಂಡಿದೆ. ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Follow us on Social media