ಬಂಟ್ವಾಳ: ಮಾದಕ ವಸ್ತು ಸೇವಿಸುವ ಜೊತೆಗೆ ಅದನ್ನು ಮಾರುವ ಉದ್ದೇಶದಿಂದ ಅವಿತುಕೊಂಡಿದ್ದ ಮೂವರು ಆರೋಪಿಗಳು ಸಹಿತ ಸೊತ್ತುಗಳನ್ನು ಬಂಟ್ವಾಳ ನಗರ ಪೊಲೀಸರು ವಶಪಡಿಸಿಕೊಂಡ ಘಟನೆ ನಡೆದಿದೆ.
ಪ್ರಕರಣದಲ್ಲಿ ಆರೋಪಿಗಳಾದ ನಂದಾವರ ಬಸ್ತಿಗುಡ್ಡೆ ನಿವಾಸಿಗಳಾದ ಮೊಹಮ್ಮದ್ ಇಮ್ಮಿಯಾಜ್, ಯೂನಸ್, ಪುತ್ತೂರು ಪುರುಷರಕಟ್ಟೆ ನಿವಾಸಿ ಮೊಹಮ್ಮದ್ ಇಕ್ಬಾಲ್ ಬಂಧಿತರು.
ಬಂಧಿತರಿಂದ ಎಂಡಿಎಂ ಮಾದಕ ಸೊತ್ತು, ಪ್ಲಾಸ್ಟಿಕ್ ಕವರ್, ಕಾರು, ಮೊಬೈಲ್ಗಳನ್ನು ವಶಪಡಿಸಿಕೊಂಡಿದ್ದಾರೆ. ಪಿಎಸ್ಐ ರಾಮಕೃಷ್ಣ ಅವರು ಗಸ್ತು ತಿರುಗುತ್ತಿದ್ದಾಗ ಆರೋಪಿಗಳ ಕುರಿತು ಅನುಮಾನಗೊಂಡು ವಿಚಾರಿಸಿದಾಗ ಪ್ರಕರಣ ಬೆಳಕಿಗೆ ಬಂದಿದೆ.
Follow us on Social media