Breaking News

ಕೋವಿಡ್ ಪರಿಹಾರ ನಿಧಿಗೆ ಉದಾರ ದೇಣಿಗೆ ನೀಡುವಂತೆ ಮುಖ್ಯಮಂತ್ರಿ ಮನವಿ

ಬೆಂಗಳೂರು : ಕೊರೋನಾ ವೈರಾಣು ನಿಯಂತ್ರಣಕ್ಕೆ ಸರ್ಕಾರದೊಂದಿಗೆ ಕೈಜೋಡಿಸುವಂತೆ ಮನವಿ ಮಾಡಿರುವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಕೋವಿಡ್ ಪರಿಹಾರ ನಿಧಿಗೆ ದೇಣಿಗೆ ನೀಡುವಂತೆ ಮನವಿ ಮಾಡಿದ್ದಾರೆ.
ಕೋವಿಡ್‌19 ಎಂಬ ವೈರಾಣು ವಿಶ್ವದೆಲ್ಲೆಡೆ ಹರಡುತ್ತಿರುವ ಸಾಂಕ್ರಾಮಿಕ ರೋಗದಿಂದ ಗಣನೀಯ ಪ್ರಮಾಣದಲ್ಲಿ ಜನರು ಸಾವಿಗೀಡಾಗುತ್ತಿದ್ದು, ಈ ಸಾಂಕ್ರಾಮಿಕ ರೋಗವು ಕರ್ನಾಟಕ ರಾಜ್ಯದಲ್ಲೂ ಕಂಡುಬಂದಿದೆ. ಈ ರೋಗವನ್ನು ತಡೆಗಟ್ಟಲು ಸರ್ಕಾರವು ಯುದ್ಧೋಪಾದಿಯಲ್ಲಿ ಕ್ರಮಕೈಗೊಳ್ಳುತ್ತಿದ್ದು, ಈವೈರಾಣು ಹರಡುವುದನ್ನು ನಿಯಂತ್ರಿಸಲು ಮಹತ್ವದ ನಿರ್ಧಾರಗಳನ್ನು ಕೈಗೊಂಡಿರುತ್ತದೆ. ಈ ರೋಗದಿಂದ ಬಳಲುತ್ತಿರುವ ಸಾರ್ವಜನಿಕರಿಗೆ ವೈದ್ಯೋಪಚಾರಗಳನ್ನು ಸರ್ಕಾರದ ವತಿಯಿಂದ ಮಾಡಿಸಲಾಗುತ್ತಿದ್ದು, ರೋಗವನ್ನು ಪತ್ತೆ ಹಚ್ಚಲು ಹೆಚ್ಚಿನ ಪ್ರಯೋಗಾಲಯಗಳನ್ನು ಸ್ಥಾಪಿಸಲಾಗಿರುತ್ತದೆ. ಈ ಎಲ್ಲಾ ಸರ್ಕಾರದ ಕಾರ್ಯತಂತ್ರಗಳನ್ನು ಮನಗಂಡು ಈ ವೈರಾಣು ಹರಡುವುದನ್ನು ತಡೆಗಟ್ಟಲು ತಾವು ಸರ್ಕಾರದೊಂದಿಗೆ ಕೈಜೋಡಿಸಬೇಕೆಂದು ಹಾಗೂ ಕಾಲ ಕಾಲಕ್ಕೆ ಸರ್ಕಾರದ ವತಿಯಿಂದ ನೀಡಲಾಗುವ ಸೂಚನೆಗಳನ್ನು ಪಾಲಿಸಬೇಕೆಂದು ವಿನಂತಿಸಿದೆ. ಈ ಕಾರ್ಯಕ್ಕಾಗಿ ದೇಣಿಗೆ ಸಲ್ಲಿಸಲು ಇಚ್ಛಿಸಲು ದಾನಿಗಳು ಈ ಕೆಳಗಿನ ಅಧಿಕೃತ ಬ್ಯಾಂಕ್ ಖಾತೆಗೆ ದೇಣಿಗೆಯನ್ನು ಸಲ್ಲಿಸಬಹುದು. ಈ ಖಾತೆಗೆ ಧನಾದೇಶ/ಬೇಡಿಕೆ ಹುಂಡಿ/ ವಿದ್ಯುನ್ಮಾನ ಮೂಲಕ ದೇಣಿಗೆ ಸಲ್ಲಿಸಬಹುದು.
ಖಾತೆಯ ಹೆಸರು: Chief Minister Relief Fund Covid-19
ಬ್ಯಾಂಕ್ ಹೆಸರು: SBI (State Bank oF India)
ಶಾಖೆ: Vidhana soudha Branch
ಖಾತೆ ಸಂಖ್ಯೆ; 39234923151, ಐಎಫ್‌ಎಸ್‌ಸಿ ಕೋಡ್‌: SBIN0040277, ಎಂಐಸಿಆರ್ ಸಂಖ್ಯೆ 560002419, ಚೆಕ್‌, ಡಿಡಿ ಕಳುಹಿಸಬೇಕಾದ ವಿಳಾಸ: ನಂ.235-ಎ, 2ನೆ ಮಹಡಿ, ಮುಖ್ಯಮಂತ್ರಿಗಳ ಪರಿಹಾರ ನಿಧಿ ಶಾಖೆ, ವಿಧಾನಸೌಧ, ಬೆಂಗಳೂರು-560001
ಈ ರೀತಿ ಸಲ್ಲಿಸುವ ದೇಣಿಗೆಗೆ, ಆದಾಯ ತೆರಿಗೆ ಕಾಯ್ದೆ 80 ಜಿ(2)ರಡಿ ತೆರಿಗೆ ವಿನಾಯಿತಿ ಇದೆ. ಆದಾಯ ತೆರಿಗೆ ವಿನಾಯಿತಿ ಪಡೆಯಲು PAN NO.AAAGC1692P ಅಥವಾ GGGGG0000G ಅನ್ನು ಬಳಸಬಹುದು ಎಂದು ಮುಖ್ಯಮಂತ್ರಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.

Follow us on Social media

About the author

×

Hello!

If you want to receive regular new updates, please click whatsapp icon and save our number on your phone. You will be getting regular news updates on WhatsApp.

×