ಮಂಗಳೂರು: ನಾಡ ದೋಣಿ ಮಗುಚಿ ಇಬ್ಬರು ನಾಪತ್ತೆಯಾದ ಘಟನೆ ತೋಟ ಬೆಂಗ್ರೆ ಅಳಿವೆ ಬಾಗಿಲು ಸಮೀಪ ಮೇ 30ರ ಶುಕ್ರವಾರ ಸಂಭವಿಸಿದೆ.
ತೋಟ ಬೆಂಗ್ರೆ ಅಳಿವೆ ಬಾಗಿಲು ಸಮೀಪ ಮೀನು ಹಿಡಿಯುತ್ತಿದ್ದಾಗ ಜೋರಾದ ಮಳೆ ಗಾಳಿಯ ರಭಸಕ್ಕೆ ದೋಣಿಯ ಮಗುಚಿದ್ದು, ದೋಣಿಯಲ್ಲಿದ್ದವರು ನಾಪತ್ತೆಯಾಗಿದ್ದಾರೆ ಎಂದು ತಿಳಿದು ಬಂದಿದೆ.
ದೋಣಿಯಲ್ಲಿದ್ದ ಯಶವಂತ, ಕಮಲಾಕ್ಷ ಎಂಬವರು ನಾಪತ್ತೆಯಾಗಿದ್ದಾರೆ. ನಾಡ ದೋಣಿಯ ಪೆಟ್ರೋಲ್ ಟ್ಯಾಂಕ್ ತೋಟ ಬೆಂಗ್ರೇ ಸಮೀಪ ದಡಕ್ಕೆ ಬಂದು ಬಿದ್ದಿದೆ. ನಾಡ ದೋಣಿ ಇನ್ನೂ ಪ್ತೆಯಾಗಿಲ್ಲ. ಗ್ರಾಮಸ್ಥರು ಹುಡುಕಾಟ ಆರಂಭಿಸಿದ್ದಾರೆ ಎನ್ನಲಾಗಿದೆ.
Follow us on Social media