Breaking News

ಕಾಸರಗೋಡು: ವಿದ್ಯಾರ್ಥಿನಿ ಆತ್ಮಹತ್ಯೆ – ಬೆದರಿಕೆಯೊಡ್ಡಿದ ಆರೋಪಿ ಶುಹೈಬ್ ಅರೆಸ್ಟ್

ಕಾಸರಗೋಡು: ಜಿಲ್ಲೆಯ ಹೊಸದುರ್ಗ ಅಲಾಮಿಪಳ್ಳಿ ನಿವಾಸಿ ಕಾಲೇಜು ವಿದ್ಯಾರ್ಥಿನಿ ನಂದ ವಿನೋದಿನಿ(20) ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಯುವಕನೋರ್ವನನ್ನು ಪೊಲೀಸರು ಬಂಧಿಸಿದ್ದಾರೆ.ಹೊಸದುರ್ಗ ಕಲ್ಲೂರಾವಿ ಮೌಲಕರಿಯತ್‌ ಹೌಸ್‌ನ ಎ.ಕೆ.ಅಬ್ದುಲ್‌ ಸುಹೈಬ್‌(20) ಬಂಧಿತ ಆರೋಪಿಯಾಗಿದ್ದು ಹೊಸದುರ್ಗ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.
ಆತ್ಮಹತ್ಯೆಗೆ ಪ್ರೇರಣೆ ನೀಡಿದ ಸೆಕ್ಷನ್‌ ಪ್ರಕಾರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು.
ಪಡನ್ನಕ್ಕಾಡ್‌ ಇ.ಕೆ.ನಾಯನಾರ್‌ ಆರ್ಟ್ಸ್ ಆ್ಯಂಡ್‌ ಸಯನ್ಸ್‌ ಕಾಲೇಜು ವಿದ್ಯಾರ್ಥಿನಿಯಾಗಿದ್ದ ನಂದ ವಿನೋದಿನಿ ಅಕ್ಟೋಬರ್‌ 31 ರಂದು ಸಂಜೆ ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದರು.
ತಾನು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ನೇಣು ಬಿಗಿಯುವ ಮುನ್ನ ವೀಡಿಯೋ ಕಾಲ್‌ ಮಾಡಿ ಅಬ್ದುಲ್‌ ಸುಹೈಬ್‌ಗ ತಿಳಿಸಿದ್ದಳೆಂಬ ಶಂಕೆಯನ್ನು ಪೊಲೀಸರು ವ್ಯಕ್ತಪಡಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ಆತ್ಮಹತ್ಯೆಗೆ ಪ್ರೇರಣೆ ನೀಡಿದ ಸೆಕ್ಷನ್‌ ಪ್ರಕಾರ ಪೊಲೀಸರು ಕೇಸು ದಾಖಲಿಸಿದ್ದರು. ಈತನನ್ನು ಸಮಗ್ರ ವಿಚಾರಣೆಗೊಳಪಡಿಸಿದ ಬಳಿಕ ಸುಹೈಬ್‌ನನ್ನು ಪೊಲೀಸರು ಬಂಧಿಸಿದ್ದಾರೆ. ಆತ್ಮಹತ್ಯೆ ಮಾಡಿಕೊಂಡ ನಂದ ವಿನೋದಿನಿ ಮತ್ತು ಅಬ್ದುಲ್‌ ಸುಹೈಬ್‌ನ ಮೊಬೈಲ್‌ ಫೋನ್‌ಗಳನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದು ಸಮಗ್ರವಾಗಿ ಪರಿಶೀಲಿಸುತ್ತಿದ್ದಾರೆ.

Follow us on Social media

About the author