Breaking News

ಇಂದು ಲೋಕಸಭೆಯಲ್ಲಿ ವಕ್ಫ್​ ಬಿಲ್ ಮಂಡನೆ!

ಇಂದು ಲೋಕಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್​ಡಿಎ ಸರ್ಕಾರ ವಕ್ಫ್ ಕಾನೂನು ತಿದ್ದುಪಡಿ​​ ಬಿಲ್ ಮಂಡನೆಗೆ ಮುಂದಾಗಿದೆ.

ಈ ಹಿಂದೆಯೇ ಈ ಬಗ್ಗೆ ಯೋಜನೆಯೊಂದನ್ನು ರೂಪಿಸಿದ್ದ ಎನ್​ಡಿಎ ಸರ್ಕಾರ, ಈ ಬಾರಿ ಮಸೂದೆಯನ್ನು ಲೋಕಸಭೆ ಹಾಗೂ ರಾಜ್ಯಸಭೆ ಎರಡು ಕಡೆ ಬಹುಮತದಿಂದ ಮಸೂದೆಯನ್ನು ಅಂಗೀಕಾರ ಮಾಡಲು ಸಜ್ಜಾಗಿದೆ. ಲೋಕಸಭೆಯಲ್ಲಿ ಮಸೂದೆ ಅಂಗೀಕಾರಕ್ಕೆ ಬೇಕಾದ ಬಹುಮತ ಎನ್​ಡಿಎ ಬಳಿ ಇದೆ.

ಲೋಕಸಭೆಯಲ್ಲಿ ಪ್ರಸ್ತುತ 542 ಸಂಸದರ ಸಂಖ್ಯೆಯಿದೆ. ಅದರಲ್ಲಿ ಎನ್​ಡಿಎ 293 ಸ್ಥಾನಗಳ ಬಲ ಹೊಂದಿದೆ. ವಕ್ಫ್​​ ಕಾನೂನು ಅಂಗೀಕರಾಕ್ಕೆ ಬೇಕಾಗಿರುವುದು ಕೇವಲ 272 ಮತಗಳು. ಹೀಗಾಗಿ ಲೋಕಸಭೆಯಲ್ಲಿ ಬಿಜೆಪಿ ನೇತೃತ್ವದ ಎನ್​ಡಿಎ ಪಡೆ ಸುರಕ್ಷಿತ ಬಹುಮತವನ್ನು ಹೊಂದಿದೆ. ಲೋಸಕಭೆಯಲ್ಲಿ ಎನ್​ಡಿಎಯನ್ನು ಬೆಂಬಲಿಸುವ 293 ಸಂಸದರಲ್ಲಿ 240 ಸದಸ್ಯರು ಬಿಜೆಪಿಯವರೇ ಆಗಿದ್ದಾರೆ. ಉಳಿದಂತೆ ತೆಲಗು ದೇಶಂ ಪಾರ್ಟಿಯಿಂದ 16 ಜೆಡಿಯು ಪಕ್ಷದಿಂದ 12, ಶಿವಸೇನೆಯಿಂದ 7, ಲೋಕ ಜನಶಕ್ತಿ (ರಾಮ್ ವಿಲಾಸ್)ದಿಂದ 5 ಮತ್ತು ಆರ್​ಎಲ್​​ಡಿ, ಜೆಡಿಎಸ್​ ಜೆಎಸ್​ಪಿ ಇತರ ಪಕ್ಷಗಳಿಂದ ತಲಾ ಇಬ್ಬರು ಸದಸ್ಯರನ್ನು ಹೊಂದಿದೆ. ಇನ್ನು ನಿತೀಶ್ ಕುಮಾರ್ ಅವರ ಜೆಡಿಯು ಕೂಡ ಮಸೂದೆಗೆ ತನ್ನ ಬೆಂಬಲವನ್ನು ಸೂಚಿಸಿದೆ.

ಲೋಕಸಭೆಯಲ್ಲಿ ಇಂದು ಮಂಡನೆಯಗುತ್ತಿರುವ ವಕ್ಫ್​ ಕಾನೂನು ತಿದ್ದುಪಡಿ ಮಸೂದೆಯನ್ನು ವಿಪಕ್ಷಗಳ ಬಲವಾಗಿ ವಿರೋಧಿಸಿವೆ. ಇದು ಅಸಂವಿಧಾನಿಕ ಮತ್ತು ಮುಸ್ಲಿಂ ಸಮುದಾಯದ ಹಿತಾಸಕ್ತಿಗಳಿಗೆ ಹಾನಿಕಾರಕ ಎಂದು ಖಂಡಿಸಿವೆ. ಹಲವಾರು ಪ್ರಮುಖ ಮುಸ್ಲಿಂ ಸಂಘಟನೆಗಳು ಮಸೂದೆಯನ್ನು ವಿರೋಧಿಸಿವೆ. ವಕ್ಫ್​ ಮಸೂದದೆಯ ವಿರುದ್ಧದ ಇಂಡಿಯ ಬಣದ ಅಭಿಯಾನದಲ್ಲಿ ಮುಂಚೂಣಿಯಲ್ಲಿರುವ ಕಾಂಗ್ರೆಸ್​ ಲೋಕಸಭೆಯಲ್ಲಿ 99 ಸಂಸದರನ್ನು ಹೊಂದಿದ್ದು, ಸಮಾಜವಾದಿ ಪಕ್ಷ 37, ಟಿಎಂಸಿ 28, ಡಿಎಂಕೆ 22, ಶಿವಸೇನೆ(ಯುಬಿಟಿ)9, ಎನ್​ಸಿಪಿ-ಎಸ್​ಪಿ 8, ಸಿಪಿಐಎಂ 4, ಆರ್​​​ಜೆಡಿ 4, ಎಎಪಿ 3, ಜೆಎಂಎಂ 3, ಐಯುಎಂಎಲ್​ 3, ಜೆಕೆ ನ್ಯಾಷನಲ್ ಕಾನ್ಫರನ್ಸ್ 2, ಮತ್ತು ಇತರ 13 ಸ್ಥಾನಗಳನ್ನು ಹೊಂದಿವೆ. ಇದು ಎನ್​ಡಿಎಗೆ ಬಲವಾದ 293 ಸ್ಥಾನಗಳ ವಿರುದ್ಧ 235 ಸ್ಥಾನಗಳನ್ನು ಹೊಂದಿದೆ.

Follow us on Social media

About the author

×

Hello!

If you want to receive regular new updates, please click whatsapp icon and save our number on your phone. You will be getting regular news updates on WhatsApp.

×