ಕ್ರೈಸ್ತರ ನೂತನ ವಿಶ್ವ ಗುರುವಾಗಿ ಕಾರ್ಡಿನಲ್ ರಾಬರ್ಟ್ ಫ್ರಾನ್ಸಿಸ್ ಅವರನ್ನು ಆಯ್ಕೆ ಮಾಡಲಾಗಿದೆ.
ವಾಟಿಕನ್ ಸಿಟಿಯಲ್ಲಿರುವ ಸಿಸ್ಟೀನ್ ಚಾಪೆಲ್ ಚಿಮಣಿಯಿಂದ ಶ್ವೇತ ವರ್ಣದ ಹೊಗೆ ಹೊರಹೊಮ್ಮುತ್ತಿದ್ದಂತೆ ಸೇಂಟ್ ಪೀಟರ್ಸ್ ಚೌಕದಲ್ಲಿ ಸೇರಿದ್ದ ಸಾವಿರಾರು ಕ್ರೈಸ್ತ ವಿಶ್ವಾಸಿಗಳು ನೂತನ ಪೋಪ್ ಆಯ್ಕೆಯನ್ನು ಸಂಭ್ರಮಿಸಿದರು.
ಹೊಸದಾಗಿ ಆಯ್ಕೆಯಾದ ಪೋಪ್ ತ್ವರಿತವಾಗಿ ಸಾಂಪ್ರದಾಯಿಕ ಪಾಪಲ್ ವಸ್ತ್ರಗಳನ್ನು ಧರಿಸಿ, ಅವರ ಪವಿತ್ರ ಕಚೇರಿಗೆ ಸಾಂಕೇತಿಕ ಹೆಜ್ಜೆ ಇಡಲಿದ್ದಾರೆ. ಹಿರಿಯ ಕಾರ್ಡಿನಲ್ ಡಿಯಕನ್ ಸೇಂಟ್ ಪೀಟರ್ಸ್ ಬೆಸಿಲಿಕಾದ ಕೇಂದ್ರ ಬಾಲ್ಕನಿಯಲ್ಲಿ ಐತಿಹಾಸಿಕ ಧಾರ್ಮಿಕ ಘೋಷಣೆ ಉದ್ಘರಿಸುತ್ತಾ ಹೊರಬಂದರು.
“ಹ್ಯಾಬೆಮಸ್ ಪಾಪಮ್” (“ನಮಗೆ ಪೋಪ್ ಇದ್ದಾರೆ”), ಎಂಬ ಘೋಷಣೆಗಳು ಹೊರಹೊಮ್ಮುತ್ತಿದ್ದಂತೆ ಪೋಪ್ ಅವರ ಜನ್ಮ ಹೆಸರು ಮತ್ತು ಅವರು ಆಯ್ಕೆ ಮಾಡಿದ ಪಾಪಲ್ ಹೆಸರನ್ನು ಘೋಷಿಸಿಲಾಯಿತು.
Follow us on Social media