ಉಡುಪಿ: ಉಡುಪಿ ಕೆಥೊಲಿಕ್ ಧರ್ಮಪ್ರಾಂತದ ನೂತನ ಕುಲಪತಿಯಾಗಿ ವಂ.ಸ್ಟೀಫನ್ ಡಿಸೋಜಾ ಅವರನ್ನು ನೇಮಕಗೊಳಿಸಿ ಧರ್ಮಾಧ್ಯಕ್ಷ ಅ.ವಂ.ಡಾ.ಜೆರಾಲ್ಡ್ ಐಸಾಕ್ ಲೋಬೊ ಆದೇಶ ಹೊರಡಿಸಿದ್ದಾರೆ.
ಸೋಮವಾರ ಉಡುಪಿ ಧರ್ಮಾಧ್ಯಕ್ಷರ ನಿವಾಸ ಚಾಪೆಲ್ನಲ್ಲಿ ನಡೆದ ಸರಳ ಧಾರ್ಮಿಕ ವಿಧಿ ಸಮಾರಂಭದಲ್ಲಿ ವಂ.ಸ್ಟೀಫನ್ ಡಿಸೋಜಾ ಅವರು ನೂತನ ಕುಲಪತಿಯಾಗಿ ಅಧಿಕಾರ ಸ್ವೀಕರಿಸಿದರು.
ಧರ್ಮಾಧ್ಯಕ್ಷ ಅತಿ ವಂ. ಡಾ. ಜೆರಾಲ್ಡ್ ಐಸಾಕ್ ಲೋಬೊ ನೂತನ ಕುಲಪತಿಗಳಿಗೆ ಅಧಿಕಾರ ಮತ್ತು ಗೌಪ್ಯತೆಯ ಪ್ರಮಾಣವಚನ ಬೋಧಿಸಿದರು. ನಿರ್ಗಮನ ಕುಲಪತಿ ವಂ. ಡಾ.ರೋಶನ್ ಡಿಸೋಜಾ ಅವರು ನೂತನ ಕುಲಪತಿಗಳಿಗೆ ಕಡತಗಳನ್ನು ಹಸ್ತಾಂತರಿಸುವ ಮೂಲಕ ಅಧಿಕಾರವನ್ನು ಹಸ್ತಾಂತರಿಸಿದರು.
Follow us on Social media