Breaking News

ಕಡಬ : 21 ನಕಲಿ ಖಾತೆ ತೆರೆದು ಲಕ್ಷಾಂತರ ನಗದು ವರ್ಗಾವಣೆ ಆರೋಪ : ಬ್ಯಾಂಕ್ ಮೆನೇಜರ್ ಅಮಾನತು

ಕಡಬ : ಬ್ಯಾಂಕೊಂದರಲ್ಲಿ 21 ನಕಲಿ ಖಾತೆ ತೆರೆದು ಹಣ ಜಮಾವಣೆ ಮಾಡಿ ಅದನ್ನು ಬೇರೆ ಖಾತೆಗಳಿಗೆ ಅಕ್ರಮವಾಗಿ ವರ್ಗಾಯಿಸಿದ ಪ್ರಕರಣವೊಂದು ದಕ್ಷಿಣ ಕನ್ನಡ ಕಡಬ ತಾಲೂಕಿನ ರಾಷ್ಟ್ರೀಕೃತ ಬ್ಯಾಂಕಿನಲ್ಲಿ ಬೆಳಕಿಗೆ ಬಂದಿದೆ.

ಕಡಬ ತಾಲೂಕಿನ ರಾಮಕುಂಜದಲ್ಲಿರುವ ಇಂಡಿಯನ್‌ ಓವರ್‌ಸೀಸ್‌ ಬ್ಯಾಂಕ್ ನ ಶಾಖೆಯಲ್ಲಿ ಶಾಖಾ ವ್ಯವಸ್ಥಾಪಕರಾಗಿ ಕೆಲಸನಿರ್ವಹಿಸುತ್ತಿದ್ದ ಚೇತನ್‌ ಶರ್ಮಾ ಎಂಬಾತ ಆರೋಪಿ.

ಈ ಬಗ್ಗೆ  ಮಂಗಳೂರಿನ ಇಂಡಿಯನ್‌ ಓವರ್‌ ಸಿಸ್‌ ಬ್ಯಾಂಕ್‌ ರೆಜಿನಲ್‌ ಆಫೀಸ್‌ ನ  ಸಿನಿಯರ್‌ ರೆಜಿನಲ್‌ ಮ್ಯಾನೇಜರ್  ಅಮೀತ್‌ ಕುಮಾರ ಎಂಬವರು ಕಡಬ ಠಾಣೆಗೆ ದೂರು ನೀಡಿದ್ದು ಪ್ರಕರಣ ದಾಖಲಾಗಿದೆ.

ಆರೋಪಿತನಾದ ಚೇತನ್‌ ಶರ್ಮಾ  ಎಂಬಾತ   ಸದ್ರಿ ಬ್ಯಾಂಕ್‌ನಲ್ಲಿ  ಮಹೇಶ್‌, ಸವಿತ ಶರ್ಮಾ, ರೇಣುಕ, ಅಕ್ಷಯ್‌.ಎಸ್, ನಿಖಿತಾ ಎಸ್, ರಾಹುಲ್‌, ಎಸ್, ಉಮಾ ಚತುರ್ವೇದಿ ಎಂಬವರ ಹೆಸರಿನಲ್ಲಿ 21 ನಕಲಿ ಲೋನ್‌ ಖಾತೆಗಳನ್ನು ತೆರೆದು ಸದ್ರಿ ಖಾತೆಗಳಿಗೆ ಒಟ್ಟು71,29,350/- ರೂಗಳನ್ನು ಯಾವುದೇ  ಕೆ ವೈ ಸಿ ಪ್ರಕ್ರಿಯ ದಾಖಲೆ, ಖಾತೆ ತೆರೆಯುವ ದಾಖಲೆಗಳನ್ನು ಪಡೆಯದೇ ಸಾಲ ಮಂಜೂರು ಮಾಡಿದ್ದ.

ಬಳಿಕ  ಖಾತೆಗಳಿಗೆ  ಹಣ ಜಮಾವಣೆ ಮಾಡಿ  ತದನಂತರ ಬೇರೆ ಬೇರೆ ಖಾತೆಗಳಿಗೆ ಅಕ್ರಮವಾಗಿ ಹಣ ವರ್ಗಾವಣೆ ಮಾಡಿದ್ದ ಎಂದು ದೂರಿನಲ್ಲಿ ವಿವರಿಸಲಾಗಿದೆ.

21 ನಕಲಿ ಲೋನ್‌ ಖಾತೆಗಳಿಗೆ ಆರೋಪಿತನು ಒಟ್ಟು 51,31,141/- ರೂಗಳನ್ನು ಜಮೆ ಮಾಡಿದ್ದು  ಬ್ಯಾಂಕ್   ಆಡಿಟ್‌ ಸಮಯದಲ್ಲಿ ಅಕ್ರಮವಾಗಿ ಬೇರೆ ಬೇರೆ ಖಾತೆಗಳನ್ನು ಹಣ ಸಂದಾಯ ಮಾಡಿದ ಬಗ್ಗೆ ಪ್ರಾಥಮಿಕ ವಿಚಾರಣೆಯಲ್ಲಿ ಕಂಡು ಬಂದಿದೆ.

ಹೀಗಾಗಿ  ಆರೋಪಿತನನ್ನು 2022 ರ  ಮೇ 19 ರಂದು ಸೇವೆಯಿಂದ ಅಮಾನತು ಮಾಡಲಾಗಿದೆ. ಆರೋಪಿತನು ತೆರೆದಿದ್ದ ನಕಲಿ ಖಾತೆಗಳಿಂದ 19,98,208/- ರೂ ಲೋನ್‌ ಬಾಕಿ ಇರುತ್ತದೆ.

ಆದುದರಿಂದ ನಕಲಿ ಖಾತೆಗಳನ್ನು ತೆರೆದು ಯಾವುದೇ ರೀತಿಯ ಕ್ರಯ, ಆಸ್ತಿಪತ್ರ, ಮೌಲ್ಯಮಾಪನ ವರದಿ, ಕಾನೂನು ಅಭಿಪ್ರಾಯ, ಅಡಮಾನ ತೆಗೆದುಕೊಳ್ಳದೇ ವಸತಿ ಸಾಲ ಮತ್ತು ಭೂಮಿ ಲಕ್ಷ್ಮೀ ಸಾಲ ಇತ್ಯಾದಿ ಸಾಲಗಳನ್ನು ಮಂಜೂರು ಮಾಡಿ ಬ್ಯಾಂಕ್‌ ಹಣವನ್ನು ದುರುಪಯೋಗಪಡಿಸಿಕೊಂಡಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ  .

ಈ ಬಗ್ಗೆ ಕಡಬ ಪೊಲೀಸ್‌‌ ಠಾಣಾ ಅ.ಕ್ರ 96/2022 ಕಲಂ: ಕಲಂ: 409. 420 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

Follow us on Social media

About the author

×

Hello!

If you want to receive regular new updates, please click whatsapp icon and save our number on your phone. You will be getting regular news updates on WhatsApp.

×