Breaking News

ಪಿಜಿ ಬಗ್ಗೆ ಗೂಗಲ್‌ನಲ್ಲಿ ಕಡಿಮೆ ರೇಟಿಂಗ್: ಮಾಲಕರಿಂದ ವಿದ್ಯಾರ್ಥಿಗೆ ಥಳಿತ

ಮಂಗಳೂರು: ಗೂಗಲ್‌ನಲ್ಲಿ ಸಿಂಗಲ್ ಸ್ಟಾರ್ ರೇಟಿಂಗ್
ನೀಡಿದ್ದಕ್ಕೆ ಕಾಲೇಜು ವಿದ್ಯಾರ್ಥಿಗೆ ಹಾಸ್ಟೆಲ್ ಮಾಲಕರು ಮತ್ತು ಅವರ ಸಹಚರರು ಮಾರಣಾಂತಿಕ ಹಲ್ಲೆ
ನಡೆಸಿದ ಘಟನೆ ಮಂಗಳೂರಿನಲ್ಲಿ ನಡೆದಿದೆ.

ಕಲಬುರಗಿ ಮೂಲದ ಇಂಜಿನಿಯರಿಂಗ್ ವಿದ್ಯಾರ್ಥಿ ವಿಕಾಸ್ (18) ಹಲ್ಲೆಗೊಳಗಾದವರು.

ಕಳೆದ ಆರು ತಿಂಗಳಿನಿಂದ ಕದ್ರಿಯ ಬಾಯ್ಸ್ ಪಿಜಿಯಲ್ಲಿ ವಾಸವಾಗಿದ್ದ ವಿಕಾಸ್, ಅಲ್ಲಿನ ಅವ್ಯವಸ್ಥೆಗಳ ಬಗ್ಗೆ ಬೇಸತ್ತು ಬೇರೆ ಕೋಣೆಗೆ ಸ್ಥಳಾಂತರಗೊಂಡಿದ್ದರು. ಪಿಜಿಯ ಊಟದಲ್ಲಿ ಹುಳುಗಳು, ಕೊಳಕು ಶೌಚಾಲಯ ಸೇರಿದಂತೆ ಅಲ್ಲಿನ ವಾತಾವರಣದ ಬಗ್ಗೆ ಗೂಗಲ್‌ನಲ್ಲಿ ಸಿಂಗಲ್ ಸ್ಟಾರ್ ರೇಟಿಂಗ್ ನೀಡಿ ವಿಕಾಸ್ ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದರು. ಇದರಿಂದ ಕೋಪಗೊಂಡ ಪಿಜಿ ಮಾಲಕ ಸಂತೋಷ್ ಮತ್ತು ಅವರ ಸಹಚರರು ಮಾರ್ಚ್ 17ರ ರಾತ್ರಿ ವಿಕಾಸ್‌ನನ್ನು ಅಡ್ಡಗಟ್ಟಿ ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ.

ರೇಟಿಂಗ್ ತೆಗೆದುಹಾಕುವಂತೆ ಬೆದರಿಕೆ ಹಾಕಿದ್ದ ಸಂತೋಷ್,
ವಿಕಾಸ್ ನಿರಾಕರಿಸಿದಾಗ ಹಲ್ಲೆ ನಡೆಸಿದ್ದಾರೆ ಎಂದು
ಆರೋಪಿಸಲಾಗಿದೆ. ಹಲ್ಲೆಯಿಂದ ಗಾಯಗೊಂಡಿರುವ ವಿಕಾಸ್ ಕದ್ರಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

Follow us on Social media

About the author